Skip to the contentಪುಟದ ಒಳಕ್ಕೆ ನೇರವಾಗಿ ಹೋಗಿ

Reader resourceಓದುಗರ ಪರಿಕರ

Sick day rules, and the emergency medical ID card ಸಿಕ್ ಡೇ ರೂಲ್ಸ್ ಮತ್ತು ತುರ್ತು ವೈದ್ಯಕೀಯ ಗುರುತಿನ ಚೀಟಿ

Printed in the book as Appendix 5. This is the same text, kept up to date. ಪುಸ್ತಕದಲ್ಲಿ ಅನುಬಂಧ 5 ಆಗಿ ಮುದ್ರಿತವಾಗಿದೆ. ಇದು ಅದೇ ಬರಹ, ಪರಿಷ್ಕರಿಸಿ ಇಡಲಾಗಿದೆ.

ಜ್ವರ, ವಾಂತಿ, ಭೇದಿ ಅಥವಾ ಸೋಂಕು ಉಂಟಾದಾಗ ದೇಹದಲ್ಲಿ ಸ್ಟ್ರೆಸ್ ಹಾರ್ಮೋನ್‌ಗಳು ಬಿಡುಗಡೆಯಾಗಿ, ಊಟ ಮಾಡದಿದ್ದರೂ ರಕ್ತದ ಗ್ಲೂಕೋಸ್ ದಿಢೀರನೆ ಏರುತ್ತದೆ.

ಅಸ್ವಸ್ಥತೆಯ ದಿನಗಳಲ್ಲಿ ‘ಸಿಕ್ ಡೇ 5 ಗೋಲ್ಡನ್ ರೂಲ್ಸ್’

  1. ಬೇಸಲ್ ಇನ್ಸುಲಿನ್ ನಿಲ್ಲಿಸಬೇಡಿ: ಊಟ ಕಡಿಮೆ ಇದ್ದರೂ ದೇಹಕ್ಕೆ ಹಿನ್ನೆಲೆಯ ಇನ್ಸುಲಿನ್ ಅತ್ಯಗತ್ಯ. ಪ್ರೀಮಿಕ್ಸ್ (30/70) ಇನ್ಸುಲಿನ್‌ನವರು ಅದೇ ದಿನ ವೈದ್ಯರಿಂದ ಡೋಸ್ ಕೇಳಿ.
  2. ಎಸ್ಜಿಎಲ್‌ಟಿ-2 ಮಾತ್ರೆಗಳು ಮತ್ತು ಮೆಟ್‌ಫಾರ್ಮಿನ್‌ಗೆ ಬ್ರೇಕ್: ನಿರ್ಜಲೀಕರಣ ಅಥವಾ ವಾಂತಿ-ಭೇದಿ ಇದ್ದಾಗ Dapagliflozin ಮುಂತಾದ SGLT2i ಮತ್ತು Metformin ಮಾತ್ರೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ (ಯುಗ್ಲೈಸೀಮಿಕ್ ಡಿಕೆಎ ಮತ್ತು ಲ್ಯಾಕ್ಟಿಕ್ ಆಸಿಡೋಸಿಸ್ ತಡೆಯಲು).
  3. ಪ್ರತಿ 4 ಗಂಟೆಗೊಮ್ಮೆ ಗ್ಲೂಕೋಸ್ ಮತ್ತು ಕೀಟೋನ್ ಪರೀಕ್ಷಿಸಿ: ಗ್ಲೂಕೋಮೀಟರ್ ಬಳಸಿ ಸಕ್ಕರೆ ಮಟ್ಟ ದಾಖಲಿಸಿ. ಟೈಪ್ 1 ಮಧುಮೇಹಿಗಳು ಹಾಗೂ SGLT2i ತೆಗೆದುಕೊಳ್ಳುವವರು ಕೀಟೋನ್ ಪರೀಕ್ಷಿಸಿ.
  4. ನಿರ್ಜಲೀಕರಣ ತಡೆಯಿರಿ: ಗಂಟೆಗೆ ಕನಿಷ್ಠ ಒಂದು ಲೋಟ ನೀರು, ಎಳನೀರು, ತಿಳಿ ಮಜ್ಜಿಗೆ ಅಥವಾ ಓಆರ್‌ಎಸ್ ಸೇವಿಸಿ.
  • ಆಸ್ಪತ್ರೆಗೆ ಧಾವಿಸುವ ಲಕ್ಷಣಗಳು: ಸತತ ವಾಂತಿ, ಉಸಿರಾಟದಲ್ಲಿ ತೊಂದರೆ, ಗೊಂದಲ, ಗ್ಲೂಕೋಸ್ ಮಟ್ಟ ಸತತವಾಗಿ > 300 mg/dL ಅಥವಾ < 70 mg/dL ಆಗಿದ್ದರೆ ತಕ್ಷಣ ತುರ್ತು ಚಿಕಿತ್ಸೆಗೆ ದಾಖಲಾಗಿ.

ಮಧುಮೇಹಿಯ ತುರ್ತು ಪಾಕೆಟ್ ಗುರುತಿನ ಚೀಟಿ (Emergency Medical ID Card)

Fill it in here and print it, or switch on "print an empty copy" above and write on it by hand. Cut along the dashed line; it folds once to fit a wallet. ಇಲ್ಲೇ ತುಂಬಿ ಮುದ್ರಿಸಿ, ಅಥವಾ ಮೇಲಿನ ‘ಖಾಲಿ ಪ್ರತಿ’ ಆಯ್ಕೆ ಬಳಸಿ ಖಾಲಿ ಪ್ರತಿ ಮುದ್ರಿಸಿ ಕೈಯಲ್ಲಿ ಬರೆಯಿರಿ. ಚುಕ್ಕಿ ಗೆರೆಯ ಮೇಲೆ ಕತ್ತರಿಸಿ; ಒಮ್ಮೆ ಮಡಿಸಿದರೆ ಪರ್ಸ್‌ನಲ್ಲಿ ಹಿಡಿಸುತ್ತದೆ.

ತುರ್ತು ವೈದ್ಯಕೀಯ ಗುರುತಿನ ಚೀಟಿ / EMERGENCY MEDICAL ID

ನನಗೆ ಮಧುಮೇಹವಿದೆ (I HAVE DIABETES)

ಚಿಕಿತ್ಸೆ (Treatment)

ಸಾರ್ವಜನಿಕರಿಗೆ ಸೂಚನೆ: ನನಗೆ ತಲೆತಿರುಗಿ ಪ್ರಜ್ಞೆ ತಪ್ಪಿದ್ದರೆ, ಅದು ‘ಲೋ ಗ್ಲೂಕೋಸ್’ ಆಗಿರಬಹುದು. ಪ್ರಜ್ಞೆ ಇದ್ದರೆ ತಕ್ಷಣ ಸಕ್ಕರೆ ನೀರು / ಗ್ಲೂಕೋಸ್ ಕುಡಿಸಿ. ಪ್ರಜ್ಞೆ ಇಲ್ಲದಿದ್ದರೆ ಬಾಯಿಗೆ ಏನನ್ನೂ ಹಾಕದೆ ತಕ್ಷಣ ಆಸ್ಪತ್ರೆಗೆ ಸೇರಿಸಿ.

If I am found unconscious it may be LOW BLOOD SUGAR. If awake, give sugar water / glucose. If unconscious, give nothing by mouth, take me to a hospital.

“ಮಧುಮೇಹವನ್ನು ಗೆಲ್ಲುವ ಮೊದಲ ಹೆಜ್ಜೆ ಔಷಧಿಯಲ್ಲ, ಅರಿವಿನಲ್ಲಿ ಇದೆ.”

Something wrong here?ಇಲ್ಲಿ ಏನಾದರೂ ತಪ್ಪಿದೆಯೇ?

These sheets are corrected the day a mistake is found, which is the reason they are pages and not a file you download once. Corrections already made are listed on the corrections page. ತಪ್ಪು ಕಂಡುಬಂದ ದಿನವೇ ಈ ಪುಟಗಳನ್ನು ತಿದ್ದಲಾಗುತ್ತದೆ. ಒಮ್ಮೆ ಇಳಿಸಿಕೊಳ್ಳುವ ಕಡತವಾಗಿರದೆ ಇವು ಪುಟಗಳಾಗಿರುವುದಕ್ಕೆ ಅದೇ ಕಾರಣ. ಈಗಾಗಲೇ ಮಾಡಿದ ತಿದ್ದುಪಡಿಗಳು ತಿದ್ದುಪಡಿ ಪುಟದಲ್ಲಿವೆ.

The version that works it out for you is Sick Day With Diabetes, on Swasthya. ಇದನ್ನು ತಾನೇ ಲೆಕ್ಕ ಹಾಕುವ ಆವೃತ್ತಿ ಸ್ವಾಸ್ಥ್ಯದಲ್ಲಿದೆ: ಹುಷಾರಿಲ್ಲದ ದಿನ: ಮಧುಮೇಹದ ನಿಯಮಗಳು.

Also on Swasthya: Emergency Medical ID Card. ಸ್ವಾಸ್ಥ್ಯದಲ್ಲಿ ಇದೂ ಇದೆ: ತುರ್ತು ವೈದ್ಯಕೀಯ ಗುರುತಿನ ಚೀಟಿ.