Skip to the toolಪರಿಕರಕ್ಕೆ ನೇರವಾಗಿ ಹೋಗಿ
Keep Swasthya Compass on your phone ಸ್ವಾಸ್ಥ್ಯ ದಿಕ್ಸೂಚಿಯನ್ನು ನಿಮ್ಮ ಫೋನಿನಲ್ಲಿ ಇಟ್ಟುಕೊಳ್ಳಿ Ten seconds of work, nothing to pay, and the tools then open with no signal. ಹತ್ತು ಸೆಕೆಂಡಿನ ಕೆಲಸ, ಹಣ ಕೊಡಬೇಕಿಲ್ಲ, ಆಮೇಲೆ ಸಿಗ್ನಲ್ ಇಲ್ಲದೆಯೂ ಈ ಪರಿಕರಗಳು ತೆರೆಯುತ್ತವೆ.

What this does ಇದರಿಂದ ಏನಾಗುತ್ತದೆ

Swasthya Compass is a website. Your phone can keep it like an app: an icon on the home screen, opening in its own window with no browser bars around it. ಸ್ವಾಸ್ಥ್ಯ ದಿಕ್ಸೂಚಿ ಒಂದು ಜಾಲತಾಣ. ನಿಮ್ಮ ಫೋನ್ ಇದನ್ನು ಆ್ಯಪ್‌ನಂತೆ ಇಟ್ಟುಕೊಳ್ಳಬಲ್ಲದು: ಹೋಮ್ ಸ್ಕ್ರೀನ್ ಮೇಲೆ ಒಂದು ಚಿಹ್ನೆ, ಬ್ರೌಸರಿನ ಪಟ್ಟಿಗಳಿಲ್ಲದೆ ತನ್ನದೇ ಕಿಟಕಿಯಲ್ಲಿ ತೆರೆಯುತ್ತದೆ.

Nothing to download from a store, nothing to pay, no account to make. The steps below put an icon on the home screen and tell the phone to treat these pages as an app. It takes about ten seconds. Delete the icon and it is undone. ಸ್ಟೋರಿನಿಂದ ಡೌನ್‌ಲೋಡ್ ಮಾಡಬೇಕಿಲ್ಲ, ಹಣ ಕೊಡಬೇಕಿಲ್ಲ, ಖಾತೆ ತೆರೆಯಬೇಕಿಲ್ಲ. ಕೆಳಗಿನ ಹಂತಗಳು ಹೋಮ್ ಸ್ಕ್ರೀನ್ ಮೇಲೆ ಒಂದು ಚಿಹ್ನೆ ಇಡುತ್ತವೆ, ಮತ್ತು ಈ ಪುಟಗಳನ್ನು ಆ್ಯಪ್‌ನಂತೆ ನಡೆಸಿಕೊಳ್ಳುವಂತೆ ಫೋನಿಗೆ ಹೇಳುತ್ತವೆ. ಹತ್ತು ಸೆಕೆಂಡಿನ ಕೆಲಸ. ಚಿಹ್ನೆಯನ್ನು ಅಳಿಸಿದರೆ ಮುಗಿಯಿತು.

One tap from the home screen ಹೋಮ್ ಸ್ಕ್ರೀನಿನಿಂದ ಒಂದೇ ಸ್ಪರ್ಶ No address to type and nothing to search for ವಿಳಾಸ ಬರೆಯಬೇಕಿಲ್ಲ, ಹುಡುಕಬೇಕಿಲ್ಲ
Opens without a signal ಸಿಗ್ನಲ್ ಇಲ್ಲದೆಯೂ ತೆರೆಯುತ್ತದೆ A tool you have opened once opens again with no network ಒಮ್ಮೆ ತೆರೆದ ಪರಿಕರ ನೆಟ್‌ವರ್ಕ್ ಇಲ್ಲದೆಯೂ ಮತ್ತೆ ತೆರೆಯುತ್ತದೆ
Keeps itself current ತಾನೇ ನವೀಕರಣಗೊಳ್ಳುತ್ತದೆ A correction reaches you on your next visit. Nothing to install again ತಿದ್ದುಪಡಿ ನಿಮ್ಮ ಮುಂದಿನ ಭೇಟಿಯಲ್ಲಿ ತಲುಪುತ್ತದೆ. ಮತ್ತೆ ಸ್ಥಾಪಿಸಬೇಕಿಲ್ಲ
Almost no storage ಸ್ಥಳ ಬಹುತೇಕ ಬೇಕಿಲ್ಲ The pages you have opened, and nothing else ನೀವು ತೆರೆದಿರುವ ಪುಟಗಳಷ್ಟೇ, ಬೇರೇನೂ ಇಲ್ಲ

The steps ಹಂತಗಳು

The tab below is chosen from the device you are reading on, and the guess is sometimes wrong. Change it if you are reading on one device and installing on another. ನೀವು ಓದುತ್ತಿರುವ ಸಾಧನವನ್ನು ನೋಡಿ ಕೆಳಗಿನ ಆಯ್ಕೆ ತಾನಾಗಿಯೇ ಆಗುತ್ತದೆ. ಕೆಲವೊಮ್ಮೆ ಅದು ತಪ್ಪಾಗುತ್ತದೆ. ಒಂದು ಸಾಧನದಲ್ಲಿ ಓದಿ ಇನ್ನೊಂದರಲ್ಲಿ ಸ್ಥಾಪಿಸುತ್ತಿದ್ದರೆ ಇಲ್ಲಿ ಬದಲಾಯಿಸಿಕೊಳ್ಳಿ.

1 Open Swasthya Compass in Chrome ಕ್ರೋಮ್‌ನಲ್ಲಿ ಸ್ವಾಸ್ಥ್ಯ ದಿಕ್ಸೂಚಿ ತೆರೆಯಿರಿ

Open mediscuss.org/swasthya in Chrome. Edge, Brave and Samsung Internet work the same way. Look at the top of the home page, beside the count of tools. ಕ್ರೋಮ್‌ನಲ್ಲಿ mediscuss.org/swasthya ತೆರೆಯಿರಿ. ಎಡ್ಜ್, ಬ್ರೇವ್, ಸ್ಯಾಮ್‌ಸಂಗ್ ಇಂಟರ್‌ನೆಟ್‌ನಲ್ಲೂ ಇದೇ ರೀತಿ. ಮುಖಪುಟದ ಮೇಲ್ಭಾಗದಲ್ಲಿ, ಪರಿಕರಗಳ ಸಂಖ್ಯೆಯ ಪಕ್ಕದಲ್ಲಿ ನೋಡಿ.

mediscuss.org/swasthya 8 tools8 ಪರಿಕರಗಳು Installಸ್ಥಾಪಿಸಿಕೊಳ್ಳಿ The button sits beside the count of tools. ಪರಿಕರಗಳ ಸಂಖ್ಯೆಯ ಪಕ್ಕದಲ್ಲಿ ಆ ಗುಂಡಿ ಇರುತ್ತದೆ.
2 Tap Install ಸ್ಥಾಪಿಸುವ ಗುಂಡಿ ಒತ್ತಿ

Chrome asks you to confirm, showing the name and the icon. Tap Install. ಕ್ರೋಮ್ ಹೆಸರು ಮತ್ತು ಚಿಹ್ನೆಯನ್ನು ತೋರಿಸಿ ಖಚಿತಪಡಿಸಲು ಕೇಳುತ್ತದೆ. Install ಒತ್ತಿ.

If a small bar offers to install the app, tap that and you are done. If no button shows at all, the site is probably on the home screen already. If it is not, look in Chrome's own menu, the three dots at the top right. It carries Add to Home screen, or Install app. ಆ್ಯಪ್ ಸ್ಥಾಪಿಸಲು ಸಣ್ಣ ಪಟ್ಟಿ ಕೇಳಿದರೆ ಅದನ್ನೇ ಒತ್ತಿ, ಮುಗಿಯಿತು. ಯಾವ ಗುಂಡಿಯೂ ಕಾಣಿಸದಿದ್ದರೆ ಈ ತಾಣ ಈಗಾಗಲೇ ಹೋಮ್ ಸ್ಕ್ರೀನ್ ಮೇಲಿರಬಹುದು. ಇಲ್ಲದಿದ್ದರೆ ಕ್ರೋಮ್‌ನ ಬಲ ಮೇಲ್ಭಾಗದ ಮೂರು ಚುಕ್ಕಿಗಳ ಮೆನು ನೋಡಿ. ಅಲ್ಲಿ Add to Home screen ಅಥವಾ Install app ಇರುತ್ತದೆ.

M Swasthya Compass mediscuss.org Cancel Install Confirm with Install. Install ಒತ್ತಿ ಖಚಿತಪಡಿಸಿ.
3 Open it from the home screen ಹೋಮ್ ಸ್ಕ್ರೀನಿನಿಂದ ತೆರೆಯಿರಿ

The icon appears on the home screen and in the list of apps. Open it from there and you get the whole screen, with no address bar taking up the top. ಆ ಚಿಹ್ನೆ ಹೋಮ್ ಸ್ಕ್ರೀನ್ ಮೇಲೆ ಮತ್ತು ಆ್ಯಪ್‌ಗಳ ಪಟ್ಟಿಯಲ್ಲಿ ಕಾಣಿಸುತ್ತದೆ. ಅಲ್ಲಿಂದ ತೆರೆದರೆ ಇಡೀ ಪರದೆ ಸಿಗುತ್ತದೆ, ಮೇಲ್ಭಾಗವನ್ನು ವಿಳಾಸ ಪಟ್ಟಿ ತಿನ್ನುವುದಿಲ್ಲ.

09:40 M Swasthya It behaves like any other app. ಬೇರೆ ಯಾವುದೇ ಆ್ಯಪ್‌ನಂತೆಯೇ ಇದು ನಡೆದುಕೊಳ್ಳುತ್ತದೆ.

The menu words are in English on most phones, even when the phone itself is set to Kannada, and they are drawn that way above. Look for the three dots first. The rest follows from there. ಫೋನ್ ಕನ್ನಡದಲ್ಲಿದ್ದರೂ ಈ ಮೆನುವಿನ ಪದಗಳು ಹೆಚ್ಚಿನ ಫೋನುಗಳಲ್ಲಿ ಇಂಗ್ಲಿಷಿನಲ್ಲೇ ಇರುತ್ತವೆ. ಮೇಲಿನ ಚಿತ್ರಗಳಲ್ಲೂ ಅವನ್ನು ಹಾಗೆಯೇ ಬರೆಯಲಾಗಿದೆ. ಮೊದಲು ಆ ಮೂರು ಚುಕ್ಕಿಗಳನ್ನು ಹುಡುಕಿ. ಉಳಿದದ್ದು ಅಲ್ಲಿಂದ ಸುಲಭ.

What works without a signal, and what does not ಸಿಗ್ನಲ್ ಇಲ್ಲದಾಗ ಏನು ಕೆಲಸ ಮಾಡುತ್ತದೆ, ಏನು ಮಾಡುವುದಿಲ್ಲ

Every tool you have opened at least once stays on the phone and works with no signal. The calculations too: they are worked out on your own device, and were never sent anywhere. ನೀವು ಒಮ್ಮೆಯಾದರೂ ತೆರೆದಿರುವ ಪ್ರತಿ ಪರಿಕರವೂ ಫೋನಿನಲ್ಲಿ ಉಳಿಯುತ್ತದೆ, ಸಿಗ್ನಲ್ ಇಲ್ಲದೆಯೇ ಕೆಲಸ ಮಾಡುತ್ತದೆ. ಲೆಕ್ಕಾಚಾರಗಳೂ ಹಾಗೆಯೇ: ಅವು ನಿಮ್ಮ ಸಾಧನದಲ್ಲಿಯೇ ನಡೆಯುತ್ತವೆ, ಅವನ್ನು ಎಂದೂ ಎಲ್ಲಿಗೂ ಕಳುಹಿಸಿಲ್ಲ.

A tool you have never opened is not on the phone yet, so it needs a signal the first time. If you will want one in a place with no network, open it once before you go. ನೀವು ಎಂದೂ ತೆರೆಯದ ಪರಿಕರ ಇನ್ನೂ ಫೋನಿನಲ್ಲಿ ಇರುವುದಿಲ್ಲ, ಹಾಗಾಗಿ ಮೊದಲ ಬಾರಿಗೆ ಅದಕ್ಕೆ ಸಿಗ್ನಲ್ ಬೇಕು. ನೆಟ್‌ವರ್ಕ್ ಇಲ್ಲದ ಜಾಗದಲ್ಲಿ ಒಂದು ಪರಿಕರ ಬೇಕಾಗುತ್ತದೆ ಎನಿಸಿದರೆ, ಹೊರಡುವ ಮೊದಲು ಅದನ್ನು ಒಮ್ಮೆ ತೆರೆದಿಡಿ.

If something is not where it should be ಏನಾದರೂ ಇರಬೇಕಾದ ಜಾಗದಲ್ಲಿ ಇಲ್ಲದಿದ್ದರೆ

  • No install button on Android. The button shows only when the browser offers to install, so it is hidden once the site is on the home screen. Chrome's own menu, the three dots at the top right, carries Add to Home screen in that case. ಆ್ಯಂಡ್ರಾಯ್ಡ್‌ನಲ್ಲಿ ಸ್ಥಾಪಿಸುವ ಗುಂಡಿ ಕಾಣಿಸುತ್ತಿಲ್ಲ. ಬ್ರೌಸರ್ ಸ್ಥಾಪಿಸಲು ಮುಂದಾದಾಗ ಮಾತ್ರ ಆ ಗುಂಡಿ ಕಾಣಿಸುತ್ತದೆ, ಹಾಗಾಗಿ ತಾಣ ಈಗಾಗಲೇ ಹೋಮ್ ಸ್ಕ್ರೀನ್ ಮೇಲಿದ್ದರೆ ಅದು ಮರೆಯಾಗಿರುತ್ತದೆ. ಆಗ ಕ್ರೋಮ್‌ನ ಬಲ ಮೇಲ್ಭಾಗದ ಮೂರು ಚುಕ್ಕಿಗಳ ಮೆನುವಿನಲ್ಲಿ Add to Home screen ಇರುತ್ತದೆ.
  • No Add to Home Screen on the iPhone. Chrome and Edge on iOS offer it from their own Share button on recent versions, but Safari always has it. If you are in another browser and cannot find the row, open the page in Safari and start again. ಐಫೋನಿನಲ್ಲಿ Add to Home Screen ಸಿಗುತ್ತಿಲ್ಲ. iOS ನ ಕ್ರೋಮ್ ಮತ್ತು ಎಡ್ಜ್ ಹೊಸ ಆವೃತ್ತಿಗಳಲ್ಲಿ ತಮ್ಮದೇ ಶೇರ್ ಗುಂಡಿಯಿಂದ ಇದನ್ನು ಕೊಡುತ್ತವೆ, ಆದರೆ ಸಫಾರಿಯಲ್ಲಿ ಇದು ಯಾವಾಗಲೂ ಇರುತ್ತದೆ. ಬೇರೆ ಬ್ರೌಸರಿನಲ್ಲಿದ್ದು ಆ ಸಾಲು ಸಿಗದಿದ್ದರೆ, ಪುಟವನ್ನು ಸಫಾರಿಯಲ್ಲಿ ತೆರೆದು ಮತ್ತೆ ಆರಂಭಿಸಿ.
  • On a computer. Chrome and Edge show a small install symbol at the right-hand end of the address bar, and the button on the page works too. Safari on a Mac uses File, then Add to Dock. Firefox does not install web apps. The site works normally in it as a website. ಕಂಪ್ಯೂಟರಿನಲ್ಲಿ. ಕ್ರೋಮ್ ಮತ್ತು ಎಡ್ಜ್ ವಿಳಾಸ ಪಟ್ಟಿಯ ಬಲ ತುದಿಯಲ್ಲಿ ಒಂದು ಸಣ್ಣ ಸ್ಥಾಪನೆಯ ಚಿಹ್ನೆ ತೋರಿಸುತ್ತವೆ, ಪುಟದ ಮೇಲಿನ ಗುಂಡಿಯೂ ಕೆಲಸ ಮಾಡುತ್ತದೆ. ಮ್ಯಾಕ್‌ನ ಸಫಾರಿಯಲ್ಲಿ File, ನಂತರ Add to Dock ಆಯ್ಕೆ ಮಾಡಿ. ಫೈರ್‌ಫಾಕ್ಸ್ ವೆಬ್ ಆ್ಯಪ್‌ಗಳನ್ನು ಸ್ಥಾಪಿಸುವುದಿಲ್ಲ. ಅಲ್ಲಿ ಈ ತಾಣ ಜಾಲತಾಣವಾಗಿಯೇ ಎಂದಿನಂತೆ ಕೆಲಸ ಮಾಡುತ್ತದೆ.
  • Taking it off again. Press and hold the icon on your home screen and remove it, as you would any other app. Nothing is left on the phone beyond the pages the browser had already kept. ಬೇಡವೆಂದರೆ ತೆಗೆದುಹಾಕುವುದು. ಹೋಮ್ ಸ್ಕ್ರೀನ್ ಮೇಲಿನ ಆ ಚಿಹ್ನೆಯನ್ನು ಒತ್ತಿ ಹಿಡಿದು, ಬೇರೆ ಯಾವುದೇ ಆ್ಯಪ್‌ನಂತೆಯೇ ತೆಗೆದುಹಾಕಿ. ಬ್ರೌಸರ್ ಈಗಾಗಲೇ ಇಟ್ಟುಕೊಂಡಿದ್ದ ಪುಟಗಳನ್ನು ಬಿಟ್ಟರೆ ಫೋನಿನಲ್ಲಿ ಬೇರೇನೂ ಉಳಿಯುವುದಿಲ್ಲ.

What this is, and what it is not ಇದು ಏನು, ಮತ್ತು ಏನಲ್ಲ

This is the website, kept on the home screen. It is not an app from the Play Store or the App Store. It has not been through their review, and it is not a medical device. The tools, the words and the warning notice are the same as in the browser. ಇದು ಜಾಲತಾಣವೇ, ಹೋಮ್ ಸ್ಕ್ರೀನ್ ಮೇಲೆ ಇಟ್ಟುಕೊಂಡಿದ್ದು ಅಷ್ಟೇ. ಇದು ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರಿನ ಆ್ಯಪ್ ಅಲ್ಲ, ಅವರ ಪರಿಶೀಲನೆಗೆ ಒಳಪಟ್ಟಿಲ್ಲ, ಮತ್ತು ಇದು ವೈದ್ಯಕೀಯ ಸಾಧನವಲ್ಲ. ಪರಿಕರಗಳು, ಪದಗಳು ಮತ್ತು ಎಚ್ಚರಿಕೆಯ ಸೂಚನೆ ಬ್ರೌಸರಿನಲ್ಲಿ ಇರುವಂತೆಯೇ ಇಲ್ಲಿಯೂ ಇರುತ್ತವೆ.

What you enter into a tool stays on your device, whether the site is on the home screen or not. It is gone when you close the page. Installing changes nothing about that. The exception is a result you deliberately save while signed in, and the privacy notice sets out what that keeps and for how long. ಈ ಪರಿಕರಗಳಲ್ಲಿ ನೀವು ನಮೂದಿಸಿದ್ದು ನಿಮ್ಮ ಸಾಧನದಲ್ಲೇ ಇರುತ್ತದೆ, ತಾಣ ಹೋಮ್ ಸ್ಕ್ರೀನ್ ಮೇಲಿದ್ದರೂ ಇಲ್ಲದಿದ್ದರೂ, ಮತ್ತು ಪುಟ ಮುಚ್ಚಿದಾಗ ಅದು ಹೋಗುತ್ತದೆ. ಸ್ಥಾಪಿಸುವುದರಿಂದ ಇದರಲ್ಲಿ ಏನೂ ಬದಲಾಗುವುದಿಲ್ಲ. ನೀವು ಲಾಗಿನ್ ಆಗಿದ್ದು ಒಂದು ಫಲಿತಾಂಶವನ್ನು ಬೇಕೆಂದೇ ಉಳಿಸಿಕೊಂಡರೆ ಮಾತ್ರ ಬೇರೆ, ಮತ್ತು ಅದು ಏನನ್ನು ಎಷ್ಟು ಕಾಲ ಇಟ್ಟುಕೊಳ್ಳುತ್ತದೆ ಎಂಬುದನ್ನು ಗೌಪ್ಯತಾ ಸೂಚನೆ ವಿವರಿಸುತ್ತದೆ.

If a step above does not match what you see on your phone, please tell us. These screens change from one release to the next, and a page describing the wrong one is worth correcting. ಮೇಲಿನ ಯಾವುದಾದರೂ ಹಂತ ನಿಮ್ಮ ಫೋನಿನಲ್ಲಿ ಕಾಣಿಸುವುದಕ್ಕೆ ಹೊಂದದಿದ್ದರೆ ದಯವಿಟ್ಟು ನಮಗೆ ತಿಳಿಸಿ. ಆವೃತ್ತಿಯಿಂದ ಆವೃತ್ತಿಗೆ ಈ ಪರದೆಗಳು ಬದಲಾಗುತ್ತವೆ, ಮತ್ತು ತಪ್ಪಾದ ಪರದೆಯನ್ನು ವಿವರಿಸುವ ಪುಟವನ್ನು ತಿದ್ದುವುದು ಒಳ್ಳೆಯದು.

Tell us what you see ನಿಮಗೆ ಏನು ಕಾಣಿಸುತ್ತಿದೆ ಎಂದು ತಿಳಿಸಿ