Your chance of a heart attack or stroke in the next 10 years.ಮುಂದಿನ 10 ವರ್ಷಗಳಲ್ಲಿ ನಿಮಗೆ ಹೃದಯಾಘಾತ ಅಥವಾ ಪಾರ್ಶ್ವವಾಯು (Stroke) ಆಗುವ ಸಾಧ್ಯತೆ.
This tool turns readings you already have into a number you can act on. It also explains what each of those readings means on its own. Fill in as much as you have. The first three sections are enough for a result. Everything after them makes the answer sharper, and adds comments on your own report.
ನಿಮ್ಮ ಕೈಯಲ್ಲಿರುವ ವೈದ್ಯಕೀಯ ವರದಿಗಳನ್ನು ಕೇವಲ ಕಾಗದದ ಮೇಲಿನ ಸಂಖ್ಯೆಗಳಾಗಿ ನೋಡದೆ, ನಿಮ್ಮ ಮುಂದಿನ ಹೆಜ್ಜೆಗಳಿಗೆ ದಾರಿದೀಪವಾಗಿಸುವ ಸಣ್ಣ ಪ್ರಯತ್ನವಿದು. ಮೊದಲ ಮೂರು ವಿಭಾಗಗಳನ್ನು ತುಂಬಿದರೆ ಸಾಕು, ಒಂದು ಅಂದಾಜು ಸಿಗುತ್ತದೆ. ಆದರೆ, ನಿಮ್ಮ ಬಳಿ ಇರುವ ಎಲ್ಲಾ ವಿವರಗಳನ್ನೂ ನೀಡಿದಷ್ಟೂ, ನಿಮ್ಮ ಆರೋಗ್ಯದ ಬಗೆಗಿನ ನಮ್ಮ ಟಿಪ್ಪಣಿ ಇನ್ನಷ್ಟು ನಿಖರವೂ, ಆಪ್ತವೂ ಆಗುತ್ತದೆ.
You will need a recent cholesterol test for a number. Without one, this page will tell you what to ask for rather than showing you an estimate. Nothing you type is saved by the web server.ನಿಮ್ಮ ಅಪಾಯದ ಪ್ರಮಾಣ ತಿಳಿಯಲು ಇತ್ತೀಚಿನ ಕೊಲೆಸ್ಟ್ರಾಲ್ ಪರೀಕ್ಷೆಯ ವರದಿ ಅತ್ಯಗತ್ಯ. ಅದಿಲ್ಲದಿದ್ದರೆ, ನೀವು ಮುಂದೇನು ಮಾಡಬೇಕು ಎಂಬುದನ್ನಷ್ಟೇ ಈ ಪುಟ ಹೇಳಬಲ್ಲದು. ನೆನಪಿರಲಿ, ಇಲ್ಲಿ ನೀವು ನೀಡುವ ಯಾವುದೇ ಮಾಹಿತಿಯನ್ನು ನಾವು ಎಲ್ಲಿಯೂ ಉಳಿಸಿಟ್ಟುಕೊಳ್ಳುವುದಿಲ್ಲ; ಇದು ನಿಮ್ಮ ಮತ್ತು ನಿಮ್ಮ ಪರದೆಯ ನಡುವಿನ ಗೌಪ್ಯ ವಿಚಾರ.
1. About you1. ನಿಮ್ಮ ಬಗ್ಗೆ
Tested for ages 30 to 79.30ರಿಂದ 79 ವರ್ಷದವರೆಗೆ ಪರೀಕ್ಷಿಸಲಾಗಿದೆ.
Sexಲಿಂಗ
Your BMI works out to 0.ನಿಮ್ಮ BMI ಅಂದಾಜು 0 ಆಗುತ್ತದೆ.
This affects the 2013 equation, and only that. What it does is spelled out with your result. The BMI cut points here are the Asian ones for everybody, ticked or not. This page is written for a readership in which risk starts rising at a lower BMI. The ordinary cut points would tell most of that readership they are in the clear, when the evidence says otherwise.ಇದು 2013ರ ಸಮೀಕರಣದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಅದೇನೆಂದು ನಿಮ್ಮ ಫಲಿತಾಂಶದ ಜೊತೆಗೇ ವಿವರಿಸುತ್ತೇವೆ. ನೀವು ಈ ಬಾಕ್ಸ್ ಗುರುತು ಹಾಕಿದರೂ ಬಿಟ್ಟರೂ, ನಾವಿಲ್ಲಿ ಬಳಸುವುದು ನಮ್ಮ ಏಷ್ಯಾದವರ ದೇಹಪ್ರಕೃತಿಗೆ ಹೊಂದುವ BMI ಮಿತಿಗಳನ್ನೇ. ಏಕೆಂದರೆ, ಪಾಶ್ಚಿಮಾತ್ಯರಿಗಿಂತ ನಮ್ಮಲ್ಲಿ ಕಡಿಮೆ ತೂಕದಲ್ಲೇ ಅಪಾಯದ ಮುನ್ಸೂಚನೆಗಳು ಶುರುವಾಗುತ್ತವೆ. ಅವರ ಸಾಮಾನ್ಯ ಮಿತಿಗಳನ್ನು ಬಳಸಿದರೆ, ಒಳಗೊಳಗೆ ತೊಂದರೆಯಿದ್ದರೂ ನಾವೆಲ್ಲ ಸೇಫ್ ಎಂಬ ಸುಳ್ಳು ಸಮಾಧಾನ ನಮಗೆ ಹುಟ್ಟಿಕೊಳ್ಳಬಹುದು.
2. Blood pressure, smoking and diabetes2. ರಕ್ತದೊತ್ತಡ, ಧೂಮಪಾನ ಮತ್ತು ಮಧುಮೇಹ
If your reading was 134 over 86, the upper number is 134.ನಿಮ್ಮ ಅಳತೆ 134/86 ಆಗಿದ್ದರೆ, ಮೇಲಿನ ಸಂಖ್ಯೆ 134.
3. Your cholesterol report3. ನಿಮ್ಮ ಕೊಲೆಸ್ಟ್ರಾಲ್ ವರದಿ
The first two are used to work out your risk. LDL and triglycerides are not part of that sum. They are still worth entering, because they often need something said about them on their own, whatever the percentage turns out to be.ಮೊದಲ ಎರಡು ಮಾಹಿತಿಗಳು ನಿಮ್ಮ ಹೃದಯದ ಅಪಾಯವನ್ನು ಲೆಕ್ಕ ಹಾಕಲು ಬೇಕು. LDL ಮತ್ತು ಟ್ರೈಗ್ಲಿಸರೈಡ್ ಆ ಲೆಕ್ಕಾಚಾರಕ್ಕೆ ನೇರವಾಗಿ ಬರದಿದ್ದರೂ, ಅವುಗಳನ್ನೂ ತುಂಬುವುದು ಒಳ್ಳೆಯದು. ಏಕೆಂದರೆ, ಅಪಾಯದ ಶೇಕಡಾವಾರು ಎಷ್ಟೇ ಬರಲಿ, ಈ ಎರಡೂ ಅಂಶಗಳ ಬಗ್ಗೆ ಪ್ರತ್ಯೇಕವಾಗಿ ಗಮನ ಹರಿಸಲೇಬೇಕಾಗುತ್ತದೆ.
Leave blank if your report does not give it. We work it out from the other three using the Sampson equation. That is more accurate than the older method, and it holds up to a triglyceride of 800.ನಿಮ್ಮ ವರದಿಯಲ್ಲಿ ಈ ಅಂಶವಿಲ್ಲದಿದ್ದರೆ ಹಾಗೆಯೇ ಖಾಲಿ ಬಿಡಿ. ಸ್ಯಾಂಪ್ಸನ್ ಸಮೀಕರಣ ಬಳಸಿ ನಿಮ್ಮ ಉಳಿದ ವರದಿಗಳಿಂದ ನಾವೇ ಲೆಕ್ಕ ಹಾಕುತ್ತೇವೆ. ಇದು ಹಳೆಯ ವಿಧಾನಕ್ಕಿಂತ ಹೆಚ್ಚು ನಿಖರ, ಮತ್ತು ಟ್ರೈಗ್ಲಿಸರೈಡ್ 800ರವರೆಗೂ ಸರಿಯಾಗಿ ಕೆಲಸ ಮಾಡುತ್ತದೆ.
4. Kidney and blood sugar4. ಕಿಡ್ನಿ ಮತ್ತು ರಕ್ತದ ಸಕ್ಕರೆ
Optional, and it matters more than it sounds. With a kidney result we can use the 2024 equation, which is better calibrated and needs no ancestry adjustment at all. Without it we fall back to one from 2013.ಇದು ಕಡ್ಡಾಯವಲ್ಲ, ಆದರೆ ಕೇಳಲು ಸಣ್ಣ ವಿಷಯದಂತೆ ಕಂಡರೂ ಇದರ ಪಾತ್ರ ದೊಡ್ಡದು. ನಿಮ್ಮ ಕಿಡ್ನಿ ಕಾರ್ಯಕ್ಷಮತೆಯ ವರದಿ ಇದ್ದರೆ, ನಾವು 2024ರ ಹೊಸ ಮತ್ತು ಹೆಚ್ಚು ನಿಖರವಾದ ಸಮೀಕರಣ ಬಳಸಬಹುದು. ಅದಿಲ್ಲದಿದ್ದರೆ, ಮತ್ತೆ 2013ರ ಹಳೆಯ ಲೆಕ್ಕಾಚಾರಕ್ಕೇ ಮರಳಬೇಕಾಗುತ್ತದೆ.
If you fill both, the eGFR from the report is used.ಎರಡನ್ನೂ ತುಂಬಿದ ಪಕ್ಷದಲ್ಲಿ, ನಿಮ್ಮ ವರದಿಯಲ್ಲಿರುವ eGFR ಅನ್ನೇ ನಾವು ಪರಿಗಣಿಸುತ್ತೇವೆ.
From your creatinine, your eGFR works out to about 0.ನಿಮ್ಮ ಕ್ರಿಯೇಟಿನಿನ್ ಪ್ರಕಾರ ನಿಮ್ಮ eGFR ಸುಮಾರು 0 ಆಗುತ್ತದೆ.
Or the two urine values separatelyಅಥವಾ ಮೂತ್ರ ಪರೀಕ್ಷೆಯ ಎರಡೂ ವರದಿಗಳನ್ನು ಪ್ರತ್ಯೇಕವಾಗಿ
The urine test and the HbA1c both change the calculation. If you enter either, we use the version of the 2024 equation built to take it. The urine result gives the most accurate estimate this page can give you, and if you enter both, that is the one used.ಮೂತ್ರದ ಪರೀಕ್ಷೆ ಮತ್ತು HbA1c – ಇವೆರಡೂ ಲೆಕ್ಕಾಚಾರವನ್ನು ಇನ್ನಷ್ಟು ನಿಖರವಾಗಿಸುತ್ತವೆ. ಇವೆರಡರಲ್ಲಿ ನೀವು ಯಾವುದನ್ನು ಕೊಟ್ಟರೂ, ಅದಕ್ಕೆ ತಕ್ಕಂತೆ 2024ರ ಸಮೀಕರಣದ ಹೊಸ ಆವೃತ್ತಿಯನ್ನೇ ನಾವು ಬಳಸುತ್ತೇವೆ. ಅದರಲ್ಲೂ ಮೂತ್ರದ ವರದಿ ಕೊಟ್ಟರೆ, ಈ ಪುಟ ಕೊಡಬಹುದಾದ ಅತ್ಯಂತ ನಿಖರವಾದ ಅಂದಾಜು ನಿಮಗೆ ಸಿಗುತ್ತದೆ. ಎರಡನ್ನೂ ಒಟ್ಟಿಗೆ ಕೊಟ್ಟರೆ, ಮೂತ್ರದ ಆವೃತ್ತಿಯನ್ನೇ ನಾವು ಪರಿಗಣಿಸುತ್ತೇವೆ.
5. Heart CT scan, if you have had one5. ಹೃದಯದ CT ಸ್ಕ್ಯಾನ್, ನೀವು ಮಾಡಿಸಿದ್ದರೆ
A score of zero is a real and useful result. If that is what your scan showed, enter 0 rather than leaving it blank. This score is discussed alongside your result, but it does not change the percentage. The calculators used here were not built to take it.ಶೂನ್ಯ ಸ್ಕೋರ್ ಎನ್ನುವುದು ಕೂಡ ನಿಮ್ಮ ಆರೋಗ್ಯದ ಬಗ್ಗೆ ಸ್ಪಷ್ಟ ಭರವಸೆ ನೀಡುವ ಬಹಳ ಮುಖ್ಯ ಫಲಿತಾಂಶ. ನಿಮ್ಮ ಸ್ಕ್ಯಾನ್ ವರದಿಯಲ್ಲಿ ಶೂನ್ಯವಿದ್ದರೆ ದಯವಿಟ್ಟು 0 ಎಂದೇ ನಮೂದಿಸಿ, ಖಾಲಿ ಬಿಡಬೇಡಿ. ಇದು ನಿಮ್ಮ ಶೇಕಡಾವಾರು ಅಪಾಯದ ಸಂಖ್ಯೆಯನ್ನು ಬದಲಿಸದಿದ್ದರೂ, ಇದರ ಬಗ್ಗೆ ಒಂದು ಪ್ರತ್ಯೇಕ ಹಾಗೂ ಆಪ್ತ ಟಿಪ್ಪಣಿಯನ್ನು ಫಲಿತಾಂಶದ ಜೊತೆಗೆ ನಿಮಗೆ ನೀಡುತ್ತೇವೆ.
6. Special cholesterol and other tests6. ವಿಶೇಷ ಕೊಲೆಸ್ಟ್ರಾಲ್ ಮತ್ತು ಇತರ ಪರೀಕ್ಷೆಗಳು
Enter these only if your doctor has tested them. Most people will not have them, and the calculator works perfectly well without them. None of these changes the risk figure, but each is worth a comment of its own.ನಿಮ್ಮ ವೈದ್ಯರು ನಿರ್ದಿಷ್ಟವಾಗಿ ಸೂಚಿಸಿ ಈ ಪರೀಕ್ಷೆಗಳನ್ನು ಮಾಡಿಸಿದ್ದರೆ ಮಾತ್ರ ಇವನ್ನು ತುಂಬಿ. ಬಹುಪಾಲು ಜನರ ಬಳಿ ಇವು ಇರುವುದಿಲ್ಲ, ಮತ್ತು ಇವಿಲ್ಲದೆಯೂ ಈ ಪುಟ ಯಾವ ತೊಂದರೆಯಿಲ್ಲದೆ ಕೆಲಸ ಮಾಡುತ್ತದೆ. ಇವು ನಿಮ್ಮ ಅಂತಿಮ ಅಪಾಯದ ಶೇಕಡಾವಾರು ಸಂಖ್ಯೆಯನ್ನು ಬದಲಿಸುವುದಿಲ್ಲವಾದರೂ, ಪ್ರತಿಯೊಂದರ ಬಗ್ಗೆಯೂ ನಾವು ಪ್ರತ್ಯೇಕವಾಗಿ ಹೇಳಬೇಕಾದ ವಿಚಾರಗಳಿರುತ್ತವೆ.
An inherited kind of cholesterol, measured once in a lifetime. Check the unit on your report. 50 mg/dL and 125 nmol/L mean the same thing. Entering one as the other gives a very different answer.ಇದು ನಮ್ಮ ಹಿರಿಯರಿಂದ ರಕ್ತಗತವಾಗಿ ಬರುವ ಕೊಲೆಸ್ಟ್ರಾಲ್. ಜೀವಮಾನದಲ್ಲಿ ಒಮ್ಮೆ ಪರೀಕ್ಷಿಸಿದರೆ ಸಾಕು. ವರದಿಯಲ್ಲಿ ಅಳತೆಯ ಏಕಮಾನವನ್ನು (unit) ದಯವಿಟ್ಟು ಗಮನಿಸಿ. 50 mg/dL ಹಾಗೂ 125 nmol/L ಎರಡಕ್ಕೂ ಒಂದೇ ಅರ್ಥ. ಒಂದನ್ನು ಇನ್ನೊಂದೆಂದು ತಪ್ಪಾಗಿ ನಮೂದಿಸಿದರೆ, ನಿಮ್ಮ ಫಲಿತಾಂಶ ತೀರಾ ದಿಕ್ಕು ತಪ್ಪಬಹುದು.
Counts the particles that lodge in artery walls.ರಕ್ತನಾಳದ ಗೋಡೆಯಲ್ಲಿ ಸಿಕ್ಕಿಕೊಳ್ಳುವ ಕಣಗಳನ್ನು ಎಣಿಸುತ್ತದೆ.
The protective counterpart to ApoB.ApoB ಗೆ ವಿರುದ್ಧವಾದ, ನಮಗೆ ರಕ್ಷಣೆ ಕೊಡುವ ಕಣ.
Rises with any recent infection or fever, so test when well.ಇತ್ತೀಚಿನ ಸೋಂಕು ಅಥವಾ ಜ್ವರವಿದ್ದರೂ ಇದು ಏರಬಹುದು, ಹಾಗಾಗಿ ನೀವು ಸಂಪೂರ್ಣ ಗುಣಮುಖರಾದ ಮೇಲೆಯೇ ಪರೀಕ್ಷಿಸಿ.
Often raised when vitamin B12 is low.ದೇಹದಲ್ಲಿ ವಿಟಮಿನ್ B12 ಕಡಿಮೆ ಇದ್ದಾಗ ಸಾಮಾನ್ಯವಾಗಿ ಇದು ಹೆಚ್ಚಿರುತ್ತದೆ.
Please check one of the numbers you enteredನೀವು ಕೊಟ್ಟ ಒಂದು ಸಂಖ್ಯೆಯನ್ನು ದಯವಿಟ್ಟು ಒಮ್ಮೆ ಪರಿಶೀಲಿಸಿ
We are not going to show you a numberನಾವು ನಿಮಗೆ ಯಾವುದೇ ಅಂದಾಜು ಸಂಖ್ಯೆಯನ್ನು ತೋರಿಸುತ್ತಿಲ್ಲ
What to ask for: a fasting lipid profile and a serum creatinine. Both are ordinary tests, widely available and inexpensive. Take the report to your doctor rather than to this page first.ಏನು ಕೇಳಬೇಕು: ಉಪವಾಸವಿದ್ದು ಮಾಡುವ ಲಿಪಿಡ್ ಪ್ರೊಫೈಲ್ (Fasting Lipid Profile) ಮತ್ತು ಸೀರಮ್ ಕ್ರಿಯೇಟಿನಿನ್. ಇವೆರಡೂ ಸಾಮಾನ್ಯ ರಕ್ತ ಪರೀಕ್ಷೆಗಳು, ಎಲ್ಲೆಡೆ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಸಿಗುತ್ತವೆ. ನೆನಪಿರಲಿ, ವರದಿ ಬಂದಮೇಲೆ ಅದನ್ನು ಮೊದಲು ನಿಮ್ಮ ವೈದ್ಯರಿಗೆ ತೋರಿಸಿ, ಆಮೇಲೆ ಈ ಪುಟಕ್ಕೆ ಬನ್ನಿ.
Your health profile:ನಿಮ್ಮ ಆರೋಗ್ಯದ ಚಿತ್ರಣ:
0.0%
Estimated heart and vessel ageಹೃದಯ ಮತ್ತು ರಕ್ತನಾಳಗಳ ಅಂದಾಜು ವಯಸ್ಸು
This is the age at which somebody with every reading in the ideal range would carry the risk you carry now. It is a way of making a percentage easier to feel. It says nothing about how long anyone will live.ನಿಮ್ಮ ಎಲ್ಲ ಅಳತೆಗಳೂ ಆದರ್ಶ ವ್ಯಾಪ್ತಿಯಲ್ಲಿರುವ ವ್ಯಕ್ತಿಯೊಬ್ಬನಿಗೆ ಈಗ ನಿಮಗಿರುವಷ್ಟೇ ಅಪಾಯ ಬರುವ ವಯಸ್ಸು ಇದು. ಇದು ಶೇಕಡಾವಾರು ಸಂಖ್ಯೆಯೆಂಬ ಒಣ ಲೆಕ್ಕವನ್ನು ನಮ್ಮ ವಾಸ್ತವದ ಅನುಭವಕ್ಕೆ ತರುವ ಒಂದು ದಾರಿಯೇ ಹೊರತು, ನೀವು ಇಷ್ಟು ಕಾಲವೇ ಬದುಕುತ್ತೀರಿ ಎಂದು ಹೇಳುವ ಭವಿಷ್ಯವಾಣಿಯಲ್ಲ.
A closer look at your reportsನಿಮ್ಮ ವರದಿಗಳ ಹತ್ತಿರದ ನೋಟ
These comments come from the individual values you entered. None of them changes the percentage above. Several of them matter regardless of what that percentage says.ಈ ಟಿಪ್ಪಣಿಗಳು ನೀವು ಒದಗಿಸಿದ ಪ್ರತ್ಯೇಕ ಸಂಖ್ಯೆಗಳಿಂದ ಹುಟ್ಟಿದವು. ಇವು ಯಾವುದೂ ನಿಮ್ಮ ಮೇಲಿನ ಶೇಕಡಾವಾರು ಅಪಾಯದ ಸಂಖ್ಯೆಯನ್ನು ಬದಲಿಸುವುದಿಲ್ಲ. ಆದರೆ ಆ ಸಂಖ್ಯೆ ಎಷ್ಟೇ ಇರಲಿ, ಇಲ್ಲಿ ಹೇಳಿರುವ ಹಲವು ವಿಚಾರಗಳ ಕಡೆಗೆ ನೀವು ಗಮನಹರಿಸಲೇಬೇಕಾಗುತ್ತದೆ.
Which calculator was used, and whyಯಾವ ಲೆಕ್ಕಾಚಾರ ಬಳಸಲಾಯಿತು, ಮತ್ತು ಏಕೆ?
What to do about itಇದರ ಬಗ್ಗೆ ಮುಂದೇನು ಮಾಡಬೇಕು?
What this tool is actually estimatingಈ ಪುಟ ನಿಜವಾಗಿ ಏನನ್ನು ಅಂದಾಜು ಮಾಡುತ್ತಿದೆ?
It gives one number. Take 100 people of your age and sex, with your readings. The number is roughly how many of them would have a heart attack or a stroke in the next ten years. It says something about a group of people like you. It is not a prediction about you. Nobody can say which of the hundred it will be, and a low number is not a promise.
ಇದು ಕೇವಲ ಒಂದು ಸಂಖ್ಯೆಯನ್ನು ನೀಡುತ್ತದೆ. ನಿಮ್ಮ ವಯಸ್ಸು, ಲಿಂಗ ಹಾಗೂ ವರದಿಗಳನ್ನೇ ಹೊಂದಿರುವ 100 ಜನರನ್ನು ನಾವು ಒಟ್ಟಿಗೆ ನಿಲ್ಲಿಸಿದರೆ, ಮುಂದಿನ ಹತ್ತು ವರ್ಷಗಳಲ್ಲಿ ಅವರಲ್ಲಿ ಸರಿಸುಮಾರು ಎಷ್ಟು ಜನರಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು (ಸ್ಟ್ರೋಕ್) ಸಂಭವಿಸಬಹುದು ಎಂಬುದನ್ನಷ್ಟೇ ಈ ಪುಟ ಅಂದಾಜು ಮಾಡುತ್ತದೆ. ಇದು ನಿಮ್ಮಂಥವರ ಒಂದು ಗುಂಪಿನ ಬಗ್ಗೆ ಹೇಳುತ್ತದೆಯೇ ಹೊರತು, ನಿಮ್ಮೊಬ್ಬರ ಬಗ್ಗೆ ಭವಿಷ್ಯ ಹೇಳುವುದಿಲ್ಲ. ಆ ನೂರು ಜನರಲ್ಲಿ ಯಾರು ಎಂಬುದನ್ನು ಯಾರೂ ನಿಖರವಾಗಿ ಹೇಳಲಾರರು. ಹಾಗಾಗಿ, ಸಂಖ್ಯೆ ಕಡಿಮೆಯಿದೆ ಎಂದು ನೆಮ್ಮದಿಯಿಂದ ನಿರ್ಲಕ್ಷ್ಯ ಮಾಡುವಂತಿಲ್ಲ; ಅದೊಂದು ನೂರಕ್ಕೆ ನೂರು ಪಾಲಿನ ಭರವಸೆಯೂ ಅಲ್ಲ.
Why filling in more gives a better answerಹೆಚ್ಚು ವಿವರಗಳನ್ನು ನೀಡಿದಷ್ಟೂ ಉತ್ತರ ಏಕೆ ನಿಖರವಾಗುತ್ತದೆ?
The tool picks the best equation it can run with what you have given it, and tells you which one it used. A cholesterol report alone lets it use one equation. Adding a creatinine lets it use a newer and better one. Adding a urine albumin or an HbA1c sharpens that further. Nothing is guessed. A blank is treated as unknown, never as zero.
ನೀವು ಕೊಟ್ಟಿರುವ ಮಾಹಿತಿಯಿಂದ ನಡೆಸಲು ಸಾಧ್ಯವಿರುವ ಅತ್ಯುತ್ತಮ ಸಮೀಕರಣವನ್ನು ಈ ಪುಟವೇ ಆರಿಸಿಕೊಳ್ಳುತ್ತದೆ, ಮತ್ತು ಯಾವುದನ್ನು ಬಳಸಿತು ಎಂಬುದನ್ನೂ ನಿಮಗೆ ಸ್ಪಷ್ಟವಾಗಿ ಹೇಳುತ್ತದೆ. ಕೇವಲ ಕೊಲೆಸ್ಟ್ರಾಲ್ ವರದಿ ಇದ್ದರೆ ಒಂದು ಸಮೀಕರಣ. ಅದರ ಜೊತೆಗೆ ಕ್ರಿಯೇಟಿನಿನ್ ಸೇರಿಸಿದರೆ ಮತ್ತಷ್ಟು ಹೊಸ ಮತ್ತು ಉತ್ತಮ ಸಮೀಕರಣ. ಮೂತ್ರದ ಅಲ್ಬುಮಿನ್ ಅಥವಾ HbA1c ಸೇರಿಸಿದರೆ ಅಂದಾಜು ಇನ್ನಷ್ಟು ಸೂಕ್ಷ್ಮವಾಗುತ್ತದೆ. ಇಲ್ಲಿ ನಾವು ಯಾವುದನ್ನೂ ಕಲ್ಪನೆ ಮಾಡಿಕೊಳ್ಳುವುದಿಲ್ಲ; ನೀವು ನೀಡದ ಮಾಹಿತಿಯನ್ನು 'ತಿಳಿದಿಲ್ಲ' ಎಂದು ಪರಿಗಣಿಸುತ್ತೇವೆಯೇ ಹೊರತು 'ಸೊನ್ನೆ' ಎಂದಲ್ಲ.
Why your result may be adjusted for South Asian ancestryದಕ್ಷಿಣ ಏಷ್ಯಾ ಮೂಲಕ್ಕಾಗಿ ನಿಮ್ಮ ಫಲಿತಾಂಶವೇಕೆ ಬದಲಾಗಬಹುದು?
These equations were built mainly on people in the United States. People of South Asian origin get heart disease earlier, and at lower cholesterol levels, than those groups do. So if the older equation is used, and you have said you are of South Asian origin, this tool raises the answer by a fifth. That adjustment is ours, not theirs. It is stated plainly with your result, because research has not settled on the right size for it.
ಈ ಮೂಲ ಸಮೀಕರಣಗಳನ್ನು ಹೆಚ್ಚಾಗಿ ಅಮೆರಿಕದ ಜನರ ಆರೋಗ್ಯದ ಆಧಾರದ ಮೇಲೆ ರೂಪಿಸಲಾಗಿದೆ. ಆದರೆ ದಕ್ಷಿಣ ಏಷ್ಯಾ ಮೂಲದವರಾದ ನಮ್ಮಲ್ಲಿ, ಆ ಗುಂಪುಗಳಿಗಿಂತ ಮೊದಲೇ ಹಾಗೂ ಕಡಿಮೆ ಕೊಲೆಸ್ಟ್ರಾಲ್ ಮಟ್ಟದಲ್ಲೇ ಹೃದಯದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಹಳೆಯ ಸಮೀಕರಣ ಬಳಸುವಾಗ ನೀವು ದಕ್ಷಿಣ ಏಷ್ಯಾ ಮೂಲದವರೆಂದು ಗುರುತು ಹಾಕಿದ್ದರೆ, ಈ ಪುಟ ನಿಮ್ಮ ಅಪಾಯವನ್ನು 1.2 ಪಟ್ಟು (ಐದನೇ ಒಂದು ಭಾಗ) ಹೆಚ್ಚಿಸಿ ತೋರಿಸುತ್ತದೆ. ಈ ಹೊಂದಾಣಿಕೆ ನಮ್ಮ ವೈದ್ಯಕೀಯ ಜವಾಬ್ದಾರಿಯೇ ಹೊರತು ಮೂಲ ಲೇಖಕರದ್ದಲ್ಲ. ಇದನ್ನು ನಿಮ್ಮ ಫಲಿತಾಂಶದ ಜೊತೆಗೇ ಸ್ಪಷ್ಟವಾಗಿ ಹೇಳುತ್ತೇವೆ.
Things this tool cannot doಈ ಪುಟದ ಮಿತಿಗಳು (ಇದು ಏನು ಮಾಡಲಾರದು)
It cannot tell you whether you are having a heart problem now. If you have chest pain, breathlessness, or pain spreading to the arm or jaw, stop reading this and get medical help immediately.ಈಗ ನಿಮಗೆ ಹೃದಯದ ತೊಂದರೆ ಇದೆಯೇ ಅಥವಾ ಇಲ್ಲವೇ ಎಂದು ಇದು ಹೇಳಲಾರದು. ನಿಮಗೆ ಎದೆನೋವು, ಉಸಿರಾಟದ ತೊಂದರೆ, ಅಥವಾ ಎಡತೋಳು, ದವಡೆಗೆ ಹರಡುವ ನೋವು ಇದ್ದರೆ ದಯವಿಟ್ಟು ಇದನ್ನು ಓದುವುದನ್ನು ತಕ್ಷಣ ನಿಲ್ಲಿಸಿ. ಮೊದಲು ಆಸ್ಪತ್ರೆಗೆ ಹೋಗಿ, ವೈದ್ಯಕೀಯ ಸಹಾಯ ಪಡೆಯಿರಿ.
It cannot replace a doctor examining you. Two people with the same numbers can need quite different advice.ಇದು ನಿಮ್ಮ ವೈದ್ಯರು ನಿಮ್ಮನ್ನು ಎದುರಿಟ್ಟುಕೊಂಡು ತಪಾಸಣೆ ಮಾಡುವುದಕ್ಕೆ ಎಂದಿಗೂ ಪರ್ಯಾಯವಾಗಲಾರದು. ಕಾಗದದ ಮೇಲೆ ಒಂದೇ ರೀತಿಯ ಸಂಖ್ಯೆಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳಿಗೂ, ನಿಜ ಜೀವನದಲ್ಲಿ ಬೇರೆ ಬೇರೆಯದೇ ಆದ ವೈದ್ಯಕೀಯ ಸಲಹೆಯ ಅಗತ್ಯವಿರಬಹುದು.
It does not know your family history, your waist measurement, how much you move, or what you eat. All of those matter and none of them is in the equations.ನಿಮ್ಮ ಕುಟುಂಬದ ಆರೋಗ್ಯದ ಇತಿಹಾಸ, ನಿಮ್ಮ ಸೊಂಟದ ಸುತ್ತಳತೆ, ನಿಮ್ಮ ದಿನನಿತ್ಯದ ನಡಿಗೆ, ಹಾಗೂ ನಿಮ್ಮ ಊಟದ ತಟ್ಟೆ: ಇವೆಲ್ಲವೂ ಹೃದಯದ ಆರೋಗ್ಯದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ. ಆದರೆ ಈ ಪುಟದ ಯಂತ್ರದ ಲೆಕ್ಕಾಚಾರಗಳಿಗೆ ಇವ್ಯಾವುದರ ಅರಿವೂ ಇರುವುದಿಲ್ಲ.
If you have already had a heart attack or a stroke, this tool does not apply to you at all. These equations are for people who have not had one.ನಿಮಗೆ ಈಗಾಗಲೇ ಒಮ್ಮೆ ಹೃದಯಾಘಾತ ಅಥವಾ ಪಾರ್ಶ್ವವಾಯು ಆಗಿದ್ದರೆ, ಈ ಲೆಕ್ಕಾಚಾರ ನಿಮಗೆ ಅನ್ವಯಿಸುವುದೇ ಇಲ್ಲ. ಈ ಲೆಕ್ಕಾಚಾರಗಳು ಇರುವುದು, ಹಿಂದೆಂದೂ ಇಂತಹ ತೊಂದರೆಗೆ ತುತ್ತಾಗದವರಿಗಾಗಿ ಮಾತ್ರ.
Where the numbers come fromಈ ಸಂಖ್ಯೆಗಳ ಹಿಂದಿರುವ ವೈದ್ಯಕೀಯ ಆಧಾರಗಳೇನು?
PREVENT (2024). Khan SS and colleagues, Circulation 2024;149:430-449. Used when you give both a cholesterol and a kidney result. By design it does not use race or ethnicity. The figure shown is its hard ASCVD outcome, which is heart attack and stroke. It is not its total cardiovascular disease outcome, which also counts heart failure. Two further versions of the same equation are used when you have the extra test: PREVENT with urine ACR and PREVENT with HbA1c. Both come from the same paper and its supplemental tables. If you enter both tests, the urine version is the one used.PREVENT (2024). Khan SS ಮತ್ತು ಸಹೋದ್ಯೋಗಿಗಳು, Circulation 2024;149:430-449. ನೀವು ಕೊಲೆಸ್ಟ್ರಾಲ್ ಮತ್ತು ಕಿಡ್ನಿ ಎರಡರ ಫಲಿತಾಂಶವನ್ನೂ ಕೊಟ್ಟಾಗ ಇದನ್ನು ಬಳಸಲಾಗುತ್ತದೆ. ಇದು ಯಾವುದೇ ಜನಾಂಗೀಯ ಭೇದವನ್ನು ಪರಿಗಣಿಸುವುದಿಲ್ಲ. ಇಲ್ಲಿ ತೋರಿಸುವ ಸಂಖ್ಯೆ ಅದರ hard ASCVD ಫಲಿತಾಂಶ, ಅಂದರೆ ಹೃದಯಾಘಾತ ಮತ್ತು ಪಾರ್ಶ್ವವಾಯು. ಹೃದಯ ವೈಫಲ್ಯವನ್ನೂ ಸೇರಿಸುವ ಒಟ್ಟು ಹೃದಯರಕ್ತನಾಳದ ಕಾಯಿಲೆಯ ಫಲಿತಾಂಶವನ್ನಲ್ಲ. ಹೆಚ್ಚಿನ ಪರೀಕ್ಷೆ ನಿಮ್ಮ ಬಳಿ ಇದ್ದಾಗ ಇದೇ ಸಮೀಕರಣದ ಇನ್ನೆರಡು ಆವೃತ್ತಿಗಳನ್ನು ಬಳಸುತ್ತೇವೆ: uACR ಸೇರಿಸಿದ PREVENT ಮತ್ತು HbA1c ಸೇರಿಸಿದ PREVENT. ಇವೆರಡೂ ಅದೇ ಲೇಖನ ಮತ್ತು ಅದರ ಪೂರಕ ಕೋಷ್ಟಕಗಳಿಂದ ಬಂದವು. ಎರಡೂ ಪರೀಕ್ಷೆಗಳನ್ನು ಕೊಟ್ಟರೆ ಮೂತ್ರದ ಆವೃತ್ತಿಯನ್ನು ಬಳಸುತ್ತೇವೆ.
Pooled Cohort Equations (2013). Goff DC Jr and colleagues, Circulation 2014;129(25 Suppl 2):S49-73. Used when there is no kidney result. Where you have said you are of South Asian ancestry we multiply its answer by 1.2. That multiplication is ours, not theirs. It is not in the published equation, and research does not agree on the right size for it.ಪೂಲ್ಡ್ ಕೊಹಾರ್ಟ್ ಸಮೀಕರಣ (2013). Goff DC Jr ಮತ್ತು ಸಹೋದ್ಯೋಗಿಗಳು, Circulation 2014;129(25 Suppl 2):S49-73. ಕಿಡ್ನಿ ಫಲಿತಾಂಶ ಇಲ್ಲದಿದ್ದಾಗ ಇದನ್ನು ಬಳಸಲಾಗುತ್ತದೆ. ದಕ್ಷಿಣ ಏಷ್ಯಾ ಮೂಲದವರಿಗೆ ಅನ್ವಯಿಸಲು ಇದರ ಉತ್ತರವನ್ನು 1.2ರಿಂದ ಗುಣಿಸುತ್ತೇವೆ. ಈ ಗುಣಾಕಾರ ನಮ್ಮದೇ ವೈದ್ಯಕೀಯ ನಿರ್ಣಯ, ಇದು ಮೂಲ ಸಮೀಕರಣದ ಭಾಗವಲ್ಲ. ಇದು ಪ್ರಕಟಿತ ಸಮೀಕರಣದಲ್ಲಿಲ್ಲ, ಮತ್ತು ಎಷ್ಟು ಹೆಚ್ಚಿಸಬೇಕು ಎಂಬುದರ ಬಗ್ಗೆ ಸಂಶೋಧನೆಗಳಲ್ಲಿ ಒಮ್ಮತವಿಲ್ಲ.
eGFR is worked out from your creatinine with the 2021 CKD-EPI equation, which does not use race. LDL, when your report does not give it, is worked out by the Sampson equation. The evidence behind the 2026 guideline found it about twice as accurate as the older Friedewald method. It holds up to a triglyceride of 800 mg/dL. Above that we leave the LDL blank rather than print a number we do not trust. Source: Sampson M and colleagues, JAMA Cardiology 2020.eGFR ಅನ್ನು ನಿಮ್ಮ ಕ್ರಿಯೇಟಿನಿನ್ ವರದಿಯಿಂದ 2021ರ CKD-EPI ಸಮೀಕರಣದ ಮೂಲಕ ಲೆಕ್ಕ ಹಾಕಲಾಗುತ್ತದೆ. ವರದಿಯಲ್ಲಿ LDL ಇಲ್ಲದಿದ್ದಾಗ ಅದನ್ನು ಸ್ಯಾಂಪ್ಸನ್ ಸಮೀಕರಣದಿಂದ (Sampson M ಮತ್ತು ಸಹೋದ್ಯೋಗಿಗಳು, JAMA Cardiology 2020) ನಾವು ಅಳೆಯುತ್ತೇವೆ. 2026ರ ಮಾರ್ಗಸೂಚಿಯ ಪ್ರಕಾರ ಇದು ಹಳೆಯ ಫ್ರೀಡ್‌ವಾಲ್ಡ್ ವಿಧಾನಕ್ಕಿಂತ ಸುಮಾರು ಎರಡು ಪಟ್ಟು ನಿಖರವಾಗಿದೆ. ಟ್ರೈಗ್ಲಿಸರೈಡ್ 800 mg/dL ಮೀರಿರುವಾಗ ಸುಳ್ಳು ಭರವಸೆ ನೀಡಬಾರದೆಂಬ ಕಾರಣಕ್ಕೆ ಈ ಸಂಖ್ಯೆಯನ್ನು ನಾವು ಖಾಲಿ ಬಿಡುತ್ತೇವೆ.
The calcium score is discussed but never fed into a risk figure. The calculators used here were not built to take it. Feeding it into one that was not designed for it would give a number with nothing behind it.ಕ್ಯಾಲ್ಸಿಯಂ ಸ್ಕೋರ್ ಬಗ್ಗೆ ನಾವು ಪ್ರತ್ಯೇಕವಾಗಿ ಚರ್ಚಿಸುತ್ತೇವೆಯೇ ಹೊರತು, ಅದನ್ನು ಅಪಾಯದ ಶೇಕಡಾವಾರು ಲೆಕ್ಕಕ್ಕೆ ಸೇರಿಸುವುದಿಲ್ಲ. ಏಕೆಂದರೆ ಅದಕ್ಕಾಗಿ ವಿನ್ಯಾಸಗೊಳ್ಳದ ಸಮೀಕರಣಕ್ಕೆ ಅದನ್ನು ಸೇರಿಸಿದರೆ, ಆಧಾರವೇ ಇಲ್ಲದ ಸುಳ್ಳು ಸಂಖ್ಯೆ ಬರುತ್ತದೆ.
Abbreviations: BMI (Body Mass Index) · BP (Blood Pressure) · CT (Computed Tomography, a kind of X-ray scan) · eGFR (estimated Glomerular Filtration Rate, a measure of how well the kidneys filter) · HbA1c (average blood sugar over about three months) · HDL (High-Density Lipoprotein, the protective cholesterol) · LDL (Low-Density Lipoprotein, the harmful cholesterol) · Lp(a) (Lipoprotein little a, an inherited cholesterol particle) · ApoB (Apolipoprotein B, a count of the cholesterol particles that lodge in artery walls) · ApoA1 (Apolipoprotein A1, the protective counterpart to ApoB) · hsCRP (high-sensitivity C-Reactive Protein, a blood test for low-grade inflammation) · ASCVD (Atherosclerotic Cardiovascular Disease, meaning heart attack and stroke) · uACR (urine Albumin-to-Creatinine Ratio, a test for protein leaking into the urine) · mg/dL (milligrams per decilitre) · mmol/L (millimoles per litre) · nmol/L (nanomoles per litre)ಸಂಕ್ಷಿಪ್ತ ರೂಪಗಳು: BMI (ಎತ್ತರಕ್ಕೆ ತಕ್ಕ ತೂಕದ ಅಳತೆ) · BP (ರಕ್ತದೊತ್ತಡ) · CT (ಕಂಪ್ಯೂಟೆಡ್ ಟೊಮೊಗ್ರಫಿ: ಒಂದು ಬಗೆಯ ಎಕ್ಸ್-ರೇ ಸ್ಕ್ಯಾನ್) · eGFR (ಮೂತ್ರಪಿಂಡಗಳು ಎಷ್ಟು ಚೆನ್ನಾಗಿ ರಕ್ತವನ್ನು ಶೋಧಿಸುತ್ತವೆ ಎಂಬುದರ ಅಂದಾಜು ಅಳತೆ) · HbA1c (ಕಳೆದ ಮೂರು ತಿಂಗಳ ಸರಾಸರಿ ರಕ್ತದ ಸಕ್ಕರೆ) · HDL (ರಕ್ಷಣೆ ನೀಡುವ ಕೊಲೆಸ್ಟ್ರಾಲ್) · LDL (ಹಾನಿ ಮಾಡುವ ಕೊಲೆಸ್ಟ್ರಾಲ್) · Lp(a) (ಆನುವಂಶಿಕವಾಗಿ ಬರುವ ಒಂದು ಬಗೆಯ ಕೊಲೆಸ್ಟ್ರಾಲ್ ಕಣ) · ApoB (ರಕ್ತನಾಳದ ಗೋಡೆಯಲ್ಲಿ ಸಿಕ್ಕಿಕೊಳ್ಳುವ ಕೊಲೆಸ್ಟ್ರಾಲ್ ಕಣಗಳ ಎಣಿಕೆ) · ApoA1 (ApoB ಗೆ ವಿರುದ್ಧವಾದ, ನಮಗೆ ರಕ್ಷಣೆ ಕೊಡುವ ಕಣ) · hsCRP (ದೇಹದಲ್ಲಿ ಸಣ್ಣ ಪ್ರಮಾಣದ ಉರಿಯೂತ ಇದೆಯೇ ಎಂದು ತಿಳಿಯುವ ರಕ್ತ ಪರೀಕ್ಷೆ) · ASCVD (ರಕ್ತನಾಳ ಕಟ್ಟಿಕೊಳ್ಳುವುದರಿಂದ ಬರುವ ಕಾಯಿಲೆ: ಹೃದಯಾಘಾತ ಮತ್ತು ಪಾರ್ಶ್ವವಾಯು) · uACR (ಮೂತ್ರದಲ್ಲಿ ಪ್ರೋಟೀನ್ ಸೋರುತ್ತಿದೆಯೇ ಎಂದು ತಿಳಿಯುವ ಪರೀಕ್ಷೆ) · mg/dL (ಡೆಸಿಲೀಟರ್‌ಗೆ ಮಿಲಿಗ್ರಾಂ) · mmol/L (ಲೀಟರ್‌ಗೆ ಮಿಲಿಮೋಲ್) · nmol/L (ಲೀಟರ್‌ಗೆ ನ್ಯಾನೊಮೋಲ್)
Written and maintained by Dr Shashikiran Umakanth. The English on this page was last checked: 5 September 2026ಡಾ. ಶಶಿಕಿರಣ್ ಉಮಾಕಾಂತ್ ಅವರು ಬರೆದು ನಿರ್ವಹಿಸುತ್ತಿರುವ ಮಾಹಿತಿ. ಈ ಪುಟದ ಕನ್ನಡ ಪಠ್ಯವನ್ನು ಕೊನೆಯದಾಗಿ ಪರಿಶೀಲಿಸಿದ ದಿನಾಂಕ: 6 September 2026
Take the printed sheet to your doctor. Nothing is uploaded: the sheet is made on this device.ಮುದ್ರಿಸಿದ ಈ ಹಾಳೆಯನ್ನು ನಿಮ್ಮ ವೈದ್ಯರ ಬಳಿಗೆ ಒಯ್ಯಿರಿ. ನಿಮ್ಮ ಯಾವ ಮಾಹಿತಿಯೂ ಇಂಟರ್ನೆಟ್ಗೆ ಹೋಗುವುದಿಲ್ಲ: ಈ ಹಾಳೆಯು ನಿಮ್ಮ ಸಾಧನದಲ್ಲೇ ಸಿದ್ಧವಾಗುತ್ತದೆ.
This one sends the result to your account, where only you can see it. Everything you entered is encrypted before it is stored. The note is not: it is what the list is built from, so keep it short.ಇದು ಈ ಫಲಿತಾಂಶವನ್ನು ನಿಮ್ಮ ಖಾತೆಗೆ ಕಳುಹಿಸುತ್ತದೆ; ಅಲ್ಲಿ ಅದನ್ನು ನೀವು ಮಾತ್ರ ನೋಡಬಹುದು. ನೀವು ನಮೂದಿಸಿದ ಎಲ್ಲ ವಿವರಗಳನ್ನೂ ಸಂಗ್ರಹಿಸುವ ಮುನ್ನ ಸುರಕ್ಷಿತವಾಗಿ ಎನ್ಕ್ರಿಪ್ಟ್ ಮಾಡಲಾಗುತ್ತದೆ. ಟಿಪ್ಪಣಿಯನ್ನು ಮಾತ್ರ ಹಾಗೆ ಮಾಡುವುದಿಲ್ಲ, ಏಕೆಂದರೆ ಪಟ್ಟಿಯಲ್ಲಿ ಕಾಣಿಸುವುದು ಅದೇ. ಆದ್ದರಿಂದ ಅದನ್ನು ಸಾಧ್ಯವಾದಷ್ಟು ಚಿಕ್ಕದಾಗಿ ಇಡಿ.