Skip to the contentಪುಟದ ಒಳಕ್ಕೆ ನೇರವಾಗಿ ಹೋಗಿ

From the bookಪುಸ್ತಕದಿಂದ

Medical glossaryವೈದ್ಯಕೀಯ ಪದಕೋಶ

The medical and scientific words used in the book, explained in plain Kannada. This is the appendix from the book itself, so a word you meet on a prescription or a laboratory report can be looked up without owning a copy. ಪುಸ್ತಕದಲ್ಲಿ ಬಳಸಿರುವ ವೈದ್ಯಕೀಯ ಮತ್ತು ವೈಜ್ಞಾನಿಕ ಪದಗಳ ಸರಳ ವಿವರಣೆ. ಇದು ಪುಸ್ತಕದ ಅನುಬಂಧವೇ. ಚೀಟಿಯಲ್ಲೋ ವರದಿಯಲ್ಲೋ ಕಂಡ ಪದವನ್ನು ಪುಸ್ತಕ ಇಲ್ಲದೆಯೂ ಇಲ್ಲಿ ಹುಡುಕಬಹುದು.

ಗ್ಲೂಕೋಸ್ Glucose #
ಆಹಾರ ಜೀರ್ಣವಾದಾಗ ಉತ್ಪತ್ತಿಯಾಗುವ ಸರಳ ಸಕ್ಕರೆ; ದೇಹದ ಜೀವಕೋಶಗಳಿಗೆ ಶಕ್ತಿ ನೀಡುವ ಮುಖ್ಯ ಇಂಧನ (ಅಳತೆ: mg/dL).
ಇನ್ಸುಲಿನ್ Insulin #
ಮೇದೋಜೀರಕ ಗ್ರಂಥಿಯು ಉತ್ಪಾದಿಸುವ ಹಾರ್ಮೋನ್. ಇದು ಗ್ಲೂಕೋಸ್ ಜೀವಕೋಶಗಳ ಒಳಗೆ ಪ್ರವೇಶಿಸಲು ಬಾಗಿಲು ತೆರೆಯುವ 'ಬೀಗದ ಕೈ'.
ಮೇದೋಜೀರಕ ಗ್ರಂಥಿ Pancreas #
ಹೊಟ್ಟೆಯ ಹಿಂಭಾಗದಲ್ಲಿರುವ ಇನ್ಸುಲಿನ್ ಮತ್ತು ಜೀರ್ಣಕಾರಿ ರಸಗಳನ್ನು ಉತ್ಪಾದಿಸುವ ಕಾರ್ಖಾನೆ.
ಇನ್ಸುಲಿನ್ ವಿರೋಧ Insulin Resistance #
ದೇಹದಲ್ಲಿ ಇನ್ಸುಲಿನ್ ಇದ್ದರೂ, ಜೀವಕೋಶಗಳು ಅದಕ್ಕೆ ಕಿವುಡಾಗಿ ಗ್ಲೂಕೋಸ್ ಹೀರಿಕೊಳ್ಳಲು ನಿರಾಕರಿಸುವ ಸ್ಥಿತಿ.
ಪ್ರಿ-ಡಯಾಬಿಟಿಸ್ Pre-diabetes #
ಪೂರ್ಣ ಮಧುಮೇಹದ ಹಂತ ತಲುಪದ ಮಧ್ಯಂತರ ಸ್ಥಿತಿ (ಟ್ರಾಫಿಕ್ ಸಿಗ್ನಲ್‌ನ ಹಳದಿ ದೀಪ).
ಟೈಪ್ 1 ಮಧುಮೇಹ #
ರಕ್ಷಣಾ ವ್ಯವಸ್ಥೆಯೇ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ನಾಶಮಾಡುವ ಸ್ಥಿತಿ; ಇನ್ಸುಲಿನ್ ಚುಚ್ಚುಮದ್ದು ಜೀವನಾಧಾರ.
ಟೈಪ್ 2 ಮಧುಮೇಹ #
ಇನ್ಸುಲಿನ್ ವಿರೋಧ ಮತ್ತು ಕ್ರಮೇಣ ಬೀಟಾ ಕೋಶಗಳ ದಣಿವುಗಳಿಂದ ವಯಸ್ಕರಲ್ಲಿ ಕಾಣಿಸಿಕೊಳ್ಳುವ ಮಧುಮೇಹ (ಶೇ. 90ಕ್ಕೂ ಹೆಚ್ಚು ಮಂದಿಗೆ ಇರುವ ಮಧುಮೇಹ).
ಗರ್ಭಾವಸ್ಥೆಯ ಮಧುಮೇಹ GDM #
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಏರುಪೇರಿನಿಂದ ತಾಯಿಯಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಳ್ಳುವ ಮಧುಮೇಹ.
ಹಿಮೋಗ್ಲೋಬಿನ್ ಎ1ಸಿ HbA1c #
ಕಳೆದ 90 ದಿನಗಳ (3 ತಿಂಗಳ) ಸರಾಸರಿ ಸಕ್ಕರೆ ನಿಯಂತ್ರಣವನ್ನು ತಿಳಿಸುವ ನಿಖರ ರಕ್ತ ಪರೀಕ್ಷೆ.
ಹೈಪೋಗ್ಲೈಸೀಮಿಯಾ (ಲೋ ಗ್ಲೂಕೋಸ್) #
ರಕ್ತದಲ್ಲಿ ಗ್ಲೂಕೋಸ್ ಮಟ್ಟ 70 mg/dL ಗಿಂತ ಕಡಿಮೆಯಾಗಿ ನಡುಕ, ಬೆವರು ಮತ್ತು ಪ್ರಜ್ಞಾಹೀನತೆ ಉಂಟುಮಾಡುವ ತುರ್ತು ಸ್ಥಿತಿ.
ಡಿಕೆಎ Diabetic Ketoacidosis #
ಇನ್ಸುಲಿನ್ ತೀವ್ರ ಕೊರತೆಯಿಂದ ರಕ್ತದಲ್ಲಿ ಆಮ್ಲೀಯ ಕೀಟೋನ್‌ಗಳು ಮಿತಿಮೀರಿ ಉಂಟಾಗುವ ಗಂಭೀರ ತುರ್ತು ಸ್ಥಿತಿ.
ಎಚ್‌ಎಚ್‌ಎಸ್ Hyperosmolar Hyperglycemic State #
ರಕ್ತದಲ್ಲಿ ಗ್ಲೂಕೋಸ್ 600 mg/dL ದಾಟಿ ತೀವ್ರ ನಿರ್ಜಲೀಕರಣ ಉಂಟುಮಾಡುವ ತುರ್ತು ಸ್ಥಿತಿ.
ಯುಗ್ಲೈಸೀಮಿಕ್ ಡಿಕೆಎ Euglycemic DKA #
ಸಕ್ಕರೆ ಮಟ್ಟ ತೀರಾ ಹೆಚ್ಚಾಗದಿದ್ದರೂ ಕೀಟೋಆಸಿಡೋಸಿಸ್ ಉಂಟಾಗುವ ಅಪರೂಪದ ಸ್ಥಿತಿ (SGLT2i ಮಾತ್ರೆಗಳ ಎಚ್ಚರಿಕೆ).
ಜಿಎಲ್‌ಪಿ-1 ಔಷಧಗಳು GLP-1 RAs #
ವಾರಕ್ಕೊಮ್ಮೆ ಅಥವಾ ದಿನಕ್ಕೊಮ್ಮೆ ಪಡೆಯುವ ಇಂಜೆಕ್ಷನ್ (ಈಗ ಮಾತ್ರೆ ರೂಪದಲ್ಲೂ); ತೂಕ ಇಳಿಸಿ, ಹೃದಯ-ಕಿಡ್ನಿ ರಕ್ಷಿಸುವ ಆಧುನಿಕ ಔಷಧಗಳು (ಅಧ್ಯಾಯ 38).
ಎಸ್ಜಿಎಲ್‌ಟಿ-2 ಇನ್‌ಹಿಬಿಟರ್‌ಗಳು SGLT2 Inhibitors #
ಮೂತ್ರದ ಮೂಲಕ ಹೆಚ್ಚುವರಿ ಗ್ಲೂಕೋಸ್ ಹೊರಹಾಕಿ ಕಿಡ್ನಿ ಮತ್ತು ಹೃದಯ ರಕ್ಷಿಸುವ ಆಧುನಿಕ ಮಾತ್ರೆಗಳು.
ಟೈಮ್ ಇನ್ ರೇಂಜ್ TIR #
ದಿನದ 24 ಗಂಟೆಯಲ್ಲಿ ರಕ್ತದ ಗ್ಲೂಕೋಸ್ 70 ರಿಂದ 180 mg/dL ನಾರ್ಮಲ್ ಮಿತಿಯಲ್ಲಿರುವ ಸಮಯದ ಶೇಕಡಾವಾರು (ಗುರಿ > 70%).
ಗ್ಲೈಸೆಮಿಕ್ ಇಂಡೆಕ್ಸ್ GI #
ಆಹಾರವು ರಕ್ತದಲ್ಲಿ ಗ್ಲೂಕೋಸ್ ಅನ್ನು ಎಷ್ಟು ವೇಗವಾಗಿ ಹೆಚ್ಚಿಸುತ್ತದೆ ಎಂಬುದನ್ನು ಅಳೆಯುವ ಸೂಚ್ಯಂಕ.
ನಾರಿನಂಶ Fiber #
ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ರಕ್ತಕ್ಕೆ ಗ್ಲೂಕೋಸ್ ಹನಿಹನಿಯಾಗಿ ಬಿಡುಗಡೆಯಾಗುವಂತೆ ಮಾಡುವ ಸಸ್ಯಜನ್ಯ ನಾರು.
ಸಿಜಿಎಂ Continuous Glucose Monitoring #
ಚರ್ಮದ ಅಡಿಯಲ್ಲಿ ಸಂವೇದಕ ಅಳವಡಿಸಿ, ದಿನದ 24 ಗಂಟೆಯೂ ನಿರಂತರವಾಗಿ ಗ್ಲೂಕೋಸ್ ದಾಖಲಿಸುವ ಆಧುನಿಕ ತಂತ್ರಜ್ಞಾನ.
ಡಯಾಬಿಟಿಕ್ ರೆಟಿನೋಪತಿ #
ಕಣ್ಣಿನ ಹಿಂಭಾಗದ ರೆಟಿನಾದ ಸೂಕ್ಷ್ಮ ರಕ್ತನಾಳಗಳು ಹಾನಿಗೊಂಡು ದೃಷ್ಟಿಹಾನಿ ಉಂಟಾಗುವ ಸ್ಥಿತಿ.
ಡಯಾಬಿಟಿಕ್ ನೆಫ್ರೋಪತಿ #
ಕಿಡ್ನಿಯ ಸೂಕ್ಷ್ಮ ಫಿಲ್ಟರ್‌ಗಳು ಹಾನಿಗೊಂಡು ಮೂತ್ರದಲ್ಲಿ ಪ್ರೋಟೀನ್ ಸೋರಿಕೆಯಾಗುವ ಸ್ಥಿತಿ.
ಡಯಾಬಿಟಿಕ್ ನ್ಯೂರೋಪತಿ #
ನರಗಳು ಹಾನಿಗೊಂಡು ಪಾದಗಳಲ್ಲಿ ಸ್ಪರ್ಶಜ್ಞಾನ ಮರೆಯಾಗುವುದು ಅಥವಾ ಮರಗಟ್ಟುವಿಕೆ ಉಂಟಾಗುವ ಸ್ಥಿತಿ.
ಫ್ಯಾಟಿ ಲಿವರ್ MASLD #
ಲಿವರ್ ಜೀವಕೋಶಗಳಲ್ಲಿ ಹೆಚ್ಚುವರಿ ಕೊಬ್ಬು ಶೇಖರಣೆಯಾಗುವ ಸ್ಥಿತಿ.
ಪಿರಿಯೊಡಾಂಟಿಟಿಸ್ #
ಒಸಡು ಮತ್ತು ದವಡೆಯ ಮೂಳೆಗೆ ಉಂಟಾಗುವ ತೀವ್ರ ಸ್ವರೂಪದ ಬ್ಯಾಕ್ಟೀರಿಯಾ ಸೋಂಕು.
ನಿಮಿರುವಿಕೆ ದೋಷ Erectile Dysfunction #
ನರ ಮತ್ತು ರಕ್ತನಾಳಗಳ ದೋಷದಿಂದ ಉಂಟಾಗುವ ಲೈಂಗಿಕ ಅಶಕ್ತತೆ.
ಡಯಾಬಿಟಿಸ್ ಬರ್ನ್‌ಔಟ್ #
ದೀರ್ಘಕಾಲದ ಮಧುಮೇಹ ನಿರ್ವಹಣೆಯಿಂದ ಉಂಟಾಗುವ ತೀವ್ರ ಮಾನಸಿಕ ಮತ್ತು ಭಾವನಾತ್ಮಕ ದಣಿವು.
ಮಧುಮೇಹ ರಿಮಿಷನ್ / ರಿವರ್ಸಲ್ #
ತೂಕ ಇಳಿಕೆ ಮತ್ತು ಶಿಸ್ತಿನಿಂದ ಔಷಧಗಳಿಲ್ಲದೆ ರಕ್ತದ ಗ್ಲೂಕೋಸ್ ಮಟ್ಟವನ್ನು ನಾರ್ಮಲ್ ಆಗಿ ಇಟ್ಟುಕೊಳ್ಳುವ ಸ್ಥಿತಿ.
ಬೇಸಲ್ ಇನ್ಸುಲಿನ್ Basal Insulin #
ಊಟಕ್ಕೆ ಸಂಬಂಧಿಸದೆ ದಿನವಿಡೀ ಹಿನ್ನೆಲೆಯಲ್ಲಿ ಕೆಲಸ ಮಾಡುವ ದೀರ್ಘಕಾಲಿಕ ಇನ್ಸುಲಿನ್ (ಗ್ಲಾರ್ಜಿನ್, ಡೆಗ್ಲುಡೆಕ್). ಉಪವಾಸ ಅಥವಾ ಅಸ್ವಸ್ಥತೆಯ ದಿನಗಳಲ್ಲೂ ಇದನ್ನು ನಿಲ್ಲಿಸಬಾರದು.
ಪ್ರಾಂಡಿಯಲ್ (ಬೋಲಸ್) ಇನ್ಸುಲಿನ್ #
ಊಟದ ಜೊತೆಗೆ ತೆಗೆದುಕೊಳ್ಳುವ ಶಾರ್ಟ್-ಆಕ್ಟಿಂಗ್ ಇನ್ಸುಲಿನ್; ಊಟ ಮಾಡದಿದ್ದಾಗ ಇದನ್ನು ತೆಗೆದುಕೊಳ್ಳಬಾರದು.
ಪ್ರೀಮಿಕ್ಸ್ ಇನ್ಸುಲಿನ್ Premixed 30/70, 25/75 #
ಹಿನ್ನೆಲೆಯ ಮತ್ತು ಊಟದ ಇನ್ಸುಲಿನ್ ಎರಡೂ ಬೆರೆತಿರುವ ಇಂಜೆಕ್ಷನ್; ಉಪವಾಸ ಅಥವಾ ಅಸ್ವಸ್ಥತೆಯ ದಿನ ಡೋಸ್ ಬದಲಾವಣೆ ವೈದ್ಯರಿಂದ ಮಾತ್ರ.
ಸಲ್ಫೋನಿಲ್ಯೂರಿಯಾ Sulfonylurea #
ಗ್ಲಿಮೆಪಿರೈಡ್, ಗ್ಲಿಕ್ಲಾಜೈಡ್‌ನಂತಹ ಮಾತ್ರೆಗಳು; ಇನ್ಸುಲಿನ್ ಸ್ರವಿಸುವಂತೆ ಮಾಡುತ್ತವೆ, ಆದ್ದರಿಂದ ಊಟ ತಪ್ಪಿದರೆ ಲೋ ಗ್ಲೂಕೋಸ್ ಅಪಾಯ ಹೆಚ್ಚು.
ಐಡಿಆರ್‌ಎಸ್ IDRS #
ವಯಸ್ಸು, ಸೊಂಟದ ಸುತ್ತಳತೆ, ದೈಹಿಕ ಶ್ರಮ ಮತ್ತು ಕುಟುಂಬದ ಇತಿಹಾಸ ನೋಡಿ ಮಧುಮೇಹದ ಅಪಾಯವನ್ನು ಅಳೆಯುವ ಭಾರತೀಯ ಸ್ಕೋರ್ ಕಾರ್ಡ್ (ಅನುಬಂಧ 6).
ಡಿಪ್ಸಿ DIPSI #
ಗರ್ಭಿಣಿಯರಲ್ಲಿ ಮಧುಮೇಹ ಪತ್ತೆಗಾಗಿ ಭಾರತದಲ್ಲಿ ಬಳಸುವ ಏಕ-ಹಂತದ 75 ಗ್ರಾಂ ಗ್ಲೂಕೋಸ್ ಪರೀಕ್ಷೆ.
ಸಾರ್ಕೊಪೀನಿಯಾ Sarcopenia #
ವಯಸ್ಸಾದಂತೆ ಮಾಂಸಖಂಡಗಳು ಕರಗುವುದು; ಇದರಿಂದ ಗ್ಲೂಕೋಸ್ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.
ಮೆಟಬಾಲಿಕ್ ಸರ್ಜರಿ #
ತೀವ್ರ ಬೊಜ್ಜು ಮತ್ತು ಹತೋಟಿಗೆ ಬಾರದ ಮಧುಮೇಹ ಇರುವವರಲ್ಲಿ ಮಾಡುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ.

A word that is not hereಇಲ್ಲಿ ಇಲ್ಲದ ಪದ

This list holds the words the book uses. If you have met one it does not explain, write and say so: it is the kind of gap the next edition is made of. ಪುಸ್ತಕದಲ್ಲಿ ಬಳಸಿರುವ ಪದಗಳಷ್ಟೇ ಈ ಪಟ್ಟಿಯಲ್ಲಿವೆ. ಇಲ್ಲಿ ವಿವರಿಸದ ಪದ ಎದುರಾದರೆ ಬರೆದು ತಿಳಿಸಿ. ಇಂತಹ ಕೊರತೆಗಳಿಂದಲೇ ಮುಂದಿನ ಆವೃತ್ತಿ ರೂಪುಗೊಳ್ಳುತ್ತದೆ.

Join the MEDiscuss Books list MEDiscuss ಪುಸ್ತಕಗಳ ಸುದ್ದಿ ಪಟ್ಟಿಗೆ ಸೇರಿ

An email when this book is out, and once in a while when there is an update or another MEDiscuss book. A few a year, no more. Your address is not given to anybody, and every email carries an unsubscribe link. ಈ ಪುಸ್ತಕ ಬಂದಾಗ ಒಂದು ಇಮೇಲ್; ಆಮೇಲೆ MEDiscuss ಪುಸ್ತಕಗಳ ಸುದ್ದಿ ಇದ್ದಾಗ ಅಥವಾ ಇನ್ನೊಂದು ಪುಸ್ತಕ ಬಂದಾಗ, ಆಗೊಮ್ಮೆ ಈಗೊಮ್ಮೆ. ವರ್ಷಕ್ಕೆ ಕೆಲವು ಬಾರಿ, ಅಷ್ಟೇ. ನಿಮ್ಮ ವಿಳಾಸವನ್ನು ಯಾರಿಗೂ ಕೊಡುವುದಿಲ್ಲ; ಈ ಪಟ್ಟಿಯಿಂದ ಹೊರಬರುವ ಲಿಂಕ್ ಪ್ರತಿ ಇಮೇಲ್ ಕೊನೆಯಲ್ಲೂ ಇರುತ್ತದೆ.