Skip to the toolಪರಿಕರಕ್ಕೆ ನೇರವಾಗಿ ಹೋಗಿ
How this site handles your information ನಿಮ್ಮ ಮಾಹಿತಿಯನ್ನು ಈ ತಾಣ ಹೇಗೆ ನಿರ್ವಹಿಸುತ್ತದೆ What is kept, what is not, and what you can ask for. ಏನನ್ನು ಉಳಿಸಿಕೊಳ್ಳಲಾಗುತ್ತದೆ, ಏನನ್ನು ಇಲ್ಲ, ಮತ್ತು ನೀವು ಏನನ್ನು ಕೇಳಬಹುದು.

Version 1.4, in force from 25 August 2026. Applies to mediscuss.org/swasthya and to nothing else. ಆವೃತ್ತಿ 1.4, 25 ಆಗಸ್ಟ್ 2026 ರಿಂದ ಜಾರಿಯಲ್ಲಿದೆ. ಇದು mediscuss.org/swasthya ಗೆ ಮಾತ್ರ ಅನ್ವಯಿಸುತ್ತದೆ.

The Short Version ಸಂಕ್ಷಿಪ್ತವಾಗಿ

You can use every tool on this site without telling us anything about yourself. The height, weight, blood pressure or answers you type into a tool are worked out inside your own browser. That happens on your own phone or computer. They are not sent to this site's server. We do not save them anywhere, and nobody here can see them.

ಈ ತಾಣದ ಎಲ್ಲ ಪರಿಕರಗಳನ್ನೂ ನಿಮ್ಮ ಬಗ್ಗೆ ಏನನ್ನೂ ಹೇಳದೆಯೇ ಬಳಸಬಹುದು. ನೀವು ನಮೂದಿಸುವ ಎತ್ತರ, ತೂಕ, ರಕ್ತದೊತ್ತಡ ಅಥವಾ ಉತ್ತರಗಳ ಲೆಕ್ಕಾಚಾರ ನಿಮ್ಮದೇ ಫೋನ್ ಅಥವಾ ಕಂಪ್ಯೂಟರಿನ ಒಳಗೇ ನಡೆಯುತ್ತದೆ. ಅವು ಈ ತಾಣದ ಸರ್ವರಿಗೆ ಹೋಗುವುದಿಲ್ಲ, ನಾವು ಎಲ್ಲಿಯೂ ಉಳಿಸಿಕೊಳ್ಳುವುದಿಲ್ಲ, ಮತ್ತು ಇಲ್ಲಿ ಯಾರಿಗೂ ಅವು ಕಾಣುವುದಿಲ್ಲ.

Nothing about your health leaves your device unless you deliberately choose to send it. Today there is exactly one way to do that, and it is the contact form, which you have to fill in and press Send.

ನೀವೇ ಉದ್ದೇಶಪೂರ್ವಕವಾಗಿ ಕಳುಹಿಸದ ಹೊರತು ನಿಮ್ಮ ಆರೋಗ್ಯದ ಯಾವ ವಿವರವೂ ನಿಮ್ಮ ಸಾಧನದಿಂದ ಹೊರಹೋಗುವುದಿಲ್ಲ. ಸದ್ಯಕ್ಕೆ ಅದಕ್ಕೆ ಇರುವುದು ಒಂದೇ ದಾರಿ: ನೀವೇ ಭರ್ತಿ ಮಾಡಿ "ಕಳುಹಿಸಿ" ಒತ್ತಬೇಕಾದ ಸಂಪರ್ಕ ನಮೂನೆ.

Who Is Responsible For Your Information ನಿಮ್ಮ ಮಾಹಿತಿಗೆ ಜವಾಬ್ದಾರರು ಯಾರು

Dr Shashikiran Umakanth. He is a doctor in Udupi, Karnataka, and he runs MEDiscuss. Somebody has to decide why your information is collected. Somebody has to decide what is then done with it. The Digital Personal Data Protection Act 2023 has a name for that person. The name is Data Fiduciary. For this site that is one doctor. It is not a company. It is not a department.

ಕರ್ನಾಟಕದ ಉಡುಪಿಯ ವೈದ್ಯರಾದ ಡಾ. ಶಶಿಕಿರಣ್ ಉಮಾಕಾಂತ್. MEDiscuss ಅನ್ನು ನಡೆಸುತ್ತಿರುವವರು ಇವರೇ. ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆ 2023ರ ಪ್ರಕಾರ, ನಿಮ್ಮ ಮಾಹಿತಿಯನ್ನು ಏಕೆ ಪಡೆಯಲಾಗುತ್ತದೆ ಮತ್ತು ಅದರೊಂದಿಗೆ ಏನು ಮಾಡಲಾಗುತ್ತದೆ ಎಂದು ನಿರ್ಧರಿಸುವವರೇ ಆ ಮಾಹಿತಿಯ ಜವಾಬ್ದಾರಿ ಹೊತ್ತವರು; ಕಾಯ್ದೆ ಅವರನ್ನು Data Fiduciary ಎಂದು ಕರೆಯುತ್ತದೆ. ಈ ತಾಣದ ಮಟ್ಟಿಗೆ ಅದು ಒಬ್ಬ ವೈದ್ಯರು; ಯಾವುದೇ ಕಂಪನಿಯಾಗಲೀ ಇಲಾಖೆಯಾಗಲೀ ಅಲ್ಲ.

There is no separate data protection officer and no separate grievance officer. That is because there is no office. Dr Umakanth reads these messages and answers them himself. Everything in this notice that asks you to get in touch means one of two things. Those are the form at Tell us something, or an email to admin@mediscuss.org.

ಇಲ್ಲಿ ಪ್ರತ್ಯೇಕ ಮಾಹಿತಿ ಸಂರಕ್ಷಣಾ ಅಧಿಕಾರಿಯಾಗಲೀ, ಪ್ರತ್ಯೇಕ ದೂರು ಅಧಿಕಾರಿಯಾಗಲೀ ಇಲ್ಲ; ಏಕೆಂದರೆ ಇಲ್ಲಿ ಕಚೇರಿಯೇ ಇಲ್ಲ. ಈ ಸಂದೇಶಗಳನ್ನು ಡಾ. ಉಮಾಕಾಂತ್ ಅವರೇ ಓದಿ ಉತ್ತರಿಸುತ್ತಾರೆ. ಈ ಸೂಚನೆಯಲ್ಲಿ "ನಮಗೆ ತಿಳಿಸಿ" ಎಂದು ಎಲ್ಲಿ ಬಂದರೂ ಅದರ ಅರ್ಥ ಎರಡರಲ್ಲಿ ಒಂದು: ನಮಗೆ ತಿಳಿಸಿ ಎಂಬ ನಮೂನೆ, ಅಥವಾ admin@mediscuss.org ಗೆ ಇಮೇಲ್.

What Happens When You Use A Tool ನೀವು ಪರಿಕರ ಬಳಸಿದಾಗ ಏನಾಗುತ್ತದೆ

The whole calculation runs inside your browser. When you press the button on a tool, no request goes to this site's server. So there is nothing for us to store, even if we wanted to. This is not a policy we follow, it is how the tools are built.

ಪೂರ್ತಿ ಲೆಕ್ಕಾಚಾರ ನಿಮ್ಮ ಬ್ರೌಸರಿನ ಒಳಗೇ ನಡೆಯುತ್ತದೆ. ಪರಿಕರದ ಗುಂಡಿ ಒತ್ತಿದಾಗ ಈ ತಾಣದ ಸರ್ವರಿಗೆ ಯಾವ ಮನವಿಯೂ ಹೋಗುವುದಿಲ್ಲ. ಹಾಗಾಗಿ ನಾವು ಬಯಸಿದರೂ ಸಂಗ್ರಹಿಸಲು ಏನೂ ಇರುವುದಿಲ್ಲ. ಇದು ನಾವು ಪಾಲಿಸುವ ನಿಯಮವಲ್ಲ; ಪರಿಕರಗಳನ್ನು ಕಟ್ಟಿರುವ ರೀತಿಯೇ ಹಾಗಿದೆ.

While you are filling a form, your browser keeps what you have entered so far. That way an accidental reload, or a trip to another tab, does not lose your work. Two things are worth knowing about that copy, and both are deliberate.

ನೀವು ನಮೂನೆ ಭರ್ತಿ ಮಾಡುತ್ತಿರುವಾಗ, ಆಕಸ್ಮಿಕವಾಗಿ ಪುಟ ಮರುಲೋಡ್ ಆದರೆ ಅಥವಾ ಬೇರೆ ಟ್ಯಾಬ್‌ಗೆ ಹೋಗಿ ಬಂದರೆ ನಿಮ್ಮ ಶ್ರಮ ವ್ಯರ್ಥವಾಗಬಾರದೆಂದು ಬ್ರೌಸರ್ ಅಲ್ಲಿಯವರೆಗಿನ ನಮೂದುಗಳನ್ನು ಇಟ್ಟುಕೊಳ್ಳುತ್ತದೆ. ಆ ಪ್ರತಿಯ ಬಗ್ಗೆ ಎರಡು ವಿಷಯ ತಿಳಿದಿರಬೇಕು, ಮತ್ತು ಎರಡೂ ಉದ್ದೇಶಪೂರ್ವಕ.

  • Only some kinds of field are kept. Numbers, dropdown choices, tick boxes and the round option buttons, and nothing else. Anything you can type words into is left out. That includes any box for a name, an address, a phone number or a note. The rule is written against the type of the field, not against a list of field names. It lives in one place in the code. So a tool added next year is covered by it, without anybody having to remember.
  • ಕೆಲವು ಬಗೆಯ ನಮೂದಿನ ಜಾಗಗಳನ್ನು ಮಾತ್ರ ಇಟ್ಟುಕೊಳ್ಳಲಾಗುತ್ತದೆ. ಅಂಕಿಗಳು, ಪಟ್ಟಿಯಿಂದ ಆರಿಸಿದ ಆಯ್ಕೆಗಳು, ಗುರುತು ಹಾಕುವ ಚೌಕಗಳು ಮತ್ತು ದುಂಡನೆಯ ಆಯ್ಕೆ ಗುಂಡಿಗಳು; ಇಷ್ಟೇ. ಪದಗಳನ್ನು ಟೈಪ್ ಮಾಡಬಹುದಾದ ಯಾವ ಜಾಗವನ್ನೂ ಇಟ್ಟುಕೊಳ್ಳುವುದಿಲ್ಲ. ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಅಥವಾ ಟಿಪ್ಪಣಿ ಬರೆಯುವ ಜಾಗಗಳೆಲ್ಲ ಇದರಲ್ಲಿ ಸೇರಿವೆ. ಈ ನಿಯಮವನ್ನು ಜಾಗಗಳ ಹೆಸರಿನ ಪಟ್ಟಿಯ ಮೇಲಲ್ಲ, ಅವುಗಳ ಬಗೆಯ ಮೇಲೆ ಬರೆಯಲಾಗಿದೆ. ಅದೂ ಕೋಡ್‌ನಲ್ಲಿ ಒಂದೇ ಕಡೆ. ಹಾಗಾಗಿ ಮುಂದಿನ ವರ್ಷ ಹೊಸ ಪರಿಕರ ಸೇರಿಸಿದರೂ, ಯಾರೂ ನೆನಪಿಟ್ಟುಕೊಳ್ಳದೆಯೇ ಅದಕ್ಕೂ ಇದೇ ನಿಯಮ ಅನ್ವಯವಾಗುತ್ತದೆ.
  • It is cleared when you close the tab. The copy lives in the tab you are working in and goes when that tab closes. It is not written to the device's long term storage. So it is not waiting there for the next person who picks up the same phone. Until 16 August 2026 it was kept until somebody cleared their browser. That was a much larger promise than this feature was ever making, and it was changed for that reason.
  • ಟ್ಯಾಬ್ ಮುಚ್ಚಿದ ಕೂಡಲೇ ಅದು ಅಳಿಸಿಹೋಗುತ್ತದೆ. ಆ ಪ್ರತಿ ಇರುವುದು ನೀವು ಕೆಲಸ ಮಾಡುತ್ತಿರುವ ಟ್ಯಾಬಿನಲ್ಲಿ ಮಾತ್ರ; ಟ್ಯಾಬ್ ಮುಚ್ಚಿದರೆ ಅದೂ ಹೋಯಿತು. ಅದನ್ನು ಸಾಧನದ ದೀರ್ಘಕಾಲದ ಸಂಗ್ರಹಕ್ಕೆ ಬರೆಯುವುದಿಲ್ಲ. ಹಾಗಾಗಿ ಅದೇ ಫೋನನ್ನು ಮುಂದೆ ಕೈಗೆತ್ತಿಕೊಳ್ಳುವವರಿಗೆ ಅದು ಕಾಯುತ್ತಾ ಕೂತಿರುವುದಿಲ್ಲ. 16 ಆಗಸ್ಟ್ 2026ರವರೆಗೆ ಬ್ರೌಸರ್ ಸ್ವಚ್ಛಗೊಳಿಸುವವರೆಗೂ ಅದು ಉಳಿಯುತ್ತಿತ್ತು. ಈ ಸೌಲಭ್ಯ ಎಂದೂ ಅಷ್ಟು ದೊಡ್ಡ ಭರವಸೆ ಕೊಟ್ಟಿರಲಿಲ್ಲ, ಅದಕ್ಕೇ ಬದಲಾಯಿಸಲಾಯಿತು.

This matters here more than it would on a site for doctors. These pages are read by members of the public, very often on a shared phone or a family computer. There is no hospital and no work device in between.

ವೈದ್ಯರಿಗಾಗಿ ಇರುವ ತಾಣಕ್ಕಿಂತ ಇಲ್ಲಿ ಇದು ಹೆಚ್ಚು ಮುಖ್ಯ. ಈ ಪುಟಗಳನ್ನು ಓದುವವರು ಸಾಮಾನ್ಯ ಜನ. ಬಹಳಷ್ಟು ಸಲ ಮನೆಯ ಎಲ್ಲರೂ ಬಳಸುವ ಒಂದೇ ಫೋನಿನಲ್ಲಿ ಅಥವಾ ಕಂಪ್ಯೂಟರಿನಲ್ಲಿ ಓದುತ್ತಾರೆ. ನಡುವೆ ಆಸ್ಪತ್ರೆಯೂ ಇಲ್ಲ, ಕಚೇರಿಯ ಸಾಧನವೂ ಇಲ್ಲ.

What Is Kept On Your Device ನಿಮ್ಮ ಸಾಧನದಲ್ಲಿ ಏನು ಉಳಿಯುತ್ತದೆ

Apart from the half-filled form described above, this site remembers three settings on your device. They are: whether you chose light or dark, which accent colour you chose, and whether you are reading in English or Kannada. They are stored by your browser, on your device. They are never sent to this site's server and they say nothing about your health.

ಮೇಲೆ ಹೇಳಿದ ಅರ್ಧ ಭರ್ತಿ ಮಾಡಿದ ನಮೂನೆಯ ಹೊರತಾಗಿ, ಈ ತಾಣ ನಿಮ್ಮ ಸಾಧನದಲ್ಲಿ ಮೂರು ಆಯ್ಕೆಗಳನ್ನು ನೆನಪಿಟ್ಟುಕೊಳ್ಳುತ್ತದೆ: ತಿಳಿ ಬಣ್ಣ ಬೇಕೋ ಗಾಢ ಬಣ್ಣ ಬೇಕೋ, ಯಾವ ಬಣ್ಣದ ಶೈಲಿ ಆರಿಸಿದ್ದೀರಿ, ಮತ್ತು ನೀವು ಓದುತ್ತಿರುವುದು ಇಂಗ್ಲಿಷಿನಲ್ಲೋ ಕನ್ನಡದಲ್ಲೋ. ಇವನ್ನು ನಿಮ್ಮ ಬ್ರೌಸರ್ ನಿಮ್ಮ ಸಾಧನದಲ್ಲೇ ಇಟ್ಟುಕೊಳ್ಳುತ್ತದೆ. ಇವು ಈ ತಾಣದ ಸರ್ವರಿಗೆ ಎಂದೂ ಹೋಗುವುದಿಲ್ಲ, ಮತ್ತು ನಿಮ್ಮ ಆರೋಗ್ಯದ ಬಗ್ಗೆ ಇವು ಏನನ್ನೂ ಹೇಳುವುದಿಲ್ಲ.

Two tools also keep, on your device only, what you gave them. The Mind and Spirit Compass keeps your six answers, so that a return visit starts where you left off. The Lifestyle Compass keeps a plan, your seven pillar readings and the small steps you chose. It does that only if you press Keep My Plan. Without that press it keeps nothing. Both stay until you remove them, and both say so on their own pages. Neither ever leaves the device.

ಎರಡು ಪರಿಕರಗಳು ನೀವು ಅವಕ್ಕೆ ಕೊಟ್ಟದ್ದನ್ನು ನಿಮ್ಮ ಸಾಧನದಲ್ಲಿ ಮಾತ್ರ ಇಟ್ಟುಕೊಳ್ಳುತ್ತವೆ. ಮನಸ್ಸು ಮತ್ತು ಆತ್ಮದ ದಿಕ್ಸೂಚಿ ನಿಮ್ಮ ಆರು ಉತ್ತರಗಳನ್ನು ಇಟ್ಟುಕೊಳ್ಳುತ್ತದೆ; ಮತ್ತೆ ಬಂದಾಗ ನಿಲ್ಲಿಸಿದಲ್ಲಿಂದಲೇ ಮುಂದುವರಿಯಲಿ ಎಂದು. ಜೀವನಶೈಲಿಯ ದಿಕ್ಸೂಚಿ ಒಂದು ಯೋಜನೆಯನ್ನು ಇಟ್ಟುಕೊಳ್ಳುತ್ತದೆ: ನಿಮ್ಮ ಏಳು ಸ್ತಂಭಗಳ ಅಳತೆಗಳು ಮತ್ತು ನೀವು ಆರಿಸಿದ ಪುಟ್ಟ ಹೆಜ್ಜೆಗಳು; ಅದೂ ನೀವು "ನನ್ನ ಯೋಜನೆ ಉಳಿಸಿ" ಒತ್ತಿದರೆ ಮಾತ್ರ. ಒತ್ತದಿದ್ದರೆ ಅದು ಏನನ್ನೂ ಇಟ್ಟುಕೊಳ್ಳುವುದಿಲ್ಲ. ಎರಡೂ ನೀವು ಅಳಿಸುವವರೆಗೆ ಇರುತ್ತವೆ, ಮತ್ತು ಎರಡೂ ತಮ್ಮದೇ ಪುಟಗಳಲ್ಲಿ ಇದನ್ನು ಹೇಳುತ್ತವೆ. ಯಾವುದೂ ಸಾಧನವನ್ನು ಬಿಟ್ಟು ಹೊರಹೋಗುವುದಿಲ್ಲ.

You do not have to take that on trust. Your account page has a card headed What this device is holding. It lists exactly what is being held. That list is read out of the storage itself, rather than from a list somebody typed. If something else were ever stored, it would appear there. The same card has a button, Forget all of it. It removes every one of them and any half-filled form. It then reloads the page, so that nothing is left on screen either. You do not need an account to use it.

ಇದನ್ನು ನಂಬಿಕೆಯ ಮೇಲೆ ಒಪ್ಪಿಕೊಳ್ಳಬೇಕಿಲ್ಲ. ನಿಮ್ಮ ಖಾತೆ ಪುಟದಲ್ಲಿ "ಈ ಸಾಧನದಲ್ಲಿ ಏನಿದೆ" ಎಂಬ ಒಂದು ಕಾರ್ಡ್ ಇದೆ. ಅಲ್ಲಿ ಸದ್ಯ ಏನೇನು ಇದೆ ಎಂಬುದನ್ನು ಪಟ್ಟಿ ಮಾಡಿ ತೋರಿಸಲಾಗುತ್ತದೆ. ಆ ಪಟ್ಟಿಯನ್ನು ಯಾರೋ ಬರೆದಿಟ್ಟದ್ದಲ್ಲ; ಸಂಗ್ರಹದಿಂದಲೇ ನೇರವಾಗಿ ಓದಿ ತೋರಿಸಲಾಗುತ್ತದೆ. ಬೇರೆ ಏನಾದರೂ ಸಂಗ್ರಹವಾಗಿದ್ದರೆ ಅದೂ ಅಲ್ಲಿ ಕಾಣಿಸುತ್ತದೆ. ಅದೇ ಕಾರ್ಡಿನಲ್ಲಿ "ಎಲ್ಲವನ್ನೂ ಅಳಿಸಿ" ಎಂಬ ಗುಂಡಿ ಇದೆ; ಅದು ಪ್ರತಿಯೊಂದನ್ನೂ ಮತ್ತು ಅರ್ಧ ತುಂಬಿದ ಯಾವುದೇ ನಮೂನೆಯನ್ನೂ ಅಳಿಸಿ, ಪರದೆಯ ಮೇಲೂ ಏನೂ ಉಳಿಯದಂತೆ ಪುಟವನ್ನು ಮತ್ತೆ ಲೋಡ್ ಮಾಡುತ್ತದೆ. ಇದಕ್ಕೆ ಖಾತೆ ಬೇಕಿಲ್ಲ.

The Sheet You Print, And The Share Button ನೀವು ಮುದ್ರಿಸುವ ಹಾಳೆ ಮತ್ತು ಹಂಚಿಕೊಳ್ಳುವ ಗುಂಡಿ

The printed sheet is put together on your own device, out of what is already on the screen. It is then handed straight to your browser's print window. It is not built on our server, so your results are not uploaded in order to be printed. If you save it as a PDF, that file is yours and we never see it.

ಮುದ್ರಿಸುವ ಹಾಳೆಯನ್ನು ನಿಮ್ಮ ಸಾಧನದಲ್ಲೇ, ಪರದೆಯ ಮೇಲಿರುವ ವಿಷಯದಿಂದಲೇ ಸಿದ್ಧಪಡಿಸಿ ನೇರವಾಗಿ ನಿಮ್ಮ ಬ್ರೌಸರಿನ ಮುದ್ರಣ ಕಿಟಕಿಗೆ ಕೊಡಲಾಗುತ್ತದೆ. ಅದನ್ನು ನಮ್ಮ ಸರ್ವರಿನಲ್ಲಿ ಸಿದ್ಧಪಡಿಸುವುದಿಲ್ಲ. ಹಾಗಾಗಿ ಮುದ್ರಿಸುವ ಸಲುವಾಗಿ ನಿಮ್ಮ ಫಲಿತಾಂಶಗಳನ್ನು ಎಲ್ಲಿಗೂ ಕಳುಹಿಸಬೇಕಾಗಿಲ್ಲ. ಅದನ್ನು ಪಿಡಿಎಫ್ ಆಗಿ ಉಳಿಸಿಕೊಂಡರೆ ಆ ಕಡತ ನಿಮ್ಮದೇ; ಅದು ನಮಗೆ ಎಂದೂ ಕಾಣುವುದಿಲ್ಲ.

The list of what you entered is printed at the foot of the sheet. It follows the same rule as the browser's copy of your form: numbers, choices and tick boxes only. Anything you could type words into is left off the sheet as well. So a printout you hand to somebody does not carry a name or a note you had forgotten was on the page.

ಹಾಳೆಯ ಕೊನೆಯಲ್ಲಿ ಬರುವ "ನೀವು ನಮೂದಿಸಿದ್ದು" ಪಟ್ಟಿಗೂ ಬ್ರೌಸರ್ ಇಟ್ಟುಕೊಳ್ಳುವ ಪ್ರತಿಗೂ ಒಂದೇ ನಿಯಮ: ಅಂಕಿಗಳು, ಆಯ್ಕೆಗಳು ಮತ್ತು ಗುರುತು ಹಾಕಿದ ಚೌಕಗಳು ಮಾತ್ರ. ಪದಗಳನ್ನು ಬರೆಯಬಹುದಾದ ಯಾವುದೂ ಹಾಳೆಯ ಮೇಲೆ ಬರುವುದಿಲ್ಲ. ಹಾಗಾಗಿ ನೀವು ಯಾರಿಗಾದರೂ ಕೊಡುವ ಪ್ರತಿಯಲ್ಲಿ, ಪುಟದಲ್ಲಿತ್ತೆಂದು ನೀವು ಮರೆತಿದ್ದ ಹೆಸರಾಗಲೀ ಟಿಪ್ಪಣಿಯಾಗಲೀ ಸೇರಿಕೊಳ್ಳುವುದಿಲ್ಲ.

The Share This Tool button passes only the web address of the page you are on to whichever app you pick. It does not pass your entries or your result.

"ಈ ಪರಿಕರವನ್ನು ಹಂಚಿಕೊಳ್ಳಿ" ಗುಂಡಿ, ನೀವು ಆರಿಸಿದ ಆ್ಯಪ್‌ಗೆ ನೀವಿರುವ ಪುಟದ ವಿಳಾಸವನ್ನು ಮಾತ್ರ ಕೊಡುತ್ತದೆ. ನಿಮ್ಮ ನಮೂದುಗಳನ್ನಾಗಲೀ ಫಲಿತಾಂಶವನ್ನಾಗಲೀ ಕೊಡುವುದಿಲ್ಲ.

No Request Goes Anywhere Else ಬೇರೆ ಯಾರಿಗೂ ಯಾವ ಮನವಿಯೂ ಹೋಗುವುದಿಲ್ಲ

Until 23 August 2026 this section described one request that did go elsewhere. The headings on this site were set in a typeface fetched from Google Fonts. So your browser asked two servers run by Google LLC for a font file, before a word was read. Readers asked for that to stop and it has stopped. The typefaces are now stored on this site's own server. Opening a page here contacts nobody but this site.

23 ಆಗಸ್ಟ್ 2026ರವರೆಗೆ, ಬೇರೆಡೆಗೆ ಹೋಗುತ್ತಿದ್ದ ಒಂದು ಮನವಿಯ ಬಗ್ಗೆ ಈ ಭಾಗದಲ್ಲಿ ಹೇಳಲಾಗಿತ್ತು. ಈ ತಾಣದ ಶೀರ್ಷಿಕೆಗಳಿಗೆ ಬಳಸುತ್ತಿದ್ದ ಅಕ್ಷರಶೈಲಿ Google Fonts ನಿಂದ ಬರುತ್ತಿತ್ತು. ಹಾಗಾಗಿ ಒಂದು ಪದ ಓದುವ ಮೊದಲೇ, ಗೂಗಲ್ ಸಂಸ್ಥೆ ನಡೆಸುವ ಎರಡು ಸರ್ವರುಗಳಿಗೆ ನಿಮ್ಮ ಬ್ರೌಸರ್ ಮನವಿ ಕಳುಹಿಸುತ್ತಿತ್ತು. ಅದು ನಿಲ್ಲಬೇಕೆಂದು ಓದುಗರು ಕೇಳಿದರು; ಈಗ ನಿಂತಿದೆ. ಅಕ್ಷರಶೈಲಿಗಳು ಈಗ ಈ ತಾಣದ ಸ್ವಂತ ಸರ್ವರಿನಲ್ಲೇ ಇವೆ. ಇಲ್ಲಿ ಪುಟವೊಂದನ್ನು ತೆರೆದಾಗ, ಈ ತಾಣವನ್ನು ಬಿಟ್ಟು ಬೇರೆ ಯಾರನ್ನೂ ಸಂಪರ್ಕಿಸುವುದಿಲ್ಲ.

The same change altered something you can see. Until that day the Kannada here was drawn with whichever Kannada lettering your own computer happened to carry. So one sentence looked one way on a Mac and another way on a Windows machine. Neither of them was the shape this site was designed around. The lettering now comes from this site along with the words, and every reader sees the same letters.

ಇದೇ ಬದಲಾವಣೆಯಿಂದ ನಿಮ್ಮ ಕಣ್ಣಿಗೆ ಕಾಣುವ ಒಂದು ವ್ಯತ್ಯಾಸವೂ ಆಗಿದೆ. ಆ ದಿನದವರೆಗೆ ಇಲ್ಲಿನ ಕನ್ನಡ ಅಕ್ಷರಗಳು, ನಿಮ್ಮ ಕಂಪ್ಯೂಟರಿನಲ್ಲಿ ಯಾವ ಕನ್ನಡ ಅಕ್ಷರಶೈಲಿ ಇತ್ತೋ ಅದರಲ್ಲೇ ಮೂಡುತ್ತಿದ್ದವು. ಹಾಗಾಗಿ ಒಂದೇ ವಾಕ್ಯ ಮ್ಯಾಕ್‌ನಲ್ಲಿ ಒಂದು ರೀತಿ, ವಿಂಡೋಸ್‌ನಲ್ಲಿ ಇನ್ನೊಂದು ರೀತಿ ಕಾಣುತ್ತಿತ್ತು. ಆ ಎರಡರಲ್ಲಿ ಯಾವುದನ್ನೂ ಗಮನದಲ್ಲಿಟ್ಟುಕೊಂಡು ಈ ಪುಟಗಳನ್ನು ರೂಪಿಸಿರಲಿಲ್ಲ. ಈಗ ಪದಗಳ ಜೊತೆಗೆ ಅಕ್ಷರಶೈಲಿಯೂ ಈ ತಾಣದಿಂದಲೇ ಬರುತ್ತದೆ; ಎಲ್ಲ ಓದುಗರಿಗೂ ಒಂದೇ ಅಕ್ಷರಗಳು ಕಾಣುತ್ತವೆ.

There Are No Visitor Statistics On This Site ಈ ತಾಣದಲ್ಲಿ ಭೇಟಿಯ ಅಂಕಿಅಂಶ ಸಂಗ್ರಹವಿಲ್ಲ

This site runs no Google Analytics, no Google Tag Manager, no StatCounter, no advertising code and no tracking pixels. Nobody is counting which pages you open or how long you stay. That was checked against the site's own code on 16 August 2026.

ಈ ತಾಣದಲ್ಲಿ Google Analytics ಇಲ್ಲ, Google Tag Manager ಇಲ್ಲ, StatCounter ಇಲ್ಲ, ಜಾಹೀರಾತಿನ ಕೋಡ್ ಇಲ್ಲ, ಹಿಂಬಾಲಿಸುವ ಯಾವ ಸಾಧನವೂ ಇಲ್ಲ. ನೀವು ಯಾವ ಪುಟ ತೆರೆದಿರಿ, ಎಷ್ಟು ಹೊತ್ತು ಇದ್ದಿರಿ ಎಂದು ಯಾರೂ ಎಣಿಸುತ್ತಿಲ್ಲ. ಇದನ್ನು 16 ಆಗಸ್ಟ್ 2026ರಂದು ತಾಣದ ಕೋಡ್‌ನಲ್ಲೇ ಪರಿಶೀಲಿಸಲಾಗಿದೆ.

The other site at this address is for doctors. It is MEDiscuss CDSS, at mediscuss.org/cdss, and it does use Google Analytics and StatCounter. It is a separate site with a separate notice and a separate database. Nothing you do here reaches it. Nothing it collects has anything to do with you.

ಇದೇ ವಿಳಾಸದಲ್ಲಿರುವ ಇನ್ನೊಂದು ತಾಣ, mediscuss.org/cdss ಎಂಬ MEDiscuss CDSS, ವೈದ್ಯರಿಗಾಗಿ ಇರುವುದು. ಅದು Google Analytics ಮತ್ತು StatCounter ಬಳಸುತ್ತದೆ. ಅದು ಬೇರೆ ತಾಣ, ಅದಕ್ಕೆ ಬೇರೆ ಸೂಚನೆ, ಬೇರೆ ದತ್ತಸಂಚಯ. ನೀವು ಇಲ್ಲಿ ಮಾಡುವ ಯಾವುದೂ ಅಲ್ಲಿಗೆ ಹೋಗುವುದಿಲ್ಲ, ಮತ್ತು ಅದು ಸಂಗ್ರಹಿಸುವ ಯಾವುದಕ್ಕೂ ನಿಮ್ಮೊಂದಿಗೆ ಸಂಬಂಧವಿಲ್ಲ.

One thing does happen that is outside this site's code. The company that hosts the server keeps ordinary access logs, which record the address of every request made to any website it serves. That is how web hosting works everywhere and it is not something this site switches on or reads.

ಈ ತಾಣದ ಕೋಡ್‌ನ ಹೊರಗೆ ಒಂದು ವಿಷಯ ನಡೆಯುತ್ತದೆ. ಸರ್ವರ್ ನಡೆಸುವ ಕಂಪನಿಯು ಸಾಮಾನ್ಯ ದಾಖಲೆಗಳನ್ನು ಇಟ್ಟುಕೊಳ್ಳುತ್ತದೆ. ಅದು ತನ್ನ ಯಾವುದೇ ತಾಣಕ್ಕೆ ಬರುವ ಪ್ರತಿ ಮನವಿಯ ವಿಳಾಸವನ್ನೂ ದಾಖಲಿಸುತ್ತದೆ. ಎಲ್ಲ ಕಡೆಯೂ ಜಾಲತಾಣಗಳ ಸೇವೆ ನಡೆಯುವುದೇ ಹೀಗೆ. ಅದನ್ನು ಈ ತಾಣ ಆರಂಭಿಸಿಲ್ಲ, ಓದುವುದೂ ಇಲ್ಲ.

Cookies ಕುಕೀಗಳು

This site sets one cookie, and only after you have signed in. It holds a random session number and nothing else. It is readable only by this site's server, and not by any script. It applies only to addresses beginning /swasthya/. It is removed when you sign out or close the browser. It is not used to follow you to other websites. It cannot be, because it is never sent to them. If you never sign in, no cookie is set.

ಈ ತಾಣ ಒಂದೇ ಒಂದು ಕುಕೀ ಇಡುತ್ತದೆ, ಅದೂ ನೀವು ಲಾಗಿನ್ ಆದ ನಂತರವೇ. ಅದರಲ್ಲಿ ಇರುವುದು ಯಾವುದೇ ಕ್ರಮವಿಲ್ಲದೆ ಸೃಷ್ಟಿಸಿದ ಒಂದು ಸೆಷನ್ ಸಂಖ್ಯೆ ಮಾತ್ರ; ಬೇರೇನೂ ಇಲ್ಲ. ಅದನ್ನು ಈ ತಾಣದ ಸರ್ವರ್ ಮಾತ್ರ ಓದಬಲ್ಲದು, ಯಾವ ಸ್ಕ್ರಿಪ್ಟ್ ಕೂಡ ಓದಲಾಗದು. ಅದು /swasthya/ ಎಂದು ಆರಂಭವಾಗುವ ವಿಳಾಸಗಳಿಗೆ ಮಾತ್ರ ಅನ್ವಯಿಸುತ್ತದೆ. ನೀವು ಲಾಗ್ ಔಟ್ ಆದಾಗ ಅಥವಾ ಬ್ರೌಸರ್ ಮುಚ್ಚಿದಾಗ ಅದು ಅಳಿಸಿಹೋಗುತ್ತದೆ. ಬೇರೆ ತಾಣಗಳಿಗೆ ನಿಮ್ಮನ್ನು ಹಿಂಬಾಲಿಸಲು ಅದನ್ನು ಬಳಸುವುದಿಲ್ಲ; ಅದು ಆ ತಾಣಗಳಿಗೆ ಹೋಗುವುದೇ ಇಲ್ಲದ ಕಾರಣ ಬಳಸಲು ಸಾಧ್ಯವೂ ಇಲ್ಲ. ನೀವು ಎಂದೂ ಲಾಗಿನ್ ಆಗದಿದ್ದರೆ ಯಾವ ಕುಕೀಯೂ ಇಡುವುದಿಲ್ಲ.

If You Write To Us ನೀವು ನಮಗೆ ಬರೆದರೆ

The contact form is for telling us that something on this site is wrong, confusing or missing. It is not a way to get medical advice, and nobody here can look at your results and tell you what to do. Please take those to your own doctor.

ಈ ತಾಣದಲ್ಲಿ ಏನಾದರೂ ತಪ್ಪಿದೆ, ಗೊಂದಲವಿದೆ ಅಥವಾ ಇರಬೇಕಾದದ್ದು ಇಲ್ಲ ಎಂದು ತಿಳಿಸಲು ಈ ಸಂಪರ್ಕ ನಮೂನೆ ಇರುವುದು. ಇದು ವೈದ್ಯಕೀಯ ಸಲಹೆ ಪಡೆಯುವ ಮಾರ್ಗವಲ್ಲ. ನಿಮ್ಮ ಫಲಿತಾಂಶಗಳನ್ನು ನೋಡಿ ಏನು ಮಾಡಬೇಕೆಂದು ಹೇಳಲು ಇಲ್ಲಿ ಯಾರೂ ಇಲ್ಲ. ಅವುಗಳನ್ನು ದಯವಿಟ್ಟು ನಿಮ್ಮ ವೈದ್ಯರ ಬಳಿ ಒಯ್ಯಿರಿ.

When you press Send, this is what is stored, and each item is there for a reason:

"ಕಳುಹಿಸಿ" ಒತ್ತಿದಾಗ ಸಂಗ್ರಹವಾಗುವುದು ಇಷ್ಟು. ಪ್ರತಿಯೊಂದೂ ಒಂದು ಕಾರಣಕ್ಕಾಗಿಯೇ ಇದೆ:

  • Your email address. It is needed. A message about a health tool, from somebody who cannot be asked which numbers they entered, usually cannot be acted on. Your effort would then be wasted. It is used to reply to you and for nothing else. It is not checked or confirmed, and no link is sent that you have to click before your message counts.
  • ನಿಮ್ಮ ಇಮೇಲ್ ವಿಳಾಸ. ಇದು ಬೇಕೇಬೇಕು. ಏಕೆಂದರೆ, "ನೀವು ಯಾವ ಅಂಕಿ ನಮೂದಿಸಿದಿರಿ" ಎಂದು ಕೇಳಲು ಆಗದಿದ್ದರೆ ಪರಿಕರದ ಬಗ್ಗೆ ಬಂದ ಸಂದೇಶದ ಮೇಲೆ ಸಾಮಾನ್ಯವಾಗಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ, ಮತ್ತು ನಿಮ್ಮ ಶ್ರಮ ವ್ಯರ್ಥವಾಗುತ್ತದೆ. ಇದನ್ನು ನಿಮಗೆ ಉತ್ತರಿಸಲು ಮಾತ್ರ ಬಳಸಲಾಗುತ್ತದೆ. ಇದನ್ನು ಪರಿಶೀಲಿಸುವುದಿಲ್ಲ, ಮತ್ತು ಸಂದೇಶ ಸ್ವೀಕಾರವಾಗಲು ನೀವು ಒತ್ತಬೇಕಾದ ಯಾವ ಕೊಂಡಿಯನ್ನೂ ಕಳುಹಿಸುವುದಿಲ್ಲ.
  • Your name, if you give one. The field is optional and a blank is stored as a blank.
  • ನಿಮ್ಮ ಹೆಸರು, ನೀವು ಕೊಟ್ಟರೆ. ಈ ಜಾಗ ಐಚ್ಛಿಕ. ಖಾಲಿ ಬಿಟ್ಟರೆ ಖಾಲಿಯಾಗಿಯೇ ಉಳಿಯುತ್ತದೆ.
  • Which of the four kinds you chose, and which tool you were on. The tool is read from the address of the page you came from, so that you do not have to know its name. Both are there so a report can be found again later.
  • ನೀವು ಆರಿಸಿದ ನಾಲ್ಕು ಬಗೆಗಳಲ್ಲಿ ಯಾವುದು ಎಂಬುದು, ಮತ್ತು ನೀವು ಯಾವ ಪರಿಕರದಲ್ಲಿದ್ದಿರಿ ಎಂಬುದು. ಪರಿಕರದ ಹೆಸರನ್ನು ನೀವು ಬಂದ ಪುಟದ ವಿಳಾಸದಿಂದಲೇ ತೆಗೆದುಕೊಳ್ಳಲಾಗುತ್ತದೆ, ಅದು ನಿಮಗೆ ಗೊತ್ತಿರಬೇಕಾಗಿಲ್ಲ. ಮುಂದೆ ಆ ವರದಿಯನ್ನು ಹುಡುಕಲು ಇವೆರಡೂ ಸಹಾಯ ಮಾಡುತ್ತವೆ.
  • Whether you were reading in English or in Kannada, so that the reply is written in the language you wrote in. A Kannada reader answered in English has been answered by somebody who did not notice.
  • ನೀವು ಇಂಗ್ಲಿಷಿನಲ್ಲಿ ಓದುತ್ತಿದ್ದಿರೋ ಕನ್ನಡದಲ್ಲಿ ಓದುತ್ತಿದ್ದಿರೋ ಎಂಬುದು. ನೀವು ಬರೆದ ಭಾಷೆಯಲ್ಲೇ ಉತ್ತರ ಬರಬೇಕೆಂದು ಇದನ್ನು ದಾಖಲಿಸಲಾಗುತ್ತದೆ. ಕನ್ನಡದಲ್ಲಿ ಬರೆದವರಿಗೆ ಇಂಗ್ಲಿಷಿನಲ್ಲಿ ಉತ್ತರ ಬಂದರೆ, ಉತ್ತರಿಸಿದವರು ಗಮನಿಸಲಿಲ್ಲ ಎಂದೇ ಅರ್ಥ.
  • The reply, once one is written. It is kept beside your message rather than only sent. That way what was answered can be found again months later: by you, if you ask, and by the one person who answers these. Whether it reached you is recorded too. If the email service refuses it, the reply is still here and the screen says so, rather than claiming it was sent.
  • ಉತ್ತರ, ಬರೆದ ಮೇಲೆ. ಅದನ್ನು ಕೇವಲ ಕಳುಹಿಸದೆ ನಿಮ್ಮ ಸಂದೇಶದ ಪಕ್ಕದಲ್ಲೇ ಇಟ್ಟುಕೊಳ್ಳಲಾಗುತ್ತದೆ; ಹಾಗಾಗಿ ತಿಂಗಳುಗಳ ನಂತರವೂ ಏನು ಉತ್ತರಿಸಲಾಗಿತ್ತು ಎಂದು ಹುಡುಕಬಹುದು: ನೀವು ಕೇಳಿದರೆ ನಿಮಗೂ, ಮತ್ತು ಇವಕ್ಕೆ ಉತ್ತರಿಸುವ ಆ ಒಬ್ಬ ವ್ಯಕ್ತಿಗೂ. ಅದು ನಿಮಗೆ ತಲುಪಿತೇ ಎಂಬುದನ್ನೂ ದಾಖಲಿಸಲಾಗುತ್ತದೆ: ಇಮೇಲ್ ಸೇವೆ ಅದನ್ನು ನಿರಾಕರಿಸಿದರೆ, ಉತ್ತರ ಇಲ್ಲಿಯೇ ಇರುತ್ತದೆ ಮತ್ತು "ಕಳುಹಿಸಲಾಯಿತು" ಎಂದು ಹೇಳುವ ಬದಲು ಪರದೆಯ ಮೇಲೆ ಅದು ತಿಳಿಸುತ್ತದೆ.
  • Your message, as you wrote it, and the date.
  • Whether you were logged in. If you were, the message is linked to your account so a reply can find you. If you were not, nothing connects the message to anything but the address you typed.
  • ನೀವು ಬರೆದಂತೆಯೇ ನಿಮ್ಮ ಸಂದೇಶ, ಮತ್ತು ದಿನಾಂಕ.
  • ನೀವು ಲಾಗಿನ್ ಆಗಿದ್ದಿರೋ ಇಲ್ಲವೋ ಎಂಬುದು. ಆಗಿದ್ದರೆ, ಉತ್ತರ ನಿಮ್ಮನ್ನು ತಲುಪಲಿ ಎಂದು ಸಂದೇಶವನ್ನು ನಿಮ್ಮ ಖಾತೆಗೆ ಜೋಡಿಸಲಾಗುತ್ತದೆ. ಆಗಿಲ್ಲದಿದ್ದರೆ, ನೀವು ಬರೆದ ವಿಳಾಸವನ್ನು ಬಿಟ್ಟು ಬೇರೆ ಯಾವುದಕ್ಕೂ ಆ ಸಂದೇಶ ಸಂಬಂಧಿಸಿಲ್ಲ.
  • The IP address the message came from. This is used for one purpose: to count how many messages have come from one address in the last hour. That is so this form cannot be used to send mail to strangers. It is removed from the message after thirty days. It is stored as a number, not as a name, and it is not used to work out where you are. Five an hour are allowed for one email address and twenty for one internet address. The second figure is higher because a hostel or a college shares one. It is stored as a number, not as a name, and it is not used to work out where you are.
  • ಸಂದೇಶ ಬಂದ ಐಪಿ ವಿಳಾಸ. ಇದನ್ನು ಒಂದೇ ಉದ್ದೇಶಕ್ಕೆ ಬಳಸಲಾಗುತ್ತದೆ: ಕಳೆದ ಒಂದು ಗಂಟೆಯಲ್ಲಿ ಒಂದೇ ವಿಳಾಸದಿಂದ ಎಷ್ಟು ಸಂದೇಶ ಬಂದಿವೆ ಎಂದು ಎಣಿಸಲು. ಈ ನಮೂನೆಯನ್ನು ಅಪರಿಚಿತರಿಗೆ ಇಮೇಲ್ ಕಳುಹಿಸುವ ಸಾಧನವಾಗಿ ಬಳಸಲಾಗದಿರಲಿ ಎಂದು ಇದು. ಒಂದು ಇಮೇಲ್ ವಿಳಾಸಕ್ಕೆ ಗಂಟೆಗೆ ಐದು, ಒಂದು ಅಂತರ್ಜಾಲ ವಿಳಾಸಕ್ಕೆ ಇಪ್ಪತ್ತು. ಎರಡನೆಯ ಸಂಖ್ಯೆ ಹೆಚ್ಚಿರುವುದಕ್ಕೆ ಕಾರಣ, ಹಾಸ್ಟೆಲ್ ಅಥವಾ ಕಾಲೇಜಿನಲ್ಲಿ ಎಲ್ಲರಿಗೂ ಒಂದೇ ವಿಳಾಸ ಇರುತ್ತದೆ. ಮೂವತ್ತು ದಿನಗಳ ನಂತರ ಅದನ್ನು ಸಂದೇಶದಿಂದ ತೆಗೆದುಹಾಕಲಾಗುತ್ತದೆ. ಇದನ್ನು ಹೆಸರಾಗಿ ಅಲ್ಲ, ಸಂಖ್ಯೆಯಾಗಿ ಸಂಗ್ರಹಿಸಲಾಗುತ್ತದೆ, ಮತ್ತು ನೀವು ಎಲ್ಲಿದ್ದೀರಿ ಎಂದು ಕಂಡುಹಿಡಿಯಲು ಬಳಸುವುದಿಲ್ಲ.

Your message is saved first. Only then is an acknowledgement emailed to you, with a short reference you can quote if you write again. The order matters. If the email were attempted first and the mail service were slow, you would see an error and your message would be gone. If the acknowledgement cannot be sent, the page tells you so plainly, instead of saying your email is on its way.

ಮೊದಲು ನಿಮ್ಮ ಸಂದೇಶವನ್ನು ಉಳಿಸಿಕೊಳ್ಳಲಾಗುತ್ತದೆ; ಆಮೇಲಷ್ಟೇ ನಿಮಗೆ ಸ್ವೀಕೃತಿಯ ಇಮೇಲ್ ಕಳುಹಿಸಲಾಗುತ್ತದೆ. ಅದರಲ್ಲಿ ಒಂದು ಚಿಕ್ಕ ಉಲ್ಲೇಖ ಸಂಖ್ಯೆ ಇರುತ್ತದೆ; ಮತ್ತೆ ಬರೆಯುವಾಗ ಅದನ್ನು ತಿಳಿಸಬಹುದು. ಈ ಕ್ರಮ ಮುಖ್ಯ. ಮೊದಲು ಇಮೇಲ್ ಕಳುಹಿಸಲು ಹೋಗಿ ಇಮೇಲ್ ಸೇವೆ ನಿಧಾನವಾದರೆ, ನಿಮಗೆ ದೋಷ ಕಾಣಿಸಿ ನಿಮ್ಮ ಸಂದೇಶವೇ ಹೋಗಿಬಿಡುತ್ತಿತ್ತು. ಸ್ವೀಕೃತಿ ಕಳುಹಿಸಲು ಆಗದಿದ್ದರೆ, "ಇಮೇಲ್ ಬರುತ್ತಿದೆ" ಎನ್ನುವ ಬದಲು ಪುಟವೇ ನಿಮಗೆ ನೇರವಾಗಿ ಅದನ್ನು ತಿಳಿಸುತ್ತದೆ.

A copy of your message is also emailed to Dr Umakanth. Your address is set as the reply address, so that pressing reply answers you rather than nobody. Both of those emails leave through an outside email delivery service. To deliver them, that service handles your address and the text of your message. Email is not private in transit at the best of times. That is one more reason not to put anything into this form that you would not put on a postcard.

ನಿಮ್ಮ ಸಂದೇಶದ ಪ್ರತಿಯೊಂದು ಡಾ. ಉಮಾಕಾಂತ್ ಅವರಿಗೂ ಇಮೇಲ್ ಆಗುತ್ತದೆ. ಅದರಲ್ಲಿ ಉತ್ತರಿಸುವ ವಿಳಾಸವಾಗಿ ನಿಮ್ಮ ವಿಳಾಸವನ್ನೇ ಹಾಕಲಾಗಿರುತ್ತದೆ, ಹಾಗಾಗಿ "ಉತ್ತರಿಸಿ" ಒತ್ತಿದರೆ ಉತ್ತರ ನಿಮಗೇ ಬರುತ್ತದೆ. ಈ ಎರಡೂ ಇಮೇಲುಗಳು ಹೊರಗಿನ ಒಂದು ಇಮೇಲ್ ರವಾನೆ ಸೇವೆಯ ಮೂಲಕ ಹೋಗುತ್ತವೆ. ಅವನ್ನು ತಲುಪಿಸುವ ಸಲುವಾಗಿ ಆ ಸೇವೆಗೆ ನಿಮ್ಮ ವಿಳಾಸ ಮತ್ತು ಸಂದೇಶದ ಪಠ್ಯ ಸಿಗುತ್ತವೆ. ಒಳ್ಳೆಯ ದಿನಗಳಲ್ಲೂ ಇಮೇಲ್ ಎಂಬುದು ದಾರಿಯಲ್ಲಿ ಖಾಸಗಿಯಾಗಿ ಉಳಿಯುವುದಿಲ್ಲ. ಪೋಸ್ಟ್‌ಕಾರ್ಡಿನಲ್ಲಿ ಬರೆಯಲಾಗದ್ದನ್ನು ಈ ನಮೂನೆಯಲ್ಲೂ ಬರೆಯಬಾರದು ಎನ್ನಲು ಇದೂ ಒಂದು ಕಾರಣ.

Please do not paste a report, a hospital number, an Aadhaar number or anybody else's details into the message box. Tell us which tool, what you entered and what looked wrong. That is enough to fix it, and it is all that is asked for.

ವರದಿ, ಆಸ್ಪತ್ರೆಯ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ಬೇರೆಯವರ ವಿವರಗಳನ್ನು ಸಂದೇಶದ ಜಾಗದಲ್ಲಿ ಹಾಕಬೇಡಿ. ಯಾವ ಪರಿಕರ, ನೀವು ಏನು ನಮೂದಿಸಿದಿರಿ, ಮತ್ತು ಏನು ತಪ್ಪಾಗಿ ಕಂಡಿತು; ಇಷ್ಟನ್ನು ತಿಳಿಸಿ. ಸರಿಪಡಿಸಲು ಇಷ್ಟೇ ಸಾಕು, ಮತ್ತು ಕೇಳುತ್ತಿರುವುದೂ ಇಷ್ಟನ್ನೇ.

How long it is kept: a message is kept while the problem it describes still matters to the safety of this site. There is no automatic deletion of contact messages. If you want yours removed, ask, and it will be removed. A bug report that somebody else's safety may depend on is kept even after an account is closed. But the link to the account is broken, so what remains is the report and not the person.

ಎಷ್ಟು ಕಾಲ ಇಟ್ಟುಕೊಳ್ಳಲಾಗುತ್ತದೆ: ಸಂದೇಶದಲ್ಲಿ ಹೇಳಿದ ಸಮಸ್ಯೆ ಈ ತಾಣದ ಸುರಕ್ಷತೆಗೆ ಮುಖ್ಯವಾಗಿರುವವರೆಗೆ ಅದನ್ನು ಇಟ್ಟುಕೊಳ್ಳಲಾಗುತ್ತದೆ. ಸಂಪರ್ಕ ಸಂದೇಶಗಳು ತಾನಾಗಿಯೇ ಅಳಿಸಿಹೋಗುವ ವ್ಯವಸ್ಥೆ ಇಲ್ಲ. ನಿಮ್ಮದನ್ನು ತೆಗೆದುಹಾಕಬೇಕೆಂದರೆ ಕೇಳಿ; ತೆಗೆದುಹಾಕಲಾಗುವುದು. ಬೇರೊಬ್ಬರ ಸುರಕ್ಷತೆ ಅವಲಂಬಿಸಿರಬಹುದಾದ ದೋಷ ವರದಿಯನ್ನು ಖಾತೆ ಮುಚ್ಚಿದ ನಂತರವೂ ಇಟ್ಟುಕೊಳ್ಳಲಾಗುತ್ತದೆ. ಆದರೆ ಆ ಖಾತೆಯ ಜೊತೆಗಿನ ಕೊಂಡಿಯನ್ನು ಕಡಿದುಹಾಕಲಾಗುತ್ತದೆ. ಉಳಿಯುವುದು ವರದಿಯೇ ಹೊರತು ವ್ಯಕ್ತಿಯಲ್ಲ.

Accounts ಖಾತೆಗಳು

An account exists for one reason: so that you can keep your own results and see them change. Seeing your own weight or your own heart risk move over a year is the whole value of it. Every tool on this site works fully without an account, and it always will.

ಖಾತೆ ಇರುವುದು ಒಂದೇ ಕಾರಣಕ್ಕೆ: ನಿಮ್ಮದೇ ಫಲಿತಾಂಶಗಳನ್ನು ಉಳಿಸಿಕೊಂಡು, ಅವು ಹೇಗೆ ಬದಲಾಗುತ್ತಿವೆ ಎಂದು ನೋಡಲು. ಒಂದು ವರ್ಷದಲ್ಲಿ ನಿಮ್ಮ ತೂಕ ಅಥವಾ ಹೃದಯದ ಅಪಾಯ ಎತ್ತ ಸಾಗುತ್ತಿದೆ ಎಂದು ಕಾಣುವುದೇ ಇದರ ಪೂರ್ತಿ ಪ್ರಯೋಜನ. ಈ ತಾಣದ ಎಲ್ಲ ಪರಿಕರಗಳೂ ಖಾತೆ ಇಲ್ಲದೆಯೇ ಪೂರ್ಣವಾಗಿ ಕೆಲಸ ಮಾಡುತ್ತವೆ, ಮತ್ತು ಮುಂದೆಯೂ ಹಾಗೆಯೇ ಇರುತ್ತವೆ.

There are no passwords. You sign in with a numeric code sent to your email address. What is held for an account is this:

ಇಲ್ಲಿ ಪಾಸ್‌ವರ್ಡ್ ಎಂಬುದೇ ಇಲ್ಲ. ನಿಮ್ಮ ಇಮೇಲ್ ವಿಳಾಸಕ್ಕೆ ಬರುವ ಸಂಖ್ಯೆಯ ಸಂಕೇತದಿಂದ ಲಾಗಿನ್ ಆಗುತ್ತೀರಿ. ಖಾತೆಗಾಗಿ ಇಟ್ಟುಕೊಳ್ಳುವುದು ಇಷ್ಟು:

  • Your email address, which is what the account is, and the date you opened it and the date you last used it.
  • ನಿಮ್ಮ ಇಮೇಲ್ ವಿಳಾಸ. ಖಾತೆ ಎಂದರೆ ಅದೇ. ಜೊತೆಗೆ ಖಾತೆ ತೆರೆದ ದಿನಾಂಕ ಮತ್ತು ಕೊನೆಯ ಬಾರಿ ಬಳಸಿದ ದಿನಾಂಕ.
  • A name to call you by, only if you set one. It starts empty and stays empty unless you fill it. A field that everybody fills because the form insists on it is a field that collects identifying information for nothing.
  • ನಿಮ್ಮನ್ನು ಸಂಬೋಧಿಸಲು ಒಂದು ಹೆಸರು, ನೀವು ಕೊಟ್ಟರೆ ಮಾತ್ರ. ಅದು ಖಾಲಿಯಾಗಿಯೇ ಆರಂಭವಾಗುತ್ತದೆ, ನೀವು ತುಂಬದ ಹೊರತು ಖಾಲಿಯಾಗಿಯೇ ಉಳಿಯುತ್ತದೆ. ನಮೂನೆ ಒತ್ತಾಯಿಸಿದ ಕಾರಣಕ್ಕೆ ಎಲ್ಲರೂ ತುಂಬುವ ಜಾಗವೆಂದರೆ, ಯಾವ ಪ್ರಯೋಜನವೂ ಇಲ್ಲದೆ ಗುರುತಿನ ವಿವರ ಸಂಗ್ರಹಿಸುವ ಜಾಗ.
  • Whether you last chose English or Kannada. This is kept on the server and not only in your browser. The reason is that a sign-in email has to be written in some language before you have opened the site. It is a record of what you last chose here, and not a claim about you.
  • ನೀವು ಕೊನೆಯ ಬಾರಿ ಇಂಗ್ಲಿಷ್ ಆರಿಸಿದಿರೋ ಕನ್ನಡ ಆರಿಸಿದಿರೋ ಎಂಬುದು. ಇದನ್ನು ಬ್ರೌಸರಿನಲ್ಲಿ ಮಾತ್ರವಲ್ಲದೆ ಸರ್ವರಿನಲ್ಲೂ ಇಡಲಾಗುತ್ತದೆ. ಏಕೆಂದರೆ ನೀವು ತಾಣ ತೆರೆಯುವ ಮೊದಲೇ ಲಾಗಿನ್ ಇಮೇಲ್ ಯಾವುದಾದರೂ ಒಂದು ಭಾಷೆಯಲ್ಲಿ ಬರೆಯಬೇಕಾಗುತ್ತದೆ. ಇದು ನೀವು ಇಲ್ಲಿ ಕೊನೆಯ ಬಾರಿ ಆರಿಸಿದ್ದರ ದಾಖಲೆಯೇ ಹೊರತು, ನಿಮ್ಮ ಬಗ್ಗೆ ಮಾಡಿದ ಹೇಳಿಕೆ ಅಲ್ಲ.
  • The sign-in codes, but never the code itself. What is stored is a scrambled form of it, from which the code cannot be worked back out. So a database somebody managed to read would not let them sign in as you. Three other things are stored with it. The first is the address that asked for the code, so that this cannot be used to send mail to strangers. The second is the time the code stops working. The third is the number of wrong tries. Five wrong tries is what makes a six digit code safe. A million combinations is nothing to a machine, and a great deal to a person allowed five attempts.
  • ಲಾಗಿನ್ ಸಂಕೇತಗಳು, ಆದರೆ ಸಂಕೇತವನ್ನೇ ಅಲ್ಲ. ಸಂಗ್ರಹವಾಗುವುದು ಅದರ ತಿರುಚಿದ ರೂಪ. ಅದರಿಂದ ಮೂಲ ಸಂಕೇತವನ್ನು ಹಿಂದಕ್ಕೆ ಪಡೆಯಲಾಗದು. ಹಾಗಾಗಿ ಯಾರಾದರೂ ದತ್ತಸಂಚಯವನ್ನು ಓದಿದರೂ ಅವರು ನಿಮ್ಮ ಹೆಸರಿನಲ್ಲಿ ಲಾಗಿನ್ ಆಗಲಾರರು. ಜೊತೆಗೆ, ಸಂಕೇತ ಕೇಳಿದ ವಿಳಾಸ, ಸಂಕೇತ ಯಾವಾಗ ನಿಷ್ಕ್ರಿಯವಾಗುತ್ತದೆ ಎಂಬ ಸಮಯ, ಮತ್ತು ಎಷ್ಟು ಬಾರಿ ತಪ್ಪು ಪ್ರಯತ್ನವಾಯಿತು ಎಂಬ ಎಣಿಕೆ ಇರುತ್ತವೆ. ಆರು ಅಂಕಿಯ ಸಂಕೇತ ಸುರಕ್ಷಿತವಾಗುವುದೇ ಈ ಐದು ಪ್ರಯತ್ನಗಳ ಮಿತಿಯಿಂದ. ಹತ್ತು ಲಕ್ಷ ಸಾಧ್ಯತೆಗಳು ಯಂತ್ರಕ್ಕೆ ಏನೂ ಅಲ್ಲ; ಐದೇ ಅವಕಾಶ ಇರುವ ವ್ಯಕ್ತಿಗೆ ಅದು ಬಹಳ ದೊಡ್ಡದು.
  • The results you choose to save, each with the tool it came from, the date, and a short label you write yourself.
  • ನೀವು ಉಳಿಸಿಕೊಳ್ಳಲು ಆರಿಸಿದ ಫಲಿತಾಂಶಗಳು, ಪ್ರತಿಯೊಂದರ ಜೊತೆಗೆ ಅದು ಬಂದ ಪರಿಕರ, ದಿನಾಂಕ, ಮತ್ತು ನೀವೇ ಬರೆದ ಚಿಕ್ಕ ಶೀರ್ಷಿಕೆ.
  • The tools you mark as favourites. A list of tool names against your account, with the date you marked each one, which is what puts the list in order. Nothing else: no record of using them, and no counts.
  • ನೀವು ಮೆಚ್ಚಿನವೆಂದು ಗುರುತಿಸಿದ ಪರಿಕರಗಳು. ನಿಮ್ಮ ಖಾತೆಯ ಜೊತೆಗೆ ಪರಿಕರಗಳ ಹೆಸರುಗಳ ಪಟ್ಟಿ, ಮತ್ತು ಪ್ರತಿಯೊಂದನ್ನೂ ಯಾವಾಗ ಗುರುತಿಸಿದಿರಿ ಎಂಬ ದಿನಾಂಕ. ಪಟ್ಟಿಯ ಕ್ರಮ ನಿರ್ಧಾರವಾಗುವುದು ಅದರಿಂದಲೇ. ಬೇರೇನೂ ಇಲ್ಲ: ಬಳಸಿದ ದಾಖಲೆಯಿಲ್ಲ, ಎಣಿಕೆಯಿಲ್ಲ.
  • Which tools you have opened, and when you last opened each one. This is the most revealing thing kept about you here, and it is worth being exact about what it is and is not. It is ONE ROW PER TOOL, holding the last time you opened it. It is not one row per visit. So it cannot say how often you opened anything. That was made unanswerable on purpose. How many times somebody opens a tool about their own health is more than a list of six names needs to know. You can clear the whole list at any time, from your account page, without closing your account.
  • ನೀವು ಯಾವ ಪರಿಕರಗಳನ್ನು ತೆರೆದಿದ್ದೀರಿ, ಮತ್ತು ಪ್ರತಿಯೊಂದನ್ನೂ ಕೊನೆಯದಾಗಿ ಯಾವಾಗ ತೆರೆದಿರಿ. ಇಲ್ಲಿ ನಿಮ್ಮ ಬಗ್ಗೆ ಇಟ್ಟುಕೊಳ್ಳುವ ಅತ್ಯಂತ ಸೂಕ್ಷ್ಮ ಸಂಗತಿ ಇದು; ಆದ್ದರಿಂದ ಅದು ಏನು ಮತ್ತು ಏನಲ್ಲ ಎಂದು ನಿಖರವಾಗಿ ಹೇಳುವುದು ಸರಿ. ಇದು ಪ್ರತಿ ಪರಿಕರಕ್ಕೆ ಒಂದೇ ಸಾಲು; ಅದರಲ್ಲಿ ನೀವು ಕೊನೆಯದಾಗಿ ತೆರೆದ ಸಮಯ ಇರುತ್ತದೆ. ಪ್ರತಿ ಭೇಟಿಗೆ ಒಂದು ಸಾಲಲ್ಲ. ಹಾಗಾಗಿ ನೀವು ಎಷ್ಟು ಬಾರಿ ತೆರೆದಿರಿ ಎಂದು ಇದು ಹೇಳಲಾರದು; ಅದನ್ನು ಉದ್ದೇಶಪೂರ್ವಕವಾಗಿಯೇ ಉತ್ತರಿಸಲಾಗದಂತೆ ಮಾಡಲಾಗಿದೆ. ತನ್ನ ಆರೋಗ್ಯದ ಬಗೆಗಿನ ಪರಿಕರವನ್ನು ಒಬ್ಬರು ಎಷ್ಟು ಬಾರಿ ತೆರೆಯುತ್ತಾರೆ ಎಂಬುದು, ಆರು ಹೆಸರುಗಳ ಪಟ್ಟಿಗೆ ತಿಳಿಯಬೇಕಾದುದಕ್ಕಿಂತ ಹೆಚ್ಚಿನ ಸಂಗತಿ. ಖಾತೆಯನ್ನು ಮುಚ್ಚದೆಯೇ, ನಿಮ್ಮ ಖಾತೆ ಪುಟದಿಂದ ಈ ಪಟ್ಟಿಯನ್ನು ಯಾವಾಗ ಬೇಕಾದರೂ ಪೂರ್ತಿ ಅಳಿಸಬಹುದು.
  • How many times you have logged in. And, if you ever move your account to a different email address, the date you moved it. The count is a single number and cannot be used to work out when you were here. The date exists because no warning is sent to your old address when an account moves. A warning sent there would go to whoever already controls that mailbox. So the change is recorded on the account instead, where you can see it.
  • ನೀವು ಎಷ್ಟು ಬಾರಿ ಲಾಗಿನ್ ಆಗಿದ್ದೀರಿ. ಮತ್ತು, ಎಂದಾದರೂ ನಿಮ್ಮ ಖಾತೆಯನ್ನು ಬೇರೆ ಇಮೇಲ್ ವಿಳಾಸಕ್ಕೆ ಸರಿಸಿದರೆ, ಸರಿಸಿದ ದಿನಾಂಕ. ಎಣಿಕೆ ಒಂದೇ ಸಂಖ್ಯೆ; ನೀವು ಯಾವಾಗ ಇಲ್ಲಿದ್ದಿರಿ ಎಂದು ಅದರಿಂದ ತಿಳಿಯಲು ಆಗುವುದಿಲ್ಲ. ಖಾತೆ ಸ್ಥಳಾಂತರವಾದಾಗ ನಿಮ್ಮ ಹಳೆಯ ವಿಳಾಸಕ್ಕೆ ಎಚ್ಚರಿಕೆಯ ಸಂದೇಶ ಕಳುಹಿಸುವುದಿಲ್ಲ; ಆದ್ದರಿಂದ ಈ ದಿನಾಂಕ ಇದೆ. ಅಂಥ ಎಚ್ಚರಿಕೆ ಆ ಇಮೇಲನ್ನು ಈಗಾಗಲೇ ನಿಯಂತ್ರಿಸುತ್ತಿರುವವರಿಗೇ ಹೋಗುತ್ತದೆ; ಹಾಗಾಗಿ ಬದಲಾವಣೆಯನ್ನು ಖಾತೆಯಲ್ಲೇ ದಾಖಲಿಸಲಾಗುತ್ತದೆ, ಅಲ್ಲಿ ನೀವು ಅದನ್ನು ನೋಡಬಹುದು.

A saved result is health information about a named living person, which is you. The Digital Personal Data Protection Act treats that as needing more care than ordinary information. So it is locked before it is written down. The numbers and choices in a saved result are encrypted. The key that unlocks them is kept in a file outside the public part of the server, not in the database. Somebody who obtained a copy of the database alone would get email addresses, tool names and dates. They would not get your blood pressure.

ಉಳಿಸಿಕೊಂಡ ಫಲಿತಾಂಶವೆಂದರೆ ಹೆಸರಿರುವ ಒಬ್ಬ ಜೀವಂತ ವ್ಯಕ್ತಿಯ ಆರೋಗ್ಯ ಮಾಹಿತಿ, ಅಂದರೆ ನಿಮ್ಮದೇ ಮಾಹಿತಿ. ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆ ಇದನ್ನು ಸಾಮಾನ್ಯ ಮಾಹಿತಿಗಿಂತ ಹೆಚ್ಚಿನ ಎಚ್ಚರಿಕೆ ಬೇಡುವಂಥದ್ದು ಎಂದು ಪರಿಗಣಿಸುತ್ತದೆ. ಹಾಗಾಗಿ ಬರೆದಿಡುವ ಮೊದಲೇ ಅದಕ್ಕೆ ಬೀಗ ಹಾಕಿ ಇಡಲಾಗುತ್ತದೆ. ಉಳಿಸಿಕೊಂಡ ಫಲಿತಾಂಶದಲ್ಲಿನ ಅಂಕಿಗಳು ಮತ್ತು ಆಯ್ಕೆಗಳು ಬೀಗ ಹಾಕಿದ ಸ್ಥಿತಿಯಲ್ಲಿರುತ್ತವೆ. ಆ ಬೀಗದ ಕೈ ಇರುವುದು ಸರ್ವರಿನ ಸಾರ್ವಜನಿಕ ಭಾಗದ ಹೊರಗಿನ ಒಂದು ಕಡತದಲ್ಲಿ; ದತ್ತಸಂಚಯದಲ್ಲಿ ಅಲ್ಲ. ಯಾರಾದರೂ ದತ್ತಸಂಚಯದ ಪ್ರತಿಯನ್ನಷ್ಟೇ ಪಡೆದರೆ ಅವರಿಗೆ ಸಿಗುವುದು ಇಮೇಲ್ ವಿಳಾಸಗಳು, ಪರಿಕರಗಳ ಹೆಸರುಗಳು ಮತ್ತು ದಿನಾಂಕಗಳು. ನಿಮ್ಮ ರಕ್ತದೊತ್ತಡ ಅವರಿಗೆ ಸಿಗುವುದಿಲ್ಲ.

One thing is not locked, and you should know which. The short label you give a saved result, such as "before I started walking", is stored as you typed it. It is needed to build the list you choose from. Keep it short, and do not write anything into it that you would not want read.

ಒಂದು ವಿಷಯಕ್ಕೆ ಮಾತ್ರ ಬೀಗ ಇರುವುದಿಲ್ಲ, ಅದು ಯಾವುದೆಂದು ನಿಮಗೆ ತಿಳಿದಿರಬೇಕು. "ನಡಿಗೆ ಆರಂಭಿಸುವ ಮೊದಲು" ಎಂಬಂಥ, ಉಳಿಸಿಕೊಂಡ ಫಲಿತಾಂಶಕ್ಕೆ ನೀವು ಕೊಡುವ ಚಿಕ್ಕ ಶೀರ್ಷಿಕೆ ನೀವು ಬರೆದಂತೆಯೇ ಸಂಗ್ರಹವಾಗುತ್ತದೆ. ನೀವು ಆರಿಸಿಕೊಳ್ಳುವ ಪಟ್ಟಿಯನ್ನು ಕಟ್ಟಲು ಅದು ಬೇಕಾಗುತ್ತದೆ. ಅದನ್ನು ಚಿಕ್ಕದಾಗಿ ಇಡಿ, ಮತ್ತು ಬೇರೆಯವರು ಓದಬಾರದೆಂದು ನೀವು ಬಯಸುವ ಯಾವುದನ್ನೂ ಅಲ್ಲಿ ಬರೆಯಬೇಡಿ.

This paragraph said the opposite until version 1.1, and the correction is the reason for that version. Version 1.0 said there was no list of favourite tools and no record of which tools you had opened. That was true when it was written. It stopped being true four days later, when both were added so that an account page would have something on it. It is corrected here rather than quietly rewritten, because a notice you cannot trust to admit a change is not worth reading.

What has not changed is the limit on it: the record holds the last time you opened each tool and cannot say how often. Nobody here is counting which pages you read, and no such counting exists for people without accounts at all.

ಆವೃತ್ತಿ 1.1ರವರೆಗೆ ಈ ಪ್ಯಾರಾ ಇದಕ್ಕೆ ವಿರುದ್ಧವಾಗಿ ಹೇಳುತ್ತಿತ್ತು; ಆ ತಿದ್ದುಪಡಿಯೇ ಈ ಆವೃತ್ತಿಗೆ ಕಾರಣ. ಮೆಚ್ಚಿನ ಪರಿಕರಗಳ ಪಟ್ಟಿ ಇಲ್ಲ, ನೀವು ಯಾವ ಪರಿಕರ ತೆರೆದಿರಿ ಎಂಬ ದಾಖಲೆಯೂ ಇಲ್ಲ ಎಂದು ಆವೃತ್ತಿ 1.0 ಹೇಳಿತ್ತು. ಬರೆದಾಗ ಅದು ನಿಜವಾಗಿತ್ತು; ನಾಲ್ಕು ದಿನಗಳ ನಂತರ ಖಾತೆ ಪುಟದಲ್ಲಿ ತೋರಿಸಲು ಏನಾದರೂ ಇರಲಿ ಎಂದು ಈ ಎರಡನ್ನೂ ಸೇರಿಸಿದಾಗ ಅದು ನಿಜವಲ್ಲದಾಯಿತು. ಸದ್ದಿಲ್ಲದೆ ಬದಲಿಸುವ ಬದಲು ಇಲ್ಲಿ ತಿದ್ದಿ ಹೇಳಲಾಗಿದೆ; ಏಕೆಂದರೆ ಬದಲಾವಣೆಯನ್ನು ಒಪ್ಪಿಕೊಳ್ಳದ ಸೂಚನೆಯನ್ನು ಓದಿ ಪ್ರಯೋಜನವಿಲ್ಲ.

ಬದಲಾಗದಿರುವುದು ಅದರ ಮಿತಿ: ಪ್ರತಿ ಪರಿಕರವನ್ನು ನೀವು ಕೊನೆಯದಾಗಿ ತೆರೆದ ಸಮಯ ಮಾತ್ರ ಆ ದಾಖಲೆಯಲ್ಲಿ ಇರುತ್ತದೆ; ಎಷ್ಟು ಬಾರಿ ಎಂದು ಅದು ಹೇಳಲಾರದು. ನೀವು ಯಾವ ಪುಟ ಓದಿದಿರಿ ಎಂದು ಇಲ್ಲಿ ಯಾರೂ ಎಣಿಸುತ್ತಿಲ್ಲ, ಮತ್ತು ಖಾತೆ ಇಲ್ಲದವರಿಗೆ ಅಂಥ ಎಣಿಕೆಯೇ ಇಲ್ಲ.

How long a saved result is kept: 24 months, that is 730 days, and then it is deleted. The sweep that deletes them runs when somebody signs in, so on a quiet week a result can outlive its date by a few days. It is a limit, not a stopwatch. The reason for a period that long is simple. The whole point of keeping a result is to compare it with the next one. A one year limit would delete exactly the reading that an annual check-up wants to compare against.

ಉಳಿಸಿಕೊಂಡ ಫಲಿತಾಂಶ ಎಷ್ಟು ಕಾಲ ಇರುತ್ತದೆ: 24 ತಿಂಗಳು, ಅಂದರೆ 730 ದಿನ. ಆಮೇಲೆ ಅದು ಅಳಿಸಿಹೋಗುತ್ತದೆ. ಈ ಅಳಿಸುವಿಕೆ ನಡೆಯುವುದು ಯಾರಾದರೂ ಲಾಗಿನ್ ಆದಾಗ. ಹಾಗಾಗಿ ಶಾಂತ ವಾರದಲ್ಲಿ ಒಂದು ಫಲಿತಾಂಶ ತನ್ನ ದಿನಾಂಕವನ್ನು ಒಂದೆರಡು ದಿನ ಮೀರಬಹುದು. ಇದು ಒಂದು ಮಿತಿಯೇ ಹೊರತು ಗಡಿಯಾರವಲ್ಲ. ಇಷ್ಟು ದೀರ್ಘ ಅವಧಿ ಏಕೆಂದರೆ, ಫಲಿತಾಂಶ ಉಳಿಸಿಕೊಳ್ಳುವುದರ ಉದ್ದೇಶವೇ ಮುಂದಿನದರ ಜೊತೆ ಹೋಲಿಸುವುದು. ಒಂದು ವರ್ಷದ ಮಿತಿ ಇಟ್ಟರೆ, ವಾರ್ಷಿಕ ತಪಾಸಣೆಯಲ್ಲಿ ಹೋಲಿಸಬೇಕಾದ ಹಿಂದಿನ ಅಳತೆಯನ್ನೇ ಅಳಿಸಿಬಿಟ್ಟಂತಾಗುತ್ತದೆ.

Sign-in codes, and the addresses that asked for them, have no value once the code has been used or has expired. So they are the shortest lived thing kept here. They are removed on a regular sweep, rather than being held with the account.

ಲಾಗಿನ್ ಸಂಕೇತ ಬಳಕೆಯಾದ ಮೇಲೆ ಅಥವಾ ಅವಧಿ ಮುಗಿದ ಮೇಲೆ ಅದಕ್ಕೂ, ಅದನ್ನು ಕೇಳಿದ ವಿಳಾಸಕ್ಕೂ ಯಾವ ಬೆಲೆಯೂ ಇರುವುದಿಲ್ಲ. ಹಾಗಾಗಿ ಇಲ್ಲಿ ಇಟ್ಟುಕೊಳ್ಳುವುದರಲ್ಲಿ ಅವೇ ಅತಿ ಕಡಿಮೆ ಕಾಲ ಉಳಿಯುವಂಥವು. ಅವನ್ನು ಖಾತೆಯ ಜೊತೆ ಇಡದೆ, ಆಗಾಗ ಸ್ವಚ್ಛಗೊಳಿಸಿ ತೆಗೆದುಹಾಕಲಾಗುತ್ತದೆ.

Closing an account deletes it and everything saved in it, in one action. The deletion of the saved results is enforced by the database itself, and not by code that could be half written. It is immediate and it cannot be undone. You will not have to ask anybody and you will not have to explain.

ಖಾತೆ ಮುಚ್ಚಿದರೆ ಅದೂ, ಅದರಲ್ಲಿ ಉಳಿಸಿಕೊಂಡ ಎಲ್ಲವೂ ಒಂದೇ ಕ್ರಿಯೆಯಲ್ಲಿ ಅಳಿಸಿಹೋಗುತ್ತವೆ. ಉಳಿಸಿಕೊಂಡ ಫಲಿತಾಂಶಗಳ ಅಳಿಸುವಿಕೆಯನ್ನು ದತ್ತಸಂಚಯವೇ ಜಾರಿಗೊಳಿಸುತ್ತದೆ; ಅರ್ಧ ಬರೆದ ಕೋಡ್ ಅಲ್ಲ. ಇದು ತಕ್ಷಣವೇ ನಡೆಯುತ್ತದೆ ಮತ್ತು ಹಿಂದಕ್ಕೆ ಪಡೆಯಲಾಗದು. ಇದಕ್ಕಾಗಿ ನೀವು ಯಾರನ್ನೂ ಕೇಳಬೇಕಿಲ್ಲ, ಕಾರಣವನ್ನೂ ಹೇಳಬೇಕಿಲ್ಲ.

Your Rights, And How To Use Them ನಿಮ್ಮ ಹಕ್ಕುಗಳು ಮತ್ತು ಅವನ್ನು ಬಳಸುವ ಬಗೆ

The Digital Personal Data Protection Act 2023 gives you the rights below. They cover information about you. They are yours by law, and you do not have to give a reason for using any of them.

ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆ 2023 ನಿಮ್ಮ ಬಗೆಗಿನ ಮಾಹಿತಿಯ ಮೇಲೆ ಈ ಕೆಳಗಿನ ಹಕ್ಕುಗಳನ್ನು ನಿಮಗೆ ಕೊಡುತ್ತದೆ. ಇವು ಕಾನೂನಿನ ಪ್ರಕಾರ ನಿಮ್ಮದೇ. ಇವುಗಳಲ್ಲಿ ಯಾವುದನ್ನು ಬಳಸಲೂ ನೀವು ಕಾರಣ ಕೊಡಬೇಕಿಲ್ಲ.

  • To see what is held about you. Ask through the contact form or by email, and you will be told everything that is held. Today that can only be a message you sent us, and the address you sent it from. When accounts start, your account page will show you all of it, without your having to ask anybody.
  • ನಿಮ್ಮ ಬಗ್ಗೆ ಏನಿದೆ ಎಂದು ನೋಡುವ ಹಕ್ಕು. ಸಂಪರ್ಕ ನಮೂನೆಯ ಮೂಲಕ ಅಥವಾ ಇಮೇಲ್ ಮೂಲಕ ಕೇಳಿ; ಏನೆಲ್ಲ ಇದೆ ಎಂದು ತಿಳಿಸಲಾಗುವುದು. ಸದ್ಯಕ್ಕೆ ಇರಬಹುದಾದದ್ದು ನೀವು ಕಳುಹಿಸಿದ ಸಂದೇಶ ಮತ್ತು ಅದನ್ನು ಕಳುಹಿಸಿದ ವಿಳಾಸ ಮಾತ್ರ. ಖಾತೆಗಳು ಆರಂಭವಾದ ಮೇಲೆ, ಯಾರನ್ನೂ ಕೇಳದೆಯೇ ನಿಮ್ಮ ಖಾತೆಯ ಪುಟದಲ್ಲೇ ಎಲ್ಲವೂ ನಿಮಗೆ ಕಾಣುತ್ತದೆ.
  • To have it corrected or completed. If something held about you is wrong, say so and it will be put right. When accounts start, your name and your language will be yours to change on your own account page.
  • ತಪ್ಪಿದ್ದನ್ನು ಸರಿಪಡಿಸುವ, ಅಪೂರ್ಣವಾದದ್ದನ್ನು ಪೂರ್ಣಗೊಳಿಸುವ ಹಕ್ಕು. ನಿಮ್ಮ ಬಗ್ಗೆ ಇರುವುದರಲ್ಲಿ ಏನಾದರೂ ತಪ್ಪಿದ್ದರೆ ತಿಳಿಸಿ; ಸರಿಪಡಿಸಲಾಗುವುದು. ಖಾತೆಗಳು ಆರಂಭವಾದ ಮೇಲೆ ನಿಮ್ಮ ಹೆಸರು ಮತ್ತು ಭಾಷೆಯನ್ನು ನಿಮ್ಮ ಖಾತೆಯ ಪುಟದಲ್ಲೇ ನೀವು ಬದಲಾಯಿಸಬಹುದು.
  • To have it erased. Ask, and what is held about you is deleted. When accounts start, you will be able to close your own account. That deletes it and everything saved in it, at once and without asking anybody.
  • ಅಳಿಸಿಹಾಕಿಸುವ ಹಕ್ಕು. ಕೇಳಿ; ನಿಮ್ಮ ಬಗ್ಗೆ ಇರುವುದನ್ನು ಅಳಿಸಲಾಗುವುದು. ಖಾತೆಗಳು ಆರಂಭವಾದ ಮೇಲೆ ನಿಮ್ಮ ಖಾತೆಯನ್ನು ನೀವೇ ಮುಚ್ಚಬಹುದು. ಆಗ ಖಾತೆಯೂ, ಅದರಲ್ಲಿ ಉಳಿಸಿಕೊಂಡ ಎಲ್ಲವೂ ಒಟ್ಟಿಗೇ, ಯಾರನ್ನೂ ಕೇಳದೆಯೇ ಅಳಿಸಿಹೋಗುತ್ತವೆ.
  • To take back your consent. You give consent by a deliberate act. Today that means filling in the contact form and pressing Send. Later it will also mean opening an account. You can withdraw it at any time. Nothing on this site becomes unavailable to you if you do, because every tool works without any of it.
  • ಕೊಟ್ಟ ಒಪ್ಪಿಗೆಯನ್ನು ಹಿಂಪಡೆಯುವ ಹಕ್ಕು. ನೀವು ಒಪ್ಪಿಗೆ ಕೊಡುವುದು ಒಂದು ಉದ್ದೇಶಪೂರ್ವಕ ಕ್ರಿಯೆಯಿಂದ. ಸದ್ಯಕ್ಕೆ ಅದೆಂದರೆ ಸಂಪರ್ಕ ನಮೂನೆ ಭರ್ತಿ ಮಾಡಿ "ಕಳುಹಿಸಿ" ಒತ್ತುವುದು; ಮುಂದೆ ಖಾತೆ ತೆರೆಯುವುದೂ ಸೇರುತ್ತದೆ. ಅದನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು. ಹಾಗೆ ಮಾಡಿದರೆ ಈ ತಾಣದ ಯಾವುದೂ ನಿಮಗೆ ಮುಚ್ಚಿಹೋಗುವುದಿಲ್ಲ; ಏಕೆಂದರೆ ಎಲ್ಲ ಪರಿಕರಗಳೂ ಇವು ಯಾವುದೂ ಇಲ್ಲದೆಯೇ ಕೆಲಸ ಮಾಡುತ್ತವೆ.
  • To nominate somebody. You may name another person to exercise these rights on your behalf if you die or become unable to act for yourself. Tell us their name and how to reach them.
  • ಬೇರೊಬ್ಬರನ್ನು ನಾಮನಿರ್ದೇಶನ ಮಾಡುವ ಹಕ್ಕು. ನೀವು ಮರಣ ಹೊಂದಿದರೆ ಅಥವಾ ನಿಮ್ಮ ಪರವಾಗಿ ನಿರ್ಧರಿಸಲಾಗದ ಸ್ಥಿತಿಗೆ ತಲುಪಿದರೆ, ಈ ಹಕ್ಕುಗಳನ್ನು ನಿಮ್ಮ ಪರವಾಗಿ ಬಳಸಲು ಇನ್ನೊಬ್ಬರನ್ನು ಹೆಸರಿಸಬಹುದು. ಅವರ ಹೆಸರು ಮತ್ತು ಸಂಪರ್ಕದ ವಿವರವನ್ನು ನಮಗೆ ತಿಳಿಸಿ.

For any of these, write through Tell us something or to admin@mediscuss.org. Please say what you are asking for. You will get an answer, and the aim is within seven days.

ಇವುಗಳಲ್ಲಿ ಯಾವುದಕ್ಕಾದರೂ ನಮಗೆ ತಿಳಿಸಿ ನಮೂನೆಯ ಮೂಲಕ ಅಥವಾ admin@mediscuss.org ಗೆ ಬರೆಯಿರಿ. ನೀವು ಏನನ್ನು ಕೇಳುತ್ತಿದ್ದೀರಿ ಎಂದು ಸ್ಪಷ್ಟವಾಗಿ ತಿಳಿಸಿ. ಉತ್ತರ ಬರುತ್ತದೆ; ಏಳು ದಿನಗಳ ಒಳಗೆ ಎಂಬುದು ಗುರಿ.

If you are not satisfied with the answer, you may complain to the Data Protection Board of India. That is the authority set up under the Act. Complaining to us first is not a rule we are imposing. It is simply the faster route when the problem is something one person can fix.

ಬಂದ ಉತ್ತರದಿಂದ ನಿಮಗೆ ಸಮಾಧಾನವಾಗದಿದ್ದರೆ, ಈ ಕಾಯ್ದೆಯಡಿ ರಚನೆಯಾಗಿರುವ ಭಾರತದ ಮಾಹಿತಿ ಸಂರಕ್ಷಣಾ ಮಂಡಳಿಗೆ ದೂರು ಕೊಡಬಹುದು. ಮೊದಲು ನಮಗೆ ತಿಳಿಸಿ ಎಂಬುದು ನಾವು ಹೇರುತ್ತಿರುವ ನಿಯಮವಲ್ಲ. ಒಬ್ಬ ವ್ಯಕ್ತಿ ಸರಿಪಡಿಸಬಹುದಾದ ಸಮಸ್ಯೆಯಾದರೆ ಅದೇ ವೇಗದ ದಾರಿ, ಅಷ್ಟೆ.

If You Are Under Eighteen ನಿಮಗೆ ಹದಿನೆಂಟು ವರ್ಷ ಆಗಿಲ್ಲದಿದ್ದರೆ

The tools themselves collect nothing from anybody, so a young person can read them and use them exactly as anybody else can. The contact form is different, because it stores an email address. If you are under eighteen, please talk to a parent or guardian before you use it. The law asks for a parent's agreement before information about a child is collected. This is the one place on the site where that arises.

ಪರಿಕರಗಳು ಯಾರಿಂದಲೂ ಏನನ್ನೂ ಸಂಗ್ರಹಿಸುವುದಿಲ್ಲ. ಹಾಗಾಗಿ ಚಿಕ್ಕ ವಯಸ್ಸಿನವರೂ ಬೇರೆ ಯಾರಂತೆಯೇ ಅವನ್ನು ಓದಬಹುದು, ಬಳಸಬಹುದು. ಸಂಪರ್ಕ ನಮೂನೆ ಬೇರೆ; ಅದು ಇಮೇಲ್ ವಿಳಾಸವನ್ನು ಸಂಗ್ರಹಿಸುತ್ತದೆ. ನಿಮಗೆ ಹದಿನೆಂಟು ವರ್ಷ ಆಗಿಲ್ಲದಿದ್ದರೆ, ಅದನ್ನು ಬಳಸುವ ಮೊದಲು ದಯವಿಟ್ಟು ಪೋಷಕರ ಅಥವಾ ಪಾಲಕರ ಜೊತೆ ಮಾತನಾಡಿ. ಮಕ್ಕಳ ಮಾಹಿತಿ ಸಂಗ್ರಹಿಸುವ ಮೊದಲು ಪೋಷಕರ ಒಪ್ಪಿಗೆ ಬೇಕೆಂದು ಕಾನೂನು ಹೇಳುತ್ತದೆ. ಈ ತಾಣದಲ್ಲಿ ಆ ಪ್ರಶ್ನೆ ಏಳುವುದು ಇಲ್ಲಿ ಒಂದೇ ಕಡೆ.

How It Is Kept Safe ಇದನ್ನು ಸುರಕ್ಷಿತವಾಗಿ ಇಡುವ ಬಗೆ

  • The connection between your device and this site is encrypted, which is what the padlock in your browser's address bar means.
  • ನಿಮ್ಮ ಸಾಧನಕ್ಕೂ ಈ ತಾಣಕ್ಕೂ ನಡುವಿನ ಸಂಪರ್ಕ ಸುರಕ್ಷಿತಗೊಳಿಸಲಾಗಿದೆ. ಬ್ರೌಸರಿನ ವಿಳಾಸ ಪಟ್ಟಿಯಲ್ಲಿ ಕಾಣುವ ಬೀಗದ ಚಿಹ್ನೆಯ ಅರ್ಥ ಅದೇ.
  • The database password and the encryption key are kept in a file. That file sits outside the part of the server that the public can reach. So they cannot be requested over the web at all.
  • ದತ್ತಸಂಚಯದ ಪಾಸ್‌ವರ್ಡ್ ಮತ್ತು ಬೀಗದ ಕೈ ಇರುವುದು ಸರ್ವರಿನ ಸಾರ್ವಜನಿಕರಿಗೆ ತಲುಪುವ ಭಾಗದ ಹೊರಗಿನ ಕಡತದಲ್ಲಿ. ಹಾಗಾಗಿ ಅಂತರ್ಜಾಲದ ಮೂಲಕ ಅವನ್ನು ಕೇಳಲು ಸಾಧ್ಯವೇ ಇಲ್ಲ.
  • There are no passwords on this site, so there is no password to be stolen from it.
  • ಈ ತಾಣದಲ್ಲಿ ಪಾಸ್‌ವರ್ಡ್ ಎಂಬುದೇ ಇಲ್ಲ. ಹಾಗಾಗಿ ಇಲ್ಲಿಂದ ಕದಿಯಲು ಪಾಸ್‌ವರ್ಡ್ ಕೂಡ ಇಲ್ಲ.
  • This site and the doctors' site at mediscuss.org/cdss keep what they hold in two separate databases. Every name in one is different from the name in the other. So a mistake in one cannot read or write the other's records. Who counts as an administrator is set by a file on the server. It is not set by a column in the database. The reason is that a database can be written to by anything that can reach it.
  • ಈ ತಾಣ ಮತ್ತು mediscuss.org/cdss ಎಂಬ ವೈದ್ಯರ ತಾಣ, ಎರಡೂ ತಮ್ಮ ಮಾಹಿತಿಯನ್ನು ಪ್ರತ್ಯೇಕ ದತ್ತಸಂಚಯಗಳಲ್ಲಿ ಇಟ್ಟುಕೊಳ್ಳುತ್ತವೆ. ಎಲ್ಲದಕ್ಕೂ ಬೇರೆ ಬೇರೆ ಹೆಸರುಗಳಿವೆ. ಹಾಗಾಗಿ ಒಂದರಲ್ಲಿ ಆದ ತಪ್ಪು ಇನ್ನೊಂದರ ದಾಖಲೆಗಳನ್ನು ಓದಲೂ ಆಗದು, ಬರೆಯಲೂ ಆಗದು. ಯಾರು ನಿರ್ವಾಹಕರು ಎಂಬುದನ್ನು ಸರ್ವರಿನ ಒಂದು ಕಡತ ನಿರ್ಧರಿಸುತ್ತದೆ; ದತ್ತಸಂಚಯದ ಕಾಲಂ ಅಲ್ಲ. ಏಕೆಂದರೆ ದತ್ತಸಂಚಯವನ್ನು ತಲುಪಬಲ್ಲ ಯಾವುದೂ ಅದರಲ್ಲಿ ಬರೆಯಬಲ್ಲದು.

No arrangement is perfect. Saying otherwise would be a claim nobody can keep. If information about you is ever exposed, you will be told without delay. You will be told plainly what was exposed and what was not. It will also be reported to the Data Protection Board of India, within seventy two hours of it becoming known.

ಯಾವ ವ್ಯವಸ್ಥೆಯೂ ಪರಿಪೂರ್ಣವಲ್ಲ. ಪರಿಪೂರ್ಣ ಎನ್ನುವುದು ಯಾರೂ ಉಳಿಸಿಕೊಳ್ಳಲಾಗದ ಭರವಸೆಯಾಗುತ್ತದೆ. ನಿಮ್ಮ ಬಗೆಗಿನ ಮಾಹಿತಿ ಎಂದಾದರೂ ಹೊರಬಿದ್ದರೆ, ವಿಳಂಬವಿಲ್ಲದೆ ನಿಮಗೆ ತಿಳಿಸಲಾಗುವುದು. ಏನು ಹೊರಬಿದ್ದಿದೆ ಮತ್ತು ಏನು ಬಿದ್ದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗುವುದು. ಅದು ಗೊತ್ತಾದ ಎಪ್ಪತ್ತೆರಡು ಗಂಟೆಗಳ ಒಳಗೆ ಭಾರತದ ಮಾಹಿತಿ ಸಂರಕ್ಷಣಾ ಮಂಡಳಿಗೂ ವರದಿ ಮಾಡಲಾಗುವುದು.

What This Information Is Not Used For ಈ ಮಾಹಿತಿಯನ್ನು ಯಾವುದಕ್ಕೆ ಬಳಸುವುದಿಲ್ಲ

It is not sold. It is not shared with anybody except the one service named in this notice. That service is an email delivery service, for the messages this site sends. It receives nothing you typed into a tool. Until 23 August 2026 there were two. The other was Google, for the typeface, and that one has gone. It is not used for research. It is not used to train any software. It is not used to show you advertisements, and there are none on this site.

ಇದನ್ನು ಮಾರುವುದಿಲ್ಲ. ಈ ಸೂಚನೆಯಲ್ಲಿ ಹೆಸರಿಸಿರುವ ಒಂದೇ ಒಂದು ಸೇವೆಯನ್ನು ಬಿಟ್ಟು ಬೇರೆ ಯಾರಿಗೂ ಕೊಡುವುದಿಲ್ಲ. ಆ ಸೇವೆ ಎಂದರೆ ಈ ತಾಣ ಕಳುಹಿಸುವ ಸಂದೇಶಗಳಿಗಾಗಿ ಬಳಸುವ ಇಮೇಲ್ ರವಾನೆ ಸೇವೆ. ನೀವು ಪರಿಕರದಲ್ಲಿ ನಮೂದಿಸಿದ ಯಾವುದೂ ಅದಕ್ಕೆ ಹೋಗುವುದಿಲ್ಲ. 23 ಆಗಸ್ಟ್ 2026ರವರೆಗೆ ಇಂಥ ಸೇವೆಗಳು ಎರಡಿದ್ದವು; ಇನ್ನೊಂದು ಅಕ್ಷರಶೈಲಿಗಾಗಿ ಬಳಸುತ್ತಿದ್ದ ಗೂಗಲ್. ಅದು ಈಗ ಇಲ್ಲ. ಇದನ್ನು ಸಂಶೋಧನೆಗೆ ಬಳಸುವುದಿಲ್ಲ. ಯಾವ ತಂತ್ರಾಂಶಕ್ಕೂ ತರಬೇತಿ ಕೊಡಲು ಬಳಸುವುದಿಲ್ಲ. ಜಾಹೀರಾತು ತೋರಿಸಲು ಬಳಸುವುದಿಲ್ಲ; ಈ ತಾಣದಲ್ಲಿ ಜಾಹೀರಾತೇ ಇಲ್ಲ.

What Changed ಏನು ಬದಲಾಯಿತು

  • Version 1.4, 25 August 2026. Four corrections, all in the same direction: this notice was describing less than the code does. The favourites list stores the date you marked each tool. That date is what puts the list in order, and it appears in your own download. Version 1.3 said there were no dates. The saved-result limit is a limit and not a stopwatch. The sweep that deletes an expired result runs when somebody signs in. So on a quiet week a result can outlive its date by a few days. The IP address on a contact message is removed after thirty days, which this notice had never said. And whether you were logged in when you wrote to us is stored, so that a reply can find you. That was not on the itemised list. Separately, this notice pointed at a panel that moved to your account page on 16 August. It told you to open it from the person icon, where it is not. Nothing new is collected.
  • ಆವೃತ್ತಿ 1.4, 25 ಆಗಸ್ಟ್ 2026. ನಾಲ್ಕು ತಿದ್ದುಪಡಿಗಳು, ಎಲ್ಲವೂ ಒಂದೇ ದಿಕ್ಕಿನಲ್ಲಿ: ಕೋಡ್ ಮಾಡುವುದಕ್ಕಿಂತ ಕಡಿಮೆಯನ್ನು ಈ ಸೂಚನೆ ಹೇಳುತ್ತಿತ್ತು. ಮೆಚ್ಚಿನ ಪರಿಕರಗಳ ಪಟ್ಟಿಯಲ್ಲಿ, ಪ್ರತಿಯೊಂದನ್ನೂ ಯಾವಾಗ ಗುರುತಿಸಿದಿರಿ ಎಂಬ ದಿನಾಂಕವೂ ಇರುತ್ತದೆ; ಪಟ್ಟಿಯ ಕ್ರಮ ನಿರ್ಧಾರವಾಗುವುದೇ ಅದರಿಂದ, ಮತ್ತು ನೀವು ಇಳಿಸಿಕೊಳ್ಳುವ ಪ್ರತಿಯಲ್ಲೂ ಅದು ಕಾಣಿಸುತ್ತದೆ. ಆವೃತ್ತಿ 1.3 ದಿನಾಂಕವಿಲ್ಲ ಎಂದಿತ್ತು. ಉಳಿಸಿದ ಫಲಿತಾಂಶದ ಅವಧಿ ಒಂದು ಮಿತಿಯೇ ಹೊರತು ಗಡಿಯಾರವಲ್ಲ: ಅಳಿಸುವ ಕೆಲಸ ನಡೆಯುವುದು ಯಾರಾದರೂ ಲಾಗಿನ್ ಆದಾಗ. ಸಂಪರ್ಕ ಸಂದೇಶದ ಐಪಿ ವಿಳಾಸವನ್ನು ಮೂವತ್ತು ದಿನಗಳ ನಂತರ ತೆಗೆದುಹಾಕಲಾಗುತ್ತದೆ; ಇದನ್ನು ಈ ಸೂಚನೆ ಎಂದೂ ಹೇಳಿರಲಿಲ್ಲ. ಮತ್ತು ನೀವು ಬರೆದಾಗ ಲಾಗಿನ್ ಆಗಿದ್ದಿರೋ ಇಲ್ಲವೋ ಎಂಬುದನ್ನೂ ಸಂಗ್ರಹಿಸಲಾಗುತ್ತದೆ, ಉತ್ತರ ನಿಮ್ಮನ್ನು ತಲುಪಲಿ ಎಂದು; ಅದು ಪಟ್ಟಿಯಲ್ಲಿ ಇರಲಿಲ್ಲ. ಜೊತೆಗೆ, 16 ಆಗಸ್ಟ್‌ನಂದು ನಿಮ್ಮ ಖಾತೆ ಪುಟಕ್ಕೆ ಸ್ಥಳಾಂತರಗೊಂಡ ಫಲಕವನ್ನು ವ್ಯಕ್ತಿಯ ಚಿಹ್ನೆಯಿಂದ ತೆರೆಯಿರಿ ಎಂದು ಈ ಸೂಚನೆ ಹೇಳುತ್ತಿತ್ತು; ಅಲ್ಲಿ ಅದಿಲ್ಲ. ಹೊಸದೇನನ್ನೂ ಸಂಗ್ರಹಿಸುತ್ತಿಲ್ಲ.
  • Version 1.3, 23 August 2026. A removal, which is a first for this list. The typefaces this site uses are now stored on its own server. So the one request that used to go to Google Fonts on every page no longer happens. The section that described that request has been replaced by one saying there is no longer any such request. The sentence about outside services now names one instead of two. Nothing about what is collected changed, and nothing new is collected. The Kannada lettering also looks different from this date, for the same reason and no other.
  • ಆವೃತ್ತಿ 1.3, 23 ಆಗಸ್ಟ್ 2026. ಈ ಪಟ್ಟಿಯಲ್ಲಿ ಮೊದಲ ಬಾರಿಗೆ, ಒಂದನ್ನು ತೆಗೆದುಹಾಕಿದ ದಾಖಲೆ. ಈ ತಾಣ ಬಳಸುವ ಅಕ್ಷರಶೈಲಿಗಳು ಈಗ ಅದರ ಸ್ವಂತ ಸರ್ವರಿನಲ್ಲೇ ಇವೆ. ಹಾಗಾಗಿ ಪ್ರತಿ ಪುಟದಲ್ಲೂ Google Fonts ಗೆ ಹೋಗುತ್ತಿದ್ದ ಆ ಒಂದು ಮನವಿ ಇನ್ನಿಲ್ಲ. ಆ ಮನವಿಯನ್ನು ವಿವರಿಸುತ್ತಿದ್ದ ಭಾಗದ ಜಾಗದಲ್ಲಿ, ಈಗ ಅಂಥ ಮನವಿಯೇ ಇಲ್ಲ ಎಂದು ಹೇಳುವ ಭಾಗ ಬಂದಿದೆ. ಹೊರಗಿನ ಸೇವೆಗಳ ಬಗೆಗಿನ ವಾಕ್ಯ ಈಗ ಎರಡರ ಬದಲು ಒಂದನ್ನು ಹೆಸರಿಸುತ್ತದೆ. ಸಂಗ್ರಹಿಸುವುದರಲ್ಲಿ ಏನೂ ಬದಲಾಗಿಲ್ಲ; ಹೊಸದೇನನ್ನೂ ಸಂಗ್ರಹಿಸುತ್ತಿಲ್ಲ. ಈ ದಿನಾಂಕದಿಂದ ಕನ್ನಡ ಅಕ್ಷರಗಳೂ ಬೇರೆ ರೀತಿ ಕಾಣುತ್ತವೆ; ಅದಕ್ಕೆ ಇದೇ ಕಾರಣ, ಬೇರೆ ಯಾವುದೂ ಅಲ್ಲ.
  • Version 1.2, 20 August 2026. Partly a correction, partly an addition. The correction: the Mind and Spirit Compass has kept your six answers on your device since March 2026. Versions 1.0 and 1.1 said only three settings were kept there. The addition: the new Lifestyle Compass can keep a plan on your device, and only when you press Keep My Plan. The This Device panel now lists anything a tool keeps, by name. Nothing is sent to any server by either tool.
  • ಆವೃತ್ತಿ 1.2, 20 ಆಗಸ್ಟ್ 2026. ಭಾಗಶಃ ತಿದ್ದುಪಡಿ, ಭಾಗಶಃ ಸೇರ್ಪಡೆ. ತಿದ್ದುಪಡಿ: ಮನಸ್ಸು ಮತ್ತು ಆತ್ಮದ ದಿಕ್ಸೂಚಿ ಮಾರ್ಚ್ 2026ರಿಂದಲೂ ನಿಮ್ಮ ಆರು ಉತ್ತರಗಳನ್ನು ನಿಮ್ಮ ಸಾಧನದಲ್ಲಿ ಇಟ್ಟುಕೊಳ್ಳುತ್ತಿತ್ತು; ಆದರೆ 1.0 ಮತ್ತು 1.1 ಆವೃತ್ತಿಗಳು ಮೂರು ಆಯ್ಕೆಗಳು ಮಾತ್ರ ಉಳಿಯುತ್ತವೆ ಎಂದಿದ್ದವು. ಸೇರ್ಪಡೆ: ಹೊಸ ಜೀವನಶೈಲಿಯ ದಿಕ್ಸೂಚಿಯು, ನೀವು "ನನ್ನ ಯೋಜನೆ ಉಳಿಸಿ" ಒತ್ತಿದರೆ ಮಾತ್ರ, ಒಂದು ಯೋಜನೆಯನ್ನು ನಿಮ್ಮ ಸಾಧನದಲ್ಲಿ ಇಟ್ಟುಕೊಳ್ಳಬಲ್ಲದು. ಪರಿಕರಗಳು ಇಟ್ಟುಕೊಳ್ಳುವ ಪ್ರತಿಯೊಂದನ್ನೂ "ಈ ಸಾಧನ" ಫಲಕ ಈಗ ಹೆಸರಿನಿಂದ ತೋರಿಸುತ್ತದೆ. ಎರಡೂ ಪರಿಕರಗಳು ಯಾವ ಸರ್ವರಿಗೂ ಏನನ್ನೂ ಕಳುಹಿಸುವುದಿಲ್ಲ.
  • Version 1.1, 18 August 2026. A correction, not an addition. Version 1.0 said there was no list of favourite tools and no record of which tools you had opened. Both were added on 16 August, and this notice was not updated at the time. It now lists them. It also lists the number of times you have signed in, and the date if you move your account to another address. And it lists the fact that a reply to a message you send is kept beside the message rather than only sent. Nothing about what is collected changed on this date: only what this document admits to.
  • ಆವೃತ್ತಿ 1.1, 18 ಆಗಸ್ಟ್ 2026. ಇದು ಸೇರ್ಪಡೆಯಲ್ಲ, ತಿದ್ದುಪಡಿ. ಮೆಚ್ಚಿನ ಪರಿಕರಗಳ ಪಟ್ಟಿ ಇಲ್ಲ ಮತ್ತು ಯಾವ ಪರಿಕರ ತೆರೆದಿರಿ ಎಂಬ ದಾಖಲೆ ಇಲ್ಲ ಎಂದು ಆವೃತ್ತಿ 1.0 ಹೇಳಿತ್ತು; ಆ ಎರಡನ್ನೂ 16 ಆಗಸ್ಟ್‌ನಂದು ಸೇರಿಸಲಾಯಿತು, ಆದರೆ ಈ ಸೂಚನೆಯನ್ನು ಆಗ ತಿದ್ದಲಿಲ್ಲ. ಈಗ ಅವನ್ನು ಪಟ್ಟಿ ಮಾಡಲಾಗಿದೆ; ಜೊತೆಗೆ ನೀವು ಎಷ್ಟು ಬಾರಿ ಲಾಗಿನ್ ಆಗಿದ್ದೀರಿ, ಖಾತೆಯನ್ನು ಬೇರೆ ವಿಳಾಸಕ್ಕೆ ಸರಿಸಿದರೆ ಆ ದಿನಾಂಕ, ಮತ್ತು ನೀವು ಕಳುಹಿಸಿದ ಸಂದೇಶಕ್ಕೆ ಬರುವ ಉತ್ತರವನ್ನು ಕೇವಲ ಕಳುಹಿಸದೆ ಸಂದೇಶದ ಜೊತೆಗೇ ಇಟ್ಟುಕೊಳ್ಳಲಾಗುತ್ತದೆ ಎಂಬುದೂ ಸೇರಿದೆ. ಈ ದಿನಾಂಕದಂದು ಸಂಗ್ರಹಿಸುವುದರಲ್ಲಿ ಏನೂ ಬದಲಾಗಿಲ್ಲ; ಬದಲಾದದ್ದು ಈ ದಾಖಲೆ ಒಪ್ಪಿಕೊಳ್ಳುವುದು ಮಾತ್ರ.
  • Version 1.0, 16 August 2026. The first version. There was no privacy notice for this site before this one.
  • ಆವೃತ್ತಿ 1.0, 16 ಆಗಸ್ಟ್ 2026. ಇದು ಮೊದಲ ಆವೃತ್ತಿ. ಇದಕ್ಕೂ ಮೊದಲು ಈ ತಾಣಕ್ಕೆ ಖಾಸಗಿತನದ ಸೂಚನೆ ಇರಲಿಲ್ಲ.

If what is collected changes, this notice will be republished with a higher version number. The same happens if what it is used for changes. A line above will say what changed. That is the point of numbering it: you can tell which version you were shown.

ಏನನ್ನು ಸಂಗ್ರಹಿಸಲಾಗುತ್ತದೆ ಎಂಬುದು ಬದಲಾದರೆ, ಅಥವಾ ಅದನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದು ಬದಲಾದರೆ, ಈ ಸೂಚನೆಯನ್ನು ದೊಡ್ಡ ಆವೃತ್ತಿ ಸಂಖ್ಯೆಯೊಂದಿಗೆ ಮತ್ತೆ ಪ್ರಕಟಿಸಲಾಗುವುದು, ಮತ್ತು ಏನು ಬದಲಾಯಿತು ಎಂಬ ಸಾಲನ್ನು ಮೇಲೆ ಸೇರಿಸಲಾಗುವುದು. ಸಂಖ್ಯೆ ಕೊಡುವುದರ ಉದ್ದೇಶವೇ ಅದು: ನಿಮಗೆ ತೋರಿಸಿದ್ದು ಯಾವ ಆವೃತ್ತಿ ಎಂದು ನೀವು ಹೇಳಬಲ್ಲಿರಿ.

Questions about anything on this page: Tell us something, or admin@mediscuss.org. Version 1.4, 25 August 2026. ಈ ಪುಟದ ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಇದ್ದರೆ: ನಮಗೆ ತಿಳಿಸಿ, ಅಥವಾ admin@mediscuss.org. ಆವೃತ್ತಿ 1.4, 25 ಆಗಸ್ಟ್ 2026.