Skip to the toolಪರಿಕರಕ್ಕೆ ನೇರವಾಗಿ ಹೋಗಿ

About Swasthya Compassಸ್ವಾಸ್ಥ್ಯ ದಿಕ್ಸೂಚಿಯ ಪರಿಚಯ

Health tools written in plain language, for anybody to use. ಯಾರಿಗಾದರೂ ಸುಲಭವಾಗಿ ಅರ್ಥವಾಗುವಂತಹ ಸರಳ ಭಾಷೆಯಲ್ಲಿರುವ ಆರೋಗ್ಯ ಪರಿಕರಗಳಿವು.

Why This Exists ಇದರ ಹಿಂದಿರುವ ಆಶಯ

Medicine is complicated. The internet is full of wrong health advice, instant cures and quackery. Look up a question about your own health and you usually land on one of two things. Either the answer is written for doctors and is too hard to follow. Or it is a remedy somebody has made up, and it can do real harm.

ವೈದ್ಯಕೀಯ ವಿಜ್ಞಾನವೇ ಹಾಗೆ, ಕೊಂಚ ಸಂಕೀರ್ಣ. ಇತ್ತ ಅಂತರ್ಜಾಲವನ್ನೊಮ್ಮೆ ಜಾಲಾಡಿದರೆ ಸಾಕು, ತಪ್ಪು ಮಾಹಿತಿಗಳು, ದಿಢೀರ್ ಪರಿಹಾರಗಳು ಮತ್ತು ನಕಲಿ ಚಿಕಿತ್ಸೆಗಳದ್ದೇ ದರ್ಬಾರು. ಸಾಮಾನ್ಯರು ತಮ್ಮ ಆರೋಗ್ಯದ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯೋಣವೆಂದು ಹುಡುಕಹೊರಟಾಗ, ಎರಡು ರೀತಿಯ ಗೋಡೆಗಳಿಗೆ ಅಪ್ಪಳಿಸುತ್ತಾರೆ. ಒಂದೋ ಆ ಮಾಹಿತಿಯು ವೈದ್ಯರಿಗಾಗಿಯೇ ಬರೆದಂತಹ ಕಠಿಣ ಭಾಷೆಯಲ್ಲಿರುತ್ತದೆ. ಇಲ್ಲವೇ ಅದು ಯಾರೋ ತಾವಾಗಿಯೇ ಕಟ್ಟಿಕೊಂಡ ಪರಿಹಾರವಾಗಿರುತ್ತದೆ. ಅದರಿಂದ ನಿಜವಾದ ಹಾನಿಯಾಗಬಹುದು.

Swasthya Compass was built to sit between those two. It takes what the medical evidence actually says and puts it into small tools, in Kannada and in English. You work through one yourself. By the end you know what your own numbers mean, and you can take them to your doctor and ask better questions.

ಈ ಎರಡರ ನಡುವೆ ನಿಲ್ಲಲಿ ಎಂದೇ 'ಸ್ವಾಸ್ಥ್ಯ ದಿಕ್ಸೂಚಿ'ಯನ್ನು ಕಟ್ಟಲಾಗಿದೆ. ವೈದ್ಯಕೀಯ ವಿಜ್ಞಾನದ ನೈಜ ಪುರಾವೆಗಳನ್ನು ಆಧಾರವಾಗಿಟ್ಟುಕೊಂಡು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಣ್ಣ-ಪುಟ್ಟ ಪರಿಕರಗಳನ್ನು ಇಲ್ಲಿ ರೂಪಿಸಲಾಗಿದೆ. ನಿಮ್ಮದೇ ವರದಿಗಳ ಅಂಕಿ-ಅಂಶಗಳನ್ನು ನೀವೇ ಇಲ್ಲಿ ನಮೂದಿಸಿ ಪರೀಕ್ಷಿಸಿಕೊಳ್ಳಬಹುದು. ಕೊನೆಯಲ್ಲಿ, ಆ ಅಂಕಿ-ಅಂಶಗಳು ಏನನ್ನು ಸೂಚಿಸುತ್ತಿವೆ ಎಂಬ ಸ್ಪಷ್ಟ ಅರಿವು ನಿಮಗಾಗುತ್ತದೆ. ಇದರಿಂದ, ಮುಂದಿನ ಬಾರಿ ಆಸ್ಪತ್ರೆಗೆ ಹೋದಾಗ ನಿಮ್ಮ ವೈದ್ಯರ ಬಳಿ ಇನ್ನಷ್ಟು ಒಳ್ಳೆಯ ಪ್ರಶ್ನೆಗಳನ್ನು ಕೇಳಲು ಇದು ನೆರವಾಗುತ್ತದೆ.

The Principles Behind This Work ನಮ್ಮ ಕೆಲಸದ ಹಿಂದಿನ ತತ್ವಗಳು

  • Diseases that come from too much comfort: Lifts instead of stairs, and two-wheelers instead of walking. Food ordered to the door, and long hours sitting at a desk. Daily life has become easy and our health has paid for it. These tools try to catch that early, and to suggest changes small enough that you will actually keep them up.
  • ಅತಿಯಾದ ಆರಾಮದಿಂದ ಬರುವ ಕಾಯಿಲೆಗಳು: ಮೆಟ್ಟಿಲು ಹತ್ತುವ ಬದಲು ಲಿಫ್ಟ್, ನಡೆಯುವ ಬದಲು ದ್ವಿಚಕ್ರ ವಾಹನ, ಮನೆ ಬಾಗಿಲಿಗೆ ಬರುವ ಊಟ, ದಿನವಿಡೀ ಕುರ್ಚಿಗೆ ಅಂಟಿಕೊಂಡೇ ಮಾಡುವ ಕೆಲಸ. ಬದುಕು ಎಷ್ಟು ಸುಲಭವಾಗಿದೆಯೋ, ನಮ್ಮ ದೇಹ ಅಷ್ಟೇ ಭಾರೀ ಬೆಲೆ ತೆರುತ್ತಿದೆ. ಇವುಗಳನ್ನು ನಾವು "ಸೌಲಭ್ಯ-ಪ್ರೇರಿತ ಕಾಯಿಲೆಗಳು" ಎನ್ನುತ್ತೇವೆ. ಮುಂಬರುವ ಈ ಅಪಾಯಗಳನ್ನು ಮುಂಚಿತವಾಗಿಯೇ ಗುರುತಿಸಿ, ನೀವು ದಿನನಿತ್ಯ ಪಾಲಿಸಬಹುದಾದಂತಹ ಸಣ್ಣಪುಟ್ಟ ಬದಲಾವಣೆಗಳನ್ನು ಸೂಚಿಸುವುದು ನಮ್ಮ ಉದ್ದೇಶ.
  • Saying plainly what is not medicine: A great deal of what is sold as treatment has never been tested. Many of the people offering it are not qualified to treat anybody. Where the evidence says something does not work, this site says so.
  • ನಕಲಿ ಚಿಕಿತ್ಸೆಗಳ ಹಿಂದಿನ ಅಸಲಿಯತ್ತು: ಮಾರುಕಟ್ಟೆಯಲ್ಲಿ ಚಿಕಿತ್ಸೆ ಎಂಬ ಹೆಸರಿನಲ್ಲಿ ಮಾರಾಟವಾಗುವ ಸಾಕಷ್ಟು ವಸ್ತುಗಳನ್ನು ಇದುವರೆಗೆ ಯಾರೂ ಪರೀಕ್ಷಿಸಿಯೇ ಇಲ್ಲ. ಅದನ್ನು ಮಾರುವ ಅನೇಕರಿಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಕನಿಷ್ಠ ಅರ್ಹತೆಯೂ ಇರುವುದಿಲ್ಲ. ಯಾವ ಚಿಕಿತ್ಸೆ ಕೆಲಸ ಮಾಡುವುದಿಲ್ಲ ಎಂದು ಸಂಶೋಧನೆ ಹೇಳುತ್ತದೋ, ಅದನ್ನು ಈ ವೇದಿಕೆ ಸ್ಪಷ್ಟವಾಗಿ ಹೇಳುತ್ತದೆ.
  • Old practice, checked against new evidence: Fasting, how children are brought up, what is eaten and when. Our own traditions have a good deal to say about all of it. Where research agrees with the practice, we say so. Where it does not, we say that as well.
  • ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನದ ಬೆಸುಗೆ: ಉಪವಾಸದ ಹಿಂದಿರುವ ತರ್ಕ, ಮಕ್ಕಳ ಪಾಲನೆಯ ರೀತಿ, ನಮ್ಮ ಆಹಾರ ಪದ್ಧತಿ, ಹೀಗೆ ಪ್ರತಿಯೊಂದರ ಬಗ್ಗೆಯೂ ನಮ್ಮ ಪ್ರಾಚೀನ ಜ್ಞಾನದಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಸಂಶೋಧನೆ ಆ ಆಚರಣೆಯನ್ನು ಒಪ್ಪಿದರೆ ಹಾಗೆಂದೇ ಹೇಳುತ್ತೇವೆ. ಒಪ್ಪದಿದ್ದರೆ ಅದನ್ನೂ ಹೇಳುತ್ತೇವೆ.
Written and maintained by Dr Shashikiran Umakanth.
The English on this page was last checked: 5 September 2026
ಡಾ. ಶಶಿಕಿರಣ್ ಉಮಾಕಾಂತ್ ಅವರು ಬರೆದು ನಿರ್ವಹಿಸುತ್ತಿರುವ ಮಾಹಿತಿ.
ಈ ಪುಟದ ಕನ್ನಡ ಪಠ್ಯವನ್ನು ಕೊನೆಯದಾಗಿ ಪರಿಶೀಲಿಸಿದ ದಿನಾಂಕ: 5 September 2026