Reader resourceಓದುಗರ ಪರಿಕರ
The yearly check-up list, and what is due when ವಾರ್ಷಿಕ ಆರೋಗ್ಯ ತಪಾಸಣಾ ಮಾರ್ಗದರ್ಶಿ
Printed in the book as Appendix 1. This is the same text, kept up to date. ಪುಸ್ತಕದಲ್ಲಿ ಅನುಬಂಧ 1 ಆಗಿ ಮುದ್ರಿತವಾಗಿದೆ. ಇದು ಅದೇ ಬರಹ, ಪರಿಷ್ಕರಿಸಿ ಇಡಲಾಗಿದೆ.
Anything you type here stays in this browser on this device. It is never sent anywhere, and nobody else can read it, including us. ನೀವು ಇಲ್ಲಿ ಬರೆಯುವುದೆಲ್ಲಾ ಈ ಸಾಧನದ ಈ ಬ್ರೌಸರ್ನಲ್ಲೇ ಉಳಿಯುತ್ತದೆ. ಅದು ಎಲ್ಲಿಗೂ ಕಳಿಸಲ್ಪಡುವುದಿಲ್ಲ. ನಮಗೂ ಸೇರಿದಂತೆ ಬೇರೆ ಯಾರಿಗೂ ಅದು ಕಾಣುವುದಿಲ್ಲ.
ಮಧುಮೇಹ ಕೇವಲ ರಕ್ತದ ಗ್ಲೂಕೋಸ್ ಮಟ್ಟದ ಏರಿಳಿತವಲ್ಲ; ಅದು ದೇಹದ ಪ್ರಮುಖ ರಕ್ತನಾಳ ಮತ್ತು ನರಗಳ ಮೇಲೆ ಪರಿಣಾಮ ಬೀರುವ ಸ್ಥಿತಿ. ಯಾವುದೇ ತೊಂದರೆಗಳನ್ನು ಆರಂಭಿಕ ಹಂತದಲ್ಲೇ ತಡೆಗಟ್ಟಲು ಈ ಕೆಳಗಿನ ವೇಳಾಪಟ್ಟಿಯಂತೆ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯ.
-
HbA1c (ಮೂರು ತಿಂಗಳ ಸರಾಸರಿ)
- How oftenಎಷ್ಟು ದಿನಗಳಿಗೊಮ್ಮೆ
- ಪ್ರತಿ 3 ತಿಂಗಳಿಗೊಮ್ಮೆ
- Targetಅಪೇಕ್ಷಿತ ಗುರಿ
- < 7.0% (ಹಿರಿಯರು / ದುರ್ಬಲರು: 7.5% – 8.0%, ವೈದ್ಯರ ನಿರ್ಧಾರ)
- Whyಉದ್ದೇಶ
- ಹಿಂದಿನ 90 ದಿನಗಳ ಗ್ಲೂಕೋಸ್ ನಿಯಂತ್ರಣದ ನಿಖರ ಮೌಲ್ಯಮಾಪನ.
-
ರಕ್ತದೊತ್ತಡ (Blood Pressure)
- How oftenಎಷ್ಟು ದಿನಗಳಿಗೊಮ್ಮೆ
- ಪ್ರತಿ ವೈದ್ಯರ ಭೇಟಿಯಲ್ಲೂ
- Targetಅಪೇಕ್ಷಿತ ಗುರಿ
- < 130/80 mmHg
- Whyಉದ್ದೇಶ
- ಪಾರ್ಶ್ವವಾಯು, ಹೃದಯಾಘಾತ ಮತ್ತು ಕಿಡ್ನಿ ಹಾನಿ ತಡೆಗಟ್ಟಲು.
-
ತೂಕ ಮತ್ತು ಸೊಂಟದ ಸುತ್ತಳತೆ
- How oftenಎಷ್ಟು ದಿನಗಳಿಗೊಮ್ಮೆ
- ತಿಂಗಳಿಗೊಮ್ಮೆ
- Targetಅಪೇಕ್ಷಿತ ಗುರಿ
- ಪುರುಷರು < 90 cm, ಮಹಿಳೆಯರು < 80 cm
- Whyಉದ್ದೇಶ
- ಆಂತರಿಕ ಬೊಜ್ಜು ಮತ್ತು ಇನ್ಸುಲಿನ್ ವಿರೋಧ ನಿಯಂತ್ರಣ.
-
ದೇಹದ ತೂಕ ಸೂಚ್ಯಂಕ (BMI)
- How oftenಎಷ್ಟು ದಿನಗಳಿಗೊಮ್ಮೆ
- ತಿಂಗಳಿಗೊಮ್ಮೆ
- Targetಅಪೇಕ್ಷಿತ ಗುರಿ
- 18.5 - 22.9 kg/m² (ಏಷ್ಯಾ-ಭಾರತೀಯ ಮಿತಿ)
- Whyಉದ್ದೇಶ
- ಒಟ್ಟಾರೆ ತೂಕ ನಿರ್ವಹಣೆ ಮತ್ತು ಚಯಾಪಚಯ ಆರೋಗ್ಯ.
-
ಪಾದಗಳ ಸ್ವಯಂ ಪರೀಕ್ಷೆ
- How oftenಎಷ್ಟು ದಿನಗಳಿಗೊಮ್ಮೆ
- ಪ್ರತಿದಿನ ರಾತ್ರಿ
- Targetಅಪೇಕ್ಷಿತ ಗುರಿ
- ಗಾಯ, ಗುಳ್ಳೆ, ಬಿರುಕು ಇರಬಾರದು
- Whyಉದ್ದೇಶ
- ನರಗಳ ಸ್ಪರ್ಶ ದೋಷದಿಂದ ಗಾಯ ಉಲ್ಬಣಿಸುವುದನ್ನು ತಡೆಯಲು.
-
ವೈದ್ಯರಿಂದ ಪಾದಗಳ ನರ ತಪಾಸಣೆ
- How oftenಎಷ್ಟು ದಿನಗಳಿಗೊಮ್ಮೆ
- ವರ್ಷಕ್ಕೊಮ್ಮೆ
- Targetಅಪೇಕ್ಷಿತ ಗುರಿ
- Monofilament / Tuning Fork Normal
- Whyಉದ್ದೇಶ
- ನರ ದೋಷ (Neuropathy) ಆರಂಭದಲ್ಲೇ ಪತ್ತೆಹಚ್ಚಲು.
-
ವಿಟಮಿನ್ ಬಿ12 ಮಟ್ಟ (Vitamin B12)
- How oftenಎಷ್ಟು ದಿನಗಳಿಗೊಮ್ಮೆ
- ವರ್ಷಕ್ಕೊಮ್ಮೆ
- Targetಅಪೇಕ್ಷಿತ ಗುರಿ
- > 300 pg/mL
- Whyಉದ್ದೇಶ
- ದೀರ್ಘಕಾಲ ಮೆಟ್‌ಫಾರ್ಮಿನ್ ತೆಗೆದುಕೊಳ್ಳುವವರಲ್ಲಿ ನರಗಳ ರಕ್ಷಣೆ.
-
ಕಣ್ಣಿನ ರೆಟಿನಾ ತಪಾಸಣೆ (Fundus)
- How oftenಎಷ್ಟು ದಿನಗಳಿಗೊಮ್ಮೆ
- ವರ್ಷಕ್ಕೊಮ್ಮೆ (ಕಣ್ಣಿನ ತಜ್ಞರಿಂದ)
- Targetಅಪೇಕ್ಷಿತ ಗುರಿ
- Retinopathy ಇಲ್ಲದಿರುವುದು
- Whyಉದ್ದೇಶ
- ಕಣ್ಣಿನ ಸೂಕ್ಷ್ಮ ರಕ್ತನಾಳಗಳ ಸೋರಿಕೆ ಮತ್ತು ಅಂಧತ್ವ ತಡೆಯಲು.
-
ಮೂತ್ರದಲ್ಲಿ ಮೈಕ್ರೋ-ಅಲ್ಬುಮಿನ್ (UACR)
- How oftenಎಷ್ಟು ದಿನಗಳಿಗೊಮ್ಮೆ
- ವರ್ಷಕ್ಕೊಮ್ಮೆ
- Targetಅಪೇಕ್ಷಿತ ಗುರಿ
- < 30 mg/g
- Whyಉದ್ದೇಶ
- ಕಿಡ್ನಿ ಫಿಲ್ಟರ್‌ನಿಂದ ಪ್ರೋಟೀನ್ ಸೋರಿಕೆಯನ್ನು ಆರಂಭದಲ್ಲೇ ಗುರುತಿಸಲು.
-
ಸೀರಂ ಕ್ರಿಯೇಟಿನೈನ್ & eGFR
- How oftenಎಷ್ಟು ದಿನಗಳಿಗೊಮ್ಮೆ
- ವರ್ಷಕ್ಕೊಮ್ಮೆ
- Targetಅಪೇಕ್ಷಿತ ಗುರಿ
- ಕ್ರಿಯೇಟಿನೈನ್: 0.7 - 1.2 mg/dL
- Whyಉದ್ದೇಶ
- ಕಿಡ್ನಿಗಳ ಕಾರ್ಯಕ್ಷಮತೆ ಮೌಲ್ಯಮಾಪನ.
-
ಲಿಪಿಡ್ ಪ್ರೊಫೈಲ್ (ಕೊಲೆಸ್ಟ್ರಾಲ್)
- How oftenಎಷ್ಟು ದಿನಗಳಿಗೊಮ್ಮೆ
- ವರ್ಷಕ್ಕೊಮ್ಮೆ
- Targetಅಪೇಕ್ಷಿತ ಗುರಿ
- LDL < 70 mg/dL (ಹೃದಯಾಘಾತ ಆಗಿದ್ದವರಿಗೆ < 55), ವೈದ್ಯರ ನಿರ್ಧಾರ
- Whyಉದ್ದೇಶ
- ಹೃದಯದ ರಕ್ತನಾಳಗಳಲ್ಲಿ ಕೊಬ್ಬಿನ ಬ್ಲಾಕೇಜ್ ತಡೆಗಟ್ಟಲು.
-
ಇಸಿಜಿ (ECG)
- How oftenಎಷ್ಟು ದಿನಗಳಿಗೊಮ್ಮೆ
- ವೈದ್ಯರ ಸಲಹೆಯಂತೆ / ಲಕ್ಷಣ ಇದ್ದಾಗ
- Targetಅಪೇಕ್ಷಿತ ಗುರಿ
- Normal Sinus Rhythm
- Whyಉದ್ದೇಶ
- ಸೈಲೆಂಟ್ ಹಾರ್ಟ್ ಅಟ್ಯಾಕ್ ಲಕ್ಷಣಗಳ ತಪಾಸಣೆ.
-
ದಂತ ಮತ್ತು ಒಸಡು ತಪಾಸಣೆ
- How oftenಎಷ್ಟು ದಿನಗಳಿಗೊಮ್ಮೆ
- ಪ್ರತಿ 6 ತಿಂಗಳಿಗೊಮ್ಮೆ
- Targetಅಪೇಕ್ಷಿತ ಗುರಿ
- ಒಸಡಿನ ಸೋಂಕು ಇರಬಾರದು
- Whyಉದ್ದೇಶ
- ಒಸಡಿನ ಸೋಂಕು ಮತ್ತು ರಕ್ತದ ಗ್ಲೂಕೋಸ್ ಏರಿಕೆ ತಡೆಯಲು.
-
ಲಸಿಕೆಗಳು (ಫ್ಲೂ / ನ್ಯುಮೋಕೊಕಲ್)
- How oftenಎಷ್ಟು ದಿನಗಳಿಗೊಮ್ಮೆ
- ಫ್ಲೂ: ವರ್ಷಕ್ಕೊಮ್ಮೆ (ಮಳೆಗಾಲಕ್ಕೆ ಮುನ್ನ); ನ್ಯುಮೋಕೊಕಲ್: ವೈದ್ಯರ ವೇಳಾಪಟ್ಟಿಯಂತೆ
- Targetಅಪೇಕ್ಷಿತ ಗುರಿ
- ಲಸಿಕೆ ಪಡೆದ ದಿನಾಂಕ ದಾಖಲಿಸಿ
- Whyಉದ್ದೇಶ
- ಸೋಂಕು, ನ್ಯುಮೋನಿಯಾ ಮತ್ತು ಡಿಕೆಎ/ಎಚ್‌ಎಚ್‌ಎಸ್ ತುರ್ತುಸ್ಥಿತಿ ತಡೆಯಲು (ಅಧ್ಯಾಯ 23).