Skip to the contentಪುಟದ ಒಳಕ್ಕೆ ನೇರವಾಗಿ ಹೋಗಿ

Reader resourceಓದುಗರ ಪರಿಕರ

Low glucose: emergency first aid and the rule of 15 ಲೋ ಗ್ಲೂಕೋಸ್ ತುರ್ತು ನಿರ್ವಹಣೆ: 15-15 ಸೂತ್ರ

Printed in the book as Appendix 2. This is the same text, kept up to date. ಪುಸ್ತಕದಲ್ಲಿ ಅನುಬಂಧ 2 ಆಗಿ ಮುದ್ರಿತವಾಗಿದೆ. ಇದು ಅದೇ ಬರಹ, ಪರಿಷ್ಕರಿಸಿ ಇಡಲಾಗಿದೆ.

ರಕ್ತದಲ್ಲಿ ಗ್ಲೂಕೋಸ್ ಮಟ್ಟ 70 mg/dL ಗಿಂತ ಕಡಿಮೆಯಾಗುವುದನ್ನು ‘ಲೋ ಗ್ಲೂಕೋಸ್’ (ಹೈಪೋಗ್ಲೈಸೀಮಿಯಾ) ಎನ್ನುತ್ತಾರೆ. ಇದು ಗ್ಲೂಕೋಸ್ ಹೆಚ್ಚಾಗುವುದಕ್ಕಿಂತಲೂ ಹೆಚ್ಚು ತುರ್ತು ಮತ್ತು ತಕ್ಷಣದ ಅಪಾಯಕಾರಿ ಸ್ಥಿತಿ.

1. ಮುನ್ನೆಚ್ಚರಿಕೆಯ ಲಕ್ಷಣಗಳು

  • ತೀವ್ರ ನಡುಕ ಮತ್ತು ಬೆವರುವುದು (ವಿಶೇಷವಾಗಿ ಕುತ್ತಿಗೆ ಮತ್ತು ಹಣೆಯ ಮೇಲೆ)
  • ಅತಿಯಾದ ಹಸಿವು ಮತ್ತು ಎದೆಬಡಿತ ಜೋರಾಗುವುದು
  • ತಲೆತಿರುಗುವಿಕೆ, ದೃಷ್ಟಿ ಮಂಜಾಗುವುದು, ಗೊಂದಲ
  • ಕಿರಿಕಿರಿ, ಅಸಂಬದ್ಧ ಮಾತು, ನಡೆಯುವಾಗ ತೂರಾಟ

2. ತುರ್ತು ನಿರ್ವಹಣೆಯ ‘15-15 ಸೂತ್ರ’ (Rule of 15)

  1. ಹಂತ 1 (ತಕ್ಷಣ ಸೇವಿಸಿ): ಪ್ರಜ್ಞೆ ಇದ್ದರೆ, ತಕ್ಷಣ 15 ಗ್ರಾಂ ವೇಗವಾಗಿ ಕರಗುವ ಸರಳ ಸಕ್ಕರೆ ನೀಡಿ:
    • 3 ಚಮಚ ಸಕ್ಕರೆ ಅಥವಾ ಗ್ಲೂಕೋಸ್ ಪುಡಿಯನ್ನು ಅರ್ಧ ಗ್ಲಾಸ್ ನೀರಿಗೆ ಬೆರೆಸಿ ಕುಡಿಸಿ, ಅಥವಾ
    • ಅರ್ಧ ಲೋಟ (150 ml) ಹಣ್ಣಿನ ಜ್ಯೂಸ್, ಅಥವಾ
    • 3-4 ಗ್ಲೂಕೋಸ್ ಮಿಠಾಯಿಗಳು.

    (ಗಮನಿಸಿ: ಚಾಕೊಲೇಟ್ ತಿನ್ನಬೇಡಿ; ಕೊಬ್ಬು ಸಕ್ಕರೆ ಹೀರಿಕೆಯನ್ನು ನಿಧಾನಗೊಳಿಸುತ್ತದೆ).

  2. ಹಂತ 2 (15 ನಿಮಿಷ ಕಾಯಿರಿ): ಯಾವುದೇ ಘನ ಆಹಾರ ನೀಡದೆ 15 ನಿಮಿಷಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಿರಿ.
  3. ಹಂತ 3 (ಮರು ಪರೀಕ್ಷೆ ಮಾಡಿ): 15 ನಿಮಿಷಗಳ ನಂತರ ಗ್ಲೂಕೋಮೀಟರ್‌ನಲ್ಲಿ ರಕ್ತ ಪರೀಕ್ಷೆ ಮಾಡಿ:
    • ಗ್ಲೂಕೋಸ್ > 70 mg/dL ಆಗಿದ್ದರೆ: ತಕ್ಷಣ ಒಂದು ಸಣ್ಣ ಚಪಾತಿ, ಬ್ರೆಡ್ ಅಥವಾ ನಿಯಮಿತ ಊಟ ನೀಡಿ.
    • ಗ್ಲೂಕೋಸ್ ಇನ್ನೂ < 70 mg/dL ಇದ್ದರೆ: ಹಂತ 1 ಅನ್ನು ಮತ್ತೊಮ್ಮೆ ಪುನರಾವರ್ತಿಸಿ.

ಕುಟುಂಬದವರಿಗೆ ಕಟ್ಟುನಿಟ್ಟಿನ ಜೀವ ರಕ್ಷಕ ಎಚ್ಚರಿಕೆ

  • ಮಾಡಬೇಡಿ: ವ್ಯಕ್ತಿಗೆ ಪ್ರಜ್ಞೆ ತಪ್ಪಿದ್ದರೆ ಬಾಯಿಗೆ ನೀರು, ಹಾಲು ಅಥವಾ ಸಕ್ಕರೆ ತುರುಕಬೇಡಿ; ಅದು ಶ್ವಾಸಕೋಶಕ್ಕೆ ಹೋಗಿ ಉಸಿರುಗಟ್ಟುವ ಅಪಾಯವಿದೆ (Aspiration).
  • ಮಾಡಿ: ಪ್ರಜ್ಞೆ ತಪ್ಪಿದ ತಕ್ಷಣ ವ್ಯಕ್ತಿಯನ್ನು ಎಡಮಗ್ಗುಲಿಗೆ ಮಲಗಿಸಿ (Recovery position), ತಕ್ಷಣ ಹತ್ತಿರದ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ಯಿರಿ (ಅಲ್ಲಿ ನರಕ್ಕೆ ಗ್ಲೂಕೋಸ್ / IV Dextrose ನೀಡಲಾಗುತ್ತದೆ).

Something wrong here?ಇಲ್ಲಿ ಏನಾದರೂ ತಪ್ಪಿದೆಯೇ?

These sheets are corrected the day a mistake is found, which is the reason they are pages and not a file you download once. Corrections already made are listed on the corrections page. ತಪ್ಪು ಕಂಡುಬಂದ ದಿನವೇ ಈ ಪುಟಗಳನ್ನು ತಿದ್ದಲಾಗುತ್ತದೆ. ಒಮ್ಮೆ ಇಳಿಸಿಕೊಳ್ಳುವ ಕಡತವಾಗಿರದೆ ಇವು ಪುಟಗಳಾಗಿರುವುದಕ್ಕೆ ಅದೇ ಕಾರಣ. ಈಗಾಗಲೇ ಮಾಡಿದ ತಿದ್ದುಪಡಿಗಳು ತಿದ್ದುಪಡಿ ಪುಟದಲ್ಲಿವೆ.

The version that works it out for you is Low Glucose: What To Do Now, on Swasthya. ಇದನ್ನು ತಾನೇ ಲೆಕ್ಕ ಹಾಕುವ ಆವೃತ್ತಿ ಸ್ವಾಸ್ಥ್ಯದಲ್ಲಿದೆ: ಲೋ ಗ್ಲೂಕೋಸ್: ಈಗ ಏನು ಮಾಡಬೇಕು?.